Advertisement

ಗೋ ವಿವಾದ‌: ಕೋಳಿಗೆ ಬೇಡಿಕೆ, ದರವೂ ಏರಿಕೆ

03:45 AM Jun 06, 2017 | Team Udayavani |

ನವದೆಹಲಿ: ದೇಶಾದ್ಯಂತ ಗೋಮಾಂಸ ಸೇವನೆ ವಿವಾದ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ಇದರ ಲಾಭ ಕೋಳಿ ಮಾಂಸದ ವ್ಯಾಪಾರಿಗಳಿಗೆ ಸಿಕ್ಕಿದೆ, ಕೋಳಿ ತಿನ್ನುವವರ ಪ್ರಮಾಣವೂ ಹೆಚ್ಚಾಗಿದೆ, ಅದರ ಬೆಲೆಯೂ ಏರಿದೆ ಎಂದು ಅಸೋಚಾಮ್‌ (ಭಾರತದ ವಾಣಿಜ್ಯ ಮತ್ತು ಕೈಗಾರಿಕೆ ಸೂಚ್ಯಂಕ ಸಂಸ್ಥೆ ) ವರದಿ ತಿಳಿಸಿದೆ.

Advertisement

ಸದ್ಯ ಕೋಳಿ ಮಾಂಸದ ದರ ಶೇ.25ರಿಂದ 30ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಾಂಸ ಬಳಕೆಯೂ ಶೇ.35ರಿಂದ 40ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. 2014ರಿಂದ 2017ರ ಅವಧಿಯಲ್ಲಿ ಕೋಳಿ ಮಾಂಸದ ಸಗಟು ಬೆಲೆ ಶೇ.22ರಷ್ಟು ಏರಿದ್ದರೆ, ಗೋ ಮತ್ತು ಎಮ್ಮೆ ಮಾಂಸದ ಬೆಲೆ ಶೇ.3ರಷ್ಟು ಕುಸಿದಿದೆ. ಇದಕ್ಕೆ ವಿರುದ್ಧವಾಗಿ 2013-2014ರ ನಡುವಿನ ಅವಧಿಯಲ್ಲಿ ಹಸು ಮತ್ತು ಎಮ್ಮೆ ಮಾಂಸದ ಸಗಟು ಬೆಲೆ ಸೂಚ್ಯಂಕ ಶೇ.10ರಷ್ಟು ಹೆಚ್ಚಾಗಿತ್ತು. ಆ ವೇಳೆ ಕೋಳಿ ಮಾಂಸದ ಬೆಲೆ ಶೇ.9ರಷ್ಟು ತಗ್ಗಿತ್ತು ಎಂದು ಅಸೋಚಾಮ್‌ ತಿಳಿಸಿದೆ.

ಮುಖ್ಯವಾಗಿ ಆಂಧ್ರಪ್ರದೇಶ, ಹರ್ಯಾಣ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್‌, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧ ಕೋಳಿ ಮಾಂಸ ವ್ಯಾಪಾರಿಗಳಿಗೆ ಲಾಭವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next