Advertisement

ಗೋ ಕಳವು:ಕಣ್ಮುಚ್ಚಿ ಕುಳಿತ ಆಡಳಿತ

10:36 AM Feb 18, 2019 | Team Udayavani |

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗೋಹತ್ಯೆ ಹಾಗೂ ಗೋವುಗಳ ಕಳ್ಳತನ ಹೆಚ್ಚಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಆರೋಪಿಸಿದರು.

Advertisement

ಭಾನುವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ಹಾಗೂ ಗೋವುಗಳ ಕಳ್ಳತನ ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವುದು ನಿಜ. ಯಾರು ಗೋಹತ್ಯೆ ಮಾಡುತ್ತಿದ್ದಾರೆ ಮತ್ತು ಗೋ ಕಳ್ಳತನ ಮಾಡುತ್ತಿದ್ದಾರೆ ಅವರಿಗೆ ಈಗ ಬಂದಿರುವ ಸರ್ಕಾರ ನಮ್ಮದು, ಶಾಸಕರು ನಮ್ಮವರು, ನಾವು ಏನು ಬೇಕಾದರೂ ಮಾಡಬಹುದು ಎಂಬ ಮನಃಸ್ಥಿತಿಗೆ ಬಂದಿರುವುದರಿಂದ ಮನೆ ಹಾಗೂ ದೇವಾಲಯದ ಸಮೀಪ, ಬಸ್‌ ನಿಲ್ದಾಣದ ಹತ್ತಿರವಿರುವ ಬೀಡಾಡಿ ಹಸುಗಳನ್ನು ಕದ್ದು, ಸಾಗಿಸುತ್ತಿರುವುದು ನೋಡುತ್ತಿದ್ದೇವೆ ಎಂದರು.

ತಾಲೂಕು ಆಡಳಿತದ ವಿರುದ್ಧ ಶೃಂಗೇರಿ ತಾಲೂಕು ಕಚೇರಿ ಎದರು ಪ್ರತಿಭಟನೆ ಮಾಡುತ್ತೇವೆಂದು ಪೊಲೀಸ್‌ ಇಲಾಖೆಯ ಅನುಮತಿ ಕೇಳಿದರೆ ತಾಲೂಕು ಕಚೇರಿಯಿಂದ ನೂರು ಮೀಟರ್‌ ದೂರದಲ್ಲಿ ಪ್ರತಿಭಟನೆ ಮಾಡುವಂತೆ ತಹಶೀಲ್ದಾರ್‌ ಹೇಳಿದ್ದಾರೆ ಎಂದು ಹಿಂಬರಹ ನೀಡುತ್ತಾರೆ.

ಪ್ರತಿಭಟನೆ ಹಮ್ಮಿಕೊಂಡಿರುವುದೇ ಶಾಸಕರು ಮತ್ತು ತಹಶೀಲ್ದಾರ್‌ ಲಂಚ ಪಡೆಯುತ್ತಿದ್ದಾರೆ ಎಂದು ಜನರು ಆರೋಪ ಮಾಡಿದ್ದರಿಂದ. ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಬೇಡಿ ಎಂದು ಹಿಂಬರಹ ನೀಡುತ್ತಾರೆ ಎಂದರೆ ಪಶ್ವಿ‌ಮ ಬಂಗಾಳದ ಪರಿಸ್ಥಿತಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಹತ್ತಿರವಾಗಿದೆ ಎಂದು ಆರೋಪಿಸಿದರು.

ಗೋಕಳವು ಮಾಡುತ್ತಿರುವವರು ಮತ್ತು ಲಂಚದಲ್ಲಿ ತೊಡಗಿರುವವರು ಎಲ್ಲರೂ ಶಾಸಕರಿಗೆ ಹತ್ತಿರದವರು ಆಗಿರುವುದರಿಂದ ಈ ರೀತಿ ಘಟನೆ ನಡೆದಿದೆ. ಮೊನ್ನೆ ನಡೆದ ಘಟನೆಯಲ್ಲೂ ಬಹಳ ದೊಡ್ಡವರ ಪಾತ್ರ ಇರುವುದರಿಂದ ಪಾಪದ ಜನರ ಗೋವು ಕಳ್ಳತನ ಆಗಿದೆ. ಗೋ ಕಳ್ಳತನ
ಆಗಿದೆ ಎಂದು ದೂರು ನೀಡಿದವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ.

Advertisement

ಈ ಎಲ್ಲದರ ವಿರುದ್ಧ ಫೆ.19ರಂದು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆಗೆ ಪೊಲೀಸರು ಅನುಮತಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಅನುಮತಿ ನೀಡುತ್ತೋ ಇಲ್ಲವೋ ನೋಡಬೇಕೆಂದರು.

ಮಂಗನ ಕಾಯಿಲೆ ತಾಲೂಕಿನಲ್ಲಿ ಇನ್ನೂ ತೀವ್ರತೆ ಪಡೆದುಕೊಂಡಿಲ್ಲ, ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಾಗುವುದಿಂದ ಮಂಗನ ಕಾಯಿಲೆ ತಡೆಗೆ ಏನೇನು ಕ್ರಮ ಕೈಗೊಳ್ಳಬೇಕು ಆ ಕ್ರಮಗಳನ್ನು ತಗೆದುಕೊಳ್ಳುವಂತೆ ಒತ್ತಾಯಿಸಿದರು. 

ಗೋವು ಕಳ್ಳತನ ಮಾಡುತ್ತಿರುವ ಸಿಸಿ ಕ್ಯಾಮೆರಾ ಫುಟೇಜ್‌ಗಳನ್ನು ತೆಗೆದುಕೊಂಡು ಹೋಗಿ ಪೊಲೀಸರಿಗೆ ಕೊಟ್ಟಾಗಲೂ ಯಾರು ಗೋ ಕಳ್ಳತನ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳದ ಸ್ಥಿತಿ ನೋಡುತ್ತಿದ್ದೇವೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಒಂದು ರೀತಿ ಪಶ್ಚಿಮ ಬಂಗಾಳದ ರೀತಿ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಯೋಗಿ ಆದಿತ್ಯನಾಥ್‌, ಶಿವರಾಜ್‌ ಚೌಹಾಣ್‌ ಅವರಿಗೆ ಇಳಿಯಲು ಹಾಗೂ ಕಾರ್ಯಕ್ರಮ ಮಾಡಲು ಅವಕಾಶ ಕೊಡದಿರುವುದು ನೋಡಿದ್ದೇವೆ. ಅದೇ ಸ್ಥಿತಿ ಶೃಂಗೇರಿ ಕ್ಷೇತ್ರದಲ್ಲಿಯೂ ನಿರ್ಮಾಣವಾಗಿದೆ ಎಂದು ಜೀವರಾಜ್‌ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next