ಮಂಡ್ಯ: ಇತಿಹಾಸ ಪ್ರಸಿದ್ಧ ಹೇಮಗಿರಿಯಲ್ಲಿ ದನಗಳ ಜಾತ್ರೆ ಫೆ.10ರಂದು ಪ್ರಾರಂಭವಾಗುತ್ತಿ ರುವ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಂ. ಶಿವಮೂರ್ತಿ ಮತ್ತು ಗ್ರಾಮಾಂತರ ಠಾಣೆಯ ಪಿಎಸ್‌ಐ ಸುರೇಶ್ ನೇತೃತ್ವದಲ್ಲಿ ಬಂಡಿಹೊಳೆ ಗ್ರಾಮಸ್ಥರು ಹಾಗೂ ಕಂದಾಯ ಇಲಾಖಾ ನೌಕರರು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವತ್ಛಗೊಳಿಸಿದರು.
ಹೇಮಗಿರಿ ಪುರಾತನ ಕಾಲದಿಂದಲೂ ದನಗಳ ಜಾತ್ರೆಗೆ ಹೆಸರು ವಾಸಿಯಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ದನಕರುಗಳನ್ನು ಜಾತ್ರೆಗೆ ಕರೆತರಲಾಗುತ್ತದೆ. ಒಂದು ವಾರಗಳ ಕಾಲ ನಡೆಯುವ ದನಗಳ ಜಾತ್ರೆಯನ್ನು ನೋಡುವುದೇ
ಒಂದು ಸೊಬಗು. ಮಾಲೀಕರು ತಮ್ಮ ದನಗಳಿಗೆ ವಿಶೇಷ ಅಲಂಕಾರಗಳನ್ನು ಮಾಡಿಕೊಂಡು ಮೆರವಣಿಗೆಯಲ್ಲಿ ವಾದ್ಯಗಳಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ದನಗಳಿಗೆ ಶಾಮಿಯಾನ ಹಾಕಿಸಿ ದನಗಳನ್ನು ನೋಡಲು ಬಂದವರಿಗೆ ಸ್ಥಳೀಯದಲ್ಲಿ
ಸಿಗುವ ಸತ್ಕಾರ ಮಾಡಿ ಕಳುಹಿಸುವ ಪರಿಪಾಟ ಹಿಂದಿನಿಂದಲೂ ಬೆಳೆದುಬಂದಿದೆ.
ಇದನ್ನೂ ಓದಿ:ಕೋಟ : ಮಕ್ಕಳ ಅಪಹರಣ ಯತ್ನ ಆರೋಪ ಇಬ್ಬರು ಪೊಲೀಸರ ವಶಕ್ಕೆ
ಟೀ ಶರ್ಟ್ ವಿತರಣೆ: ಈ ಹಿನ್ನೆಲೆಯಲ್ಲಿ ಹೇಮಗಿರಿ ಬೆಟ್ಟದ ಸುತ್ತ ಹಾಗೂ ದನಕರುಗಳನ್ನು ಕಟ್ಟುವ ಜಾತ್ರಾ ಮಾಳದಲ್ಲಿ ಹುಲುಸಾಗಿ ಬೆಳೆದಿದ್ದ ಗಿಡಗಳನ್ನು ಸ್ವತ್ಛಗೊಳಿಸುವ ಕಾರ್ಯ ನಡೆಯಿತು. ಸುಮಾರು 50-60 ಜನರ ತಂಡ ಕುಡುಗೋಲುಗಳನ್ನು ಹಿಡಿದು ಶ್ರಮದಾನದಲ್ಲಿ ಭಾಗವಹಿಸಿ ನಾಲ್ಕು ಗಂಟೆಗೂ ಅಧಿಕ ಸಮಯ ಸ್ವತ್ಛತಾ ಕೆಲಸದಲ್ಲಿ ಭಾಗವಹಿಸಿದ್ದರು. ಬಿಜಿಎಸ್
ಶಾಲೆಯಿಂದ ಉಪಹಾರದ ವ್ಯವಸ್ಥೆ, ತಾಲೂಕು ಆಡಳಿತದಿಂದ ಶ್ರಮದಾನದಲ್ಲಿ ಭಾಗವಹಿಸಿದವರಿಗೆ ಟೀ ಶರ್ಟ್‌ಗಳನ್ನು ವಿತರಿಸಲಾಯಿತು.
ಉಪನ್ಯಾಸಕ ಪದ್ಮನಾಭ, ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಬಂಡಿಹೊಳೆ ಗ್ರಾಪಂ ಸದಸ್ಯ ದರ್ಶನ್, ಮಾಜಿ ಅಧ್ಯಕ್ಷರಾದ ಕಾಯಿಮಂಜೇಗೌಡ, ಮಂಜುನಾಥ್ ಮುಖಂಡರಾದ ರಾಜಶೇಖರ, ವಿಶ್ವನಾಥ್, ಚಂದ್ರಹಾಸೇಗೌಡ, ಜಯರಾಮೇ ಗೌಡ, ರಾಜಸ್ವ ನಿರೀಕ್ಷಕರಾದ ರಾಮಚಂದ್ರ, ರಾಜಮೂರ್ತಿ, ಗೋಪಾಲಕೃಷ್ಣ ಅವಧಾನಿಗಳು, ಪ್ರಾಂಶುಪಾಲೆ ಪವಿತ್ರ ಭಾಗವಹಿಸಿದ್ದರು.