Advertisement
ಒಂದು ವಾರಗಳ ಕಾಲ ನಡೆಯುವ ಈ ಪರಿಷೆಯಲ್ಲಿ ಸಿಂಧನೂರು, ರಾಯಚೂರು, ಗಂಗಾವತಿ, ಕೋಲಾರ, ಬಳ್ಳಾರಿ, ಸಿರುಗುಪ್ಪ,ಸೀಮಾಂದ್ರ ಪ್ರದೇಶದ ಕರ್ನೂಲು, ಪತ್ತಿಕೊಂಡ, ಆಲೂರು, ಆದೋನಿ, ಹೊಳಗುಂದ, ಕೋಸ್ಗಿ, ಹರಿವಾಣಂ, ಕೌತಾಳಂ ಮತ್ತು ತಾಲೂಕಿನ ರಾರಾವಿ, ಬಾಗೇವಾಡಿ, ಅಗಸನೂರು ಮತ್ತು ಬಳ್ಳಾರಿ ತಾಲೂಕಿನ ಬಸರಕೋಡು, ಮೋಕಾ ಮುಂತಾದ ಹಳ್ಳಿಗಳ ಕಿಲಾರಿ, ಹಳ್ಳಿಕಾರ, ಜವಾರಿ ತಳಿಯ ಹೋರಿಗಳು, ಎತ್ತುಗಳು ಈ ಜಾತ್ರೆಗೆ ಬಂದಿರುವುದು ವಿಶೇಷ. ಕಿಲಾರಿ, ಹಳ್ಳಿಕಾರ, ಜವಾರಿ ಹೋರಿಗಳನ್ನು ಮಾರಾಟ ಮಾಡಲು ರಾಜ್ಯ ಸೇರಿದಂತೆ ಹೊರ ರಾಜ್ಯಗಳ ನೂರಾರು ರೈತರು ಮತ್ತು ವ್ಯಾಪಾರಿಗಳು ಇಲ್ಲಿಗೆ ಬರುತ್ತಾರೆ. ಒಂದು ಜೋಡಿ ಎತ್ತುಗಳಿಗೆ ರೂ.50 ಸಾವಿರದಿಂದ 3 ಲಕ್ಷ ಮೌಲ್ಯದ ಮೌಲ್ಯದ ಎತ್ತುಗಳೂ ಇಲ್ಲಿ ಬಂದಿರುತ್ತವೆ.
ಎತ್ತಿಗೆ ರೂ.1 ಲಕ್ಷದಿಂದ, 1.50 ಲಕ್ಷದ ವರೆಗೆ ಮಾರಾಟ ಮಾಡುತ್ತಿದ್ಧೇವೆ.
-ಮಲ್ಲಪ್ಪ, ರೈತ, ಬೆಣಕಲ್ಲು ಗ್ರಾಮ
ನಮ್ಮ ಜೋಡಿ ಎತ್ತುಗಳ ಬೆಲೆಯು ರೂ.1.95 ಲಕ್ಷವಿದ್ದು, ಕಳೆದೆರಡು ವರ್ಷಗಳಿಂದ ಎತ್ತುಗಳ ಮಾರಾಟಕ್ಕೆ ಇಲ್ಲಿಗೆ ಬರುತ್ತಿದ್ದೇವೆ. ಇದು ಎತ್ತುಗಳ ಉತ್ತಮ ಪರಿಷೆಯಾಗಿದೆ.
-ಸೋಮಲಿಂಗ, ರೈತ,ಅರಸನಗುತ್ತಿ. ಅಗತ್ಯ ಸೌಕರ್ಯ:
Related Articles
ಎಂದು ರೈತರು ತಿಳಿಸಿದ್ದಾರೆ. ದೇವಸ್ಥಾನ ಸಮಿತಿ ವತಿಯಿಂದ ಎತ್ತುಗಳ ಪರಿಷೆಗೆ ಬರುವ ರೈತರಿಗೆ ಉಚಿತ ಊಟ ಮತ್ತು ಎತ್ತುಗಳಿಗೆ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಲಾಗಿದೆ, ಈ ವರ್ಪ ಪರಿಷೆಗೆ 500 ಜೋಡಿ ಎತ್ತುಗಳು ಬಂದಿವೆ ಎಂದು ದೇವಸ್ಥಾನ ಸಮಿತಿಯ ಸದಸ್ಯ ಸೋಮಪ್ಪ ನಾಯಕ ನೀಡಿದ್ದಾರೆ. ಎತ್ತುಗಳ ಪರಿಷೆಯಲ್ಲಿ ರೈತರು ತಮಗೆ ಬೇಕಾದ ಎತ್ತುಗಳ ಸುಳಿ, ಕೊಂಬು, ಬಾಲ ಮುಂತಾದವುಗಳನ್ನು ಪರೀಕ್ಷಿಸಿ ಖರೀದಿ ಮಾಡುತ್ತಾರೆ. ಇಲ್ಲಿ ದಲ್ಲಾಳಿಗಳ ಕಾಟ ಇರುವುದಿಲ್ಲ. ಕೊಳ್ಳುವವರು, ಮಾರುವವರು ನೇರವಾಗಿಯೇ ವ್ಯವಹರಿಸುತ್ತಾರೆ ಎಂಬುದು ಗಮನಾರ್ಹ. ಎತ್ತುಗಳನ್ನು ಶೃಂಗರಿಸಲು ಅಗತ್ಯವಾದ ವಸ್ತುಗಳೂ ಇಲ್ಲಿ ಲಭ್ಯವಿದ್ದು, ಎತ್ತುಗಳ ಪರಿಷೆ ರೈತ ಬಂಧುಗಳಿಗೆ ತುಂಬಾ ಸಂತಸ ತಂದಿದೆ.
Advertisement
ಆರ್.ಬಸವರೆಡ್ಡಿ ಕರೂರು