ಶಿರಸಿ: ಗೋವನ್ನು ಲಕ್ಷ್ಮೀ ದೇವಿ ಎಂದು ಪೂಜಿಸುತ್ತಾರೆ, ಕಳೆದ ದೀಪಾವಳಿಯ ಗೋ ಪೂಜೆಗಾಗಿ ಕಟ್ಟಲಾಗಿದ್ದ ಬಂಗಾರದ ಸರವನ್ನೇ ಆಕಳು ತಿಂದು, ಅದನ್ನು ತಿಂಗಳ ಬಳಿಕ ಪ್ರಸಿದ್ದ ಪಶು ವಿಜ್ಞಾನಿ ಡಾ. ಪಿ.ಎಸ್.ಹೆಗಡೆ ಅವರ ತಂಡ ಹೊರಗೆ ತೆಗೆದ ಘಟನೆ ತಾಲೂಕಿನ ಸಂಕದ ಮನೆಯಲ್ಲಿ ನಡೆದಿದೆ.
ಕಳೆದ ದೀಪಾವಳಿಗೆ ಆಕಳಿಗೆ ಕಟ್ಟಲಾಗಿದ್ದ ಬಂಗಾರದ ಸರವನ್ನು ಆಕಳು ನುಂಗಿತ್ತು. ಮಾಲಕ ಶ್ರೀಕಾಂತ ಹೆಗಡೆ ಅವರಿಗೆ ತಿಂದದ್ದು ಆಕಳೋ, ಕರುವೋ ತಿಳಿದಿರಲಿಲ್ಲ. ದಿನವೂ ಸರಣಿಯಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ.
ಅಂತಿಮವಾಗಿ ಡಾ.ಪಿ.ಎಸ್‌ಹೆಗಡೆ ಅವರನ್ನು ಭೇಟಿ ಪರಿಶೀಲನೆಗೆ ಮನವಿ ಮಾಡಿಕೊಂಡರು. ಲೋಹದ ಶೋಧಕದ ಸಹಕಾರ ಪಡೆದು ತಿಂದದ್ದು ಆಕಳೆಂದು ಖಚಿತ ಮಾಡಿಕೊಂಡರು.
ಉಮ್ಮಚಗಿ ಡಾ. ರಾಜೇಶ , ರಘುಪತಿ ಭಟ್ಟ, ವಾಣಿ ಹಾಗೂ ಶ್ರೀಧರ ಇತರರ ಸಹಕಾರದಿಂದ ಎರಡು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಿ ಬಂಗಾರದ ಸರ ಹೊರಗೆ ತೆಗೆಯಲಾಯಿತು. ಬಂಗಾರದ ತಾಳಿ ನುಂಗಿದ್ದ ಕರುವಿನ ಉದರದಿಂದಲೂ ಅದನ್ಬು ತೆಗೆಯಲಾಯಿತು.
ಜಾನುವಾರುಗಳು ಇಂಥ ವಸ್ತು ಬಾಯಿಗೆ ಸಿಗದಂತೆ ನೋಡಿ ಕೊಳ್ಳಬೇಕು ಎಂದು ಡಾ.ಪಿ.ಎಸ್.ಹೆಗಡೆ ಮನವಿ ಮಾಡಿಕೊಂಡಿದ್ದಾರೆ.