Advertisement

Bengaluru CCB Police ಹಸುಗೂಸು ಮಾರಾಟ ಜಾಲ ಪತ್ತೆ

01:02 AM Nov 29, 2023 | Team Udayavani |

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ನೂರಾರು ಗರ್ಭಪಾತ ಪ್ರಕರಣಗಳ ನಡುವೆಯೇ ಹಸುಗೂಸು ಗಳನ್ನು ಮಾರಾಟ ಮಾಡುವ ಕರಾಳ ದಂಧೆಯನ್ನು ಬೆಂಗ ಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಪೊಲೀಸರು ಬೇಧಿಸಿದ್ದಾರೆ.

Advertisement

ಮಕ್ಕಳ ಮಾರಾಟ ಮಾತ್ರವಲ್ಲದೆ ತಮಿಳುನಾಡು ಮತ್ತು ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಅಕ್ರಮವಾಗಿ ಅಂಡಾಣು ಗಳನ್ನು ಮಾರಾಟ ಮಾಡುತ್ತಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಮಹಾಲಕ್ಷ್ಮೀ, ತಮಿಳುನಾಡಿನ ಈರೋಡ್‌ ಮೂಲದ ಕಣ್ಣನ್‌ ರಾಮ ಸ್ವಾಮಿ, ಆತನ ಸಹಚರರಾದ ಗೋಮತಿ, ಹೇಮಲತಾ, ರಾಧಾ, ಸುಹಾಸಿನಿ, ಶರಣ್ಯ ಮತ್ತು ಮುರುಗೇಶ್ವರಿ ಎಂಬವರನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯ ಲಾಗಿದೆ. ಇದೇ ವೇಳೆ ಮುರುಗೇ ಶ್ವರಿಯ 20 ದಿನಗಳ ಗಂಡು ಮಗುವನ್ನು ರಕ್ಷಿಸಿ ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ತನಿಖೆಯಲ್ಲಿ ಆರೋಪಿಗಳು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದ ವಿವಿಧೆಡೆ ಮಾರಾಟ ಮಾಡಿರುವ 10 ಮಕ್ಕಳ ಪೋಷಕರ ವಿಳಾಸ ಪತ್ತೆ ಹಚ್ಚಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಮಾಹಿತಿ ನೀಡಿದರು.

ಆರೋಪಿಗಳ ಪೈಕಿ ತಮಿಳುನಾಡಿನ 6 ಮಹಿಳೆಯರು ಈ ಹಿಂದೆ ಐವಿಎಫ್ ಕೇಂದ್ರಗಳಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಆರೇಳು ವರ್ಷಗಳ ಹಿಂದೆ ಇವರು ಕೆಲಸ ಮಾಡುತ್ತಿದ್ದ 3 ಕೇಂದ್ರಗಳು ಅಕ್ರಮ ಚಟುವಟಿಕೆಗಳ ಆರೋಪದಿಂದ ಸ್ಥಗಿತಗೊಂಡಿದ್ದವು. ಹೀಗಾಗಿ ಎಲ್ಲರೂ ಕೆಲಸ ಬಿಟ್ಟಿದ್ದರು. ಬೆಂಗಳೂರಿನ ಮಹಾಲಕ್ಷ್ಮೀ ಕೂಡ ಇದೇ ವೃತ್ತಿಯಲ್ಲಿದ್ದಳು. ಹೀಗಾಗಿ ಆರೋಪಿಗಳು ಪರಸ್ಪರ ಸಂಪರ್ಕದಲ್ಲಿದ್ದರು.

ಕೆಲಸ ಬಿಟ್ಟ ಬಳಿಕ ಎಲ್ಲರೂ ತಮ್ಮ ಸಂಪರ್ಕದಲ್ಲಿದ್ದ ಮಕ್ಕಳಿಲ್ಲದ ಪೋಷಕರಿಗೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳಿಗೆ ಜನ್ಮ ನೀಡಿ, ಮಾರಾಟ ಮಾಡುತ್ತಿದ್ದರು. ಜತೆಗೆ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ಆಸ್ಪತ್ರೆಗಳಿಗೆ ತಮ್ಮ ಅಂಡಾಣುಗಳನ್ನು ಮಾರಾಟ ಮಾಡು ತ್ತಿದ್ದರು. ಅಲ್ಲದೆ ಬಡ ಮಹಿಳೆಯ ರನ್ನು ಪುಸಲಾಯಿಸಿ ಅವರ ಅಂಡಾಣು ಮಾರಾಟ ಮಾಡಿಸುವ ಮಧ್ಯವರ್ತಿಗಳಾಗಿಯೂ ಕೆಲಸ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಅಕ್ರಮ ದಂಧೆಯ ಹಿಂದೆ ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿಷ್ಠಿತ ವೈದ್ಯರು ಮತ್ತು ಆಸ್ಪತ್ರೆಗಳು ಭಾಗಿಯಾಗಿರುವುದು ಕಂಡುಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಹೇಳಿದರು.

Advertisement

ಹೆತ್ತಮ್ಮನಿಗೆ 2 ಲಕ್ಷ ರೂ. ಮಾತ್ರ
ಆರೋಪಿಗಳು ತಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಹಣಕಾಸಿನ ತೊಂದರೆ ಮತ್ತು ಮಕ್ಕಳನ್ನು ಸಾಕಲು ಕಷ್ಟ ಎಂದು ಭಾವಿಸಿ ಗರ್ಭಪಾತ ಮಾಡಿಸಲು ಆಸ್ಪತ್ರೆಗೆ ಬರುವ ಮಹಿಳೆಯರು, ದುಡಿಮೆ ಇಲ್ಲದ ಮಹಿಳೆಯರನ್ನು ಗರ್ಭ ಧರಿಸುವಂತೆ ಪ್ರೇರೇಪಿಸುತ್ತಿದ್ದರು. ಸಹಜ ಗರ್ಭದಾರಣೆ ಅಥವಾ ಕೃತಕ ಗರ್ಭ ಧಾರಣೆಯಾದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದರು. ಆ ಮಹಿಳೆಯರಿಗೆ ಒಂದಿಷ್ಟು ಹಣ ಕೊಟ್ಟು, ತಮ್ಮ ಮನೆ ಅಥವಾ ಪರಿಚಯಸ್ಥರ ಮನೆಯಲ್ಲೇ ಅವರನ್ನು 9 ತಿಂಗಳು ಆರೈಕೆ ಮಾಡಿ, ಮನೆ ಅಥವಾ ಪರಿಚಯಸ್ಥ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುತ್ತಿದ್ದರು. 20 25 ದಿನಗಳವರೆಗೆ ಮಗುವನ್ನು ತಾಯಿ ಬಳಿ ಬಿಟ್ಟು, ಅನಂತರ ಆಕೆಗೆ 2 2.5 ಲಕ್ಷ ರೂ. ಕೊಟ್ಟು ಮಗುವನ್ನು ಖರೀದಿಸುತ್ತಿದ್ದರು.

ಬಳಿಕ ಮಗುವಿನ ಫೋಟೋವನ್ನು ತಮ್ಮ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಶೇರ್‌ ಮಾಡುತ್ತಿದ್ದರು. ಆಗ ಮಧ್ಯವರ್ತಿಗಳು ತಮ್ಮ ಸಂಪರ್ಕದಲ್ಲಿರುವ ಮಕ್ಕಳಿಲ್ಲದ ಪೋಷಕರಿಗೆ ಫೋಟೋ ಕಳುಹಿಸಿ, ಮಗು ಖರೀದಿಗೆ ಕೋರುತ್ತಿದ್ದರು. ಮಗುವಿನ ಬಣ್ಣ, ಲಿಂಗ ತಿಳಿದ ಪೋಷಕರು ಮಗು ಖರೀದಿಗೆ ಮುಂದಾಗುತ್ತಿದ್ದರು ಎಂದು ಹೇಳಿದರು.

3 ತಿಂಗಳಲ್ಲಿ 242 ಗರ್ಭಪಾತ
ಬೆಂಗಳೂರು: ಹೆಣ್ಣುಭ್ರೂಣ ಹತ್ಯೆ ಪ್ರಕರಣದ ಆರೋಪಿಗಳು ಕಳೆದ ಮೂರು ತಿಂಗಳುಗಳಲ್ಲೇ 242 ಮಂದಿ ಗರ್ಭಿಣಿಯರಿಗೆ ಗರ್ಭಪಾತ ಮಾಡಿಸಿರುವುದು ಪತ್ತೆಯಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಹೇಳಿದರು. ಪ್ರಕರಣದಲ್ಲಿ ಮೈಸೂರಿನ ಇಬ್ಬರು ವೈದ್ಯರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಇನ್ನುಳಿದ ಇಬ್ಬರಿಗೆ ಶೋಧ ನಡೆಯುತ್ತಿದೆ. 242 ಗರ್ಭಪಾತ ಮಾಡಿರುವುದು ಆರೋಪಿಗಳ ಬಳಿ ದೊರೆತ ನೋಂದಣಿ ಪುಸ್ತಕ ಹಾಗೂ ಇತರ ದಾಖಲೆಗಳ ಮೂಲಕ ಸಾಬೀತಾ ಗಿದೆ. ತನಿಖೆ ನಡೆಯುತ್ತಿದೆ. ಗರ್ಭ ಪಾತ ಮಾಡಿಸಿಕೊಂಡ ಕೆಲವ ರನ್ನು ಪತ್ತೆ ಹಚ್ಚಿ ನೋಟಿಸ್‌ ಕೊಡ ಲಾಗಿದೆ. ಅವರಿಂದ ಹೇಳಿಕೆ ಪಡೆಯ ಲಾಗು ತ್ತದೆ ಎಂದು ಮಂಗಳವಾರ ಪತ್ರಿಕಾ ಗೋಷ್ಠಿ ಯಲ್ಲಿ ಅವರು ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next