ತೀರ್ಥಹಳ್ಳಿ : ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಬಳಿ ತುಂಗಾ ನದಿಯ ಚಕ್ರತೀರ್ಥ ಬಳಿ ಪಾವನ ನದಿಯಾಗಿದ್ದು ಇಲ್ಲಿಗೆ ಸಾವಿರಾರು ಭಕ್ತರು ಬಂದು ಈ ತೀರ್ಥಕ್ಷೇತ್ರದಲ್ಲಿ ಮಿಂದು ದೇವರ ದರ್ಶನ ಪಡೆಯುವ ಯೋಗ್ಯ ಆಚರಣೆ ಮಾಡುತ್ತಿದ್ದು, ಹಿಂದೂಗಳು ಮಾತೆ ಎಂದು ಪೂಜಿಸುವ ಗೋವಿನ ತಲೆಯನ್ನು ಕಡಿದು ಮತಾಂದರು ಎಸೆದಿದ್ದು ಪವಿತ್ರ ಚಕ್ರತೀರ್ಥದ ನೀರು ಮಲಿನಗೊಳಿಸಿದ್ದಾರೆ.
ಹಿಂದೂ ದೇವತೆಗಳನ್ನು ಅಪಮಾನ ಗೊಳಿಸಿ, ಇಂತಹ ಧಾರ್ಮಿಕ ತೀರ್ಥ ಕ್ಷೇತ್ರದಲ್ಲಿ ಹೀನ ಕೃತ್ಯ ನಡೆಸಿ ಹಿಂದೂ ಧಾರ್ಮಿಕ ಭಾವನೆಯನ್ನು ಕೆರಳಿಸುವ ಮತಾಂಧರನ್ನು ಕೂಡಲೇ ಬಂಧಿಸಬೇಕು, ಇಂತಹ ಮತಾಂಧರಿಗೆ ಕಠಿಣ ಶಿಕ್ಷೆ ಕೊಡಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ತಾಲ್ಲೂಕು ಉಪತಹಶೀಲ್ದಾರ್ ಶ್ರೀ ಪಾಲಯ್ಯ ರವರಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ನರೇಶ್, ಹರೀಶ್, ಕಾಂತೇಶ್ ಪ್ರಭು. ಶಿವು ಮತ್ತಿತರರು ಉಸ್ಥಿತರಿದ್ದರು.
ಇದನ್ನೂ ಓದಿ: ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ; ಕೆರೆಯ ತಳಭಾಗದಲ್ಲಿ ವರುಣಾ ದೇವರ ಮೂರ್ತಿ ದರ್ಶನ