Advertisement

ಕೋವಿಡ್19 ಅಟ್ಟಹಾಸಕ್ಕೆ ನಲುಗಿದ ಇಟಲಿ:ಜಗತ್ತಿನಾದ್ಯಂತ ಮೃತರಾದವರ ಸಂಖ್ಯೆ 11,398ಕ್ಕೆ ಏರಿಕೆ

10:08 AM Mar 22, 2020 | Mithun PG |

ನವದೆಹಲಿ: ಕೋವಿಡ್-19 ಆರ್ಭಟಕ್ಕೆ ಜಗತ್ತಿನಾದ್ಯಂತ ಆತಂಕ ಸೃಷ್ಟಿಯಾಗಿದ್ದು ಇವರೆಗೂ 11, 398 ಜನರು ಬಲಿಯಾಗಿದ್ದಾರೆ. ಸೋಂಕು ಪೀಡಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು 2,75,871 ಪ್ರಕರಣಗಳು ದಾಖಲಾಗಿವೆ. ಇಟಲಿಯು ಕೋವಿಡ್ 19 ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗಿದ್ದು ಕಳೆದ 24 ಗಂಟೆಗಳಲ್ಲಿ 627 ಜನರು ಮೃತಪಟ್ಟಿದ್ದಾರೆ. ಆ ಮೂಲಕ ಒಟ್ಟಾರೆ ಸಾವಿನ ಪ್ರಮಾಣ 4,032ಕ್ಕೆ ಜಿಗಿದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಕೋವಿಡ್ 19 ವೈರಸ್ ನ ಕೇಂದ್ರ ಬಿಂದು ಚೀನಾದಲ್ಲಿ 3,139 ಜನರು ಈಗಾಗಲೇ ಮೃತರಾಗಿದ್ದಾರೆ. ಬ್ರಿಟಿಷ್ ಪ್ರಧಾನ ಮಂತ್ರಿ ಬೋರಿಷ್ ಜಾನ್ಸನ್ ಇಂಗ್ಲೇಂಡ್ ಲಾಕ್ ಡೌನ್ ಗೆ ಆದೇಶ ನೀಡಿದ್ದು ಜನರು ಗುಂಪು ಸೇರದಂತೆ ಮನವಿಮಾಡಿದ್ದಾರೆ. ಇಲ್ಲಿ ಮಾರಕ ವೈರಾಣುವಿಗೆ 160 ಜನರು ಬಲಿಯಾಗಿದ್ದು, 3,200 ಜನರಿಗೆ ಸೋಂಕು ತಗುಲಿದೆ.

ಗಮನಾರ್ಹ ಸಂಗತಿಯೆಂದರೇ ಜಗತ್ತಿನಾದ್ಯಂತ ಸೋಂಕು ಪೀಡಿತರ ಸಂಖ್ಯೆಯಲ್ಲಿ 91,912 ಜನರು ಗುಣಮುಖರಾಗಿದ್ದು ಕೊಂಚ ಮಟ್ಟಿಗಿನ ಆಶಾಭಾವ ಹುಟ್ಟಿಸಿದೆ.

ಭಾರತದಲ್ಲಿ ಶುಕ್ರವಾರ ಒಂದೇ ದಿನ ಸೋಂಕು ಪೀಡಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರವೇ ಸುಮಾರು 50ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಆ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ 256ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next