Advertisement

ಗೋ ಮೂತ್ರ, ಸಗಣಿಯಿಂದ ಆರ್ಥಿಕತೆ ಬಲಪಡಿಸಬಹುದು: ಶಿವರಾಜ್ ಸಿಂಗ್ ಚೌಹಾಣ್

10:15 AM Nov 14, 2021 | Team Udayavani |

ಭೋಪಾಲ್: ಹಸು ಮತ್ತು ಅದರ ಸಗಣಿ, ಮೂತ್ರವು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ದೇಶವನ್ನು ಆರ್ಥಿಕವಾಗಿ ಸಮರ್ಥವಾಗಿಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಹೇಳಿದ್ದಾರೆ.

Advertisement

ಭಾರತೀಯ ಪಶುವೈದ್ಯಕೀಯ ಸಂಘವು ಆಯೋಜಿಸಿದ್ದ ‘ಶಕ್ತಿ 2021’ ಮಹಿಳಾ ಪಶುವೈದ್ಯರ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರವು ಹಸುಗಳ ಆಶ್ರಯಗಳನ್ನು ಅಭಿವೃದ್ಧಿಪಡಿಸಿದೆ, ಆದರೆ ಅದು ಏಕಾಂಗಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಸಮಾಜದ ಸಹಭಾಗಿತ್ವದ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ:ಡ್ರೋನ್‌ ಮೂಲಕ ಕೊರೊನಾ ಲಸಿಕೆ ಯಶಸ್ವಿ ರವಾನೆ

ಗೋವು, ಅವುಗಳ ಸಗಣಿ ಮತ್ತು ಮೂತ್ರದ ಮೂಲಕ ನಾವು ನಮ್ಮದೇ ಆರ್ಥಿಕತೆಯನ್ನು ಬಲಪಡಿಸಬಹುದು. ದೇಶವನ್ನು ಆರ್ಥಿಕವಾಗಿ ಸಬಲಗೊಳಿಸಬಹುದು ಎಂದು ಅವರು ಹೇಳಿದರು.

ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಹುದು ಎಂಬುದರ ಕುರಿತು ಪಶುವೈದ್ಯರು ಮತ್ತು ತಜ್ಞರು ಫಲಿತಾಂಶ ಆಧಾರಿತ ಕೆಲಸದಲ್ಲಿ ತೊಡಗಬೇಕು ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next