ವಿಜಯಪುರ: ನಗರದ ಕೋವಿಡ್-19 ಸೋಂಕಿತರು ಪತ್ತೆಯಾಗಿರುವ ಕಂಟೈನ್ಮೆಂಟ್ ಪ್ರದೇಶದ ನಿವಾಸಿ ವೃದ್ಧರೊಬ್ಬರು ಸೋಂಕು ದೃಢಪಡುವ ಮುನ್ನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ನಾಲ್ಕನೇ ಬಲಿಯಾಗಿದೆ. ಮತ್ತೊಂದೆಡೆ ಸೋಂಕು ದೃಢಪಟ್ಟವರ ಸಂಖ್ಯೆ 60 ಕ್ಕೇರಿದೆ.
ನಗರದ ಕಂಟೋನ್ಮೆಂಟ್ ಪ್ರದೇಶದ ನಿವಾಸಿ 65 ವರ್ಷದ ವೃದ್ಧ ಸೋಂಕಿತನನ್ನು ಪಿ1291 ಎಂದು ಗುರುತಿಸಲಾಗಿದೆ.
ಈಗಾಗಲೇ ಕಂಟೇನಮೆಂಟ್ ಏರಿಯಾದಲ್ಲಿ ವಾಸಿಯಾದ ವೃದ್ಧನಿಗೆ ಸೋಮವಾರ ತೀವ್ರ ಉಸಿರಾಟ ತೊಂದರೆ ಹಾಗೂ ಹೃದಯ ಸಂಬಂಧಿ ಖಾಯಿಲೆ ಕಾಣಿಸಿಕೊಂಡಿದೆ. ಕೂಡಲೇ ವೃದ್ಧನನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿತ್ತು. ನಂತರ ವೃದ್ದನಲ್ಲಿ ಸೋಂಕಿರುವುದನ್ನು ಪತ್ತೆಮಾಡಿ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸುವ ಹಂತದಲ್ಲಿ ಮೃತ ಪಟ್ಟಿದ್ದ.
ಮೃತನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಮಂಗಳವಾರ ಮೃತ ವೃದ್ಧನಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ.
ವೃದ್ಧನ ಸಾವಿನಿಂದ ನಿರ್ಬಂಧ ತೆರವಿನ ನಿರೀಕ್ಷೆಯಲ್ಲಿದ್ದ ಕಂಟೈನ್ಮೆಂಟ್ ಪ್ರದೇಶದ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಮೃತ ವೃದ್ಧನಿನೆ ಸೋಂಕು ಬಾಧಿಸಿರುವುದು ಸ್ಥಳೀಯರಲ್ಲಿ ಮತ್ತಷ್ಟು ಭಯದ ವಾತಾವರಣ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಸೋಂಕಿಗೆ ಬಲಿಯಾಗಿದ್ದು, ವೃದ್ಧನ ಸಾವಿನೊಂದಿಗೆ ಸೋಂಕಿತ ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.