Advertisement

ಕೋವಿಡ್‌-19ಗೆ ಬಂತು ಜಗತ್ತಿನ ಮೊದಲ ಮಾತ್ರೆ

11:36 PM Nov 04, 2021 | Team Udayavani |

ಲಂಡನ್‌: ಜಗತ್ತಿನ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೊರೊನಾ ಸೋಂಕಿನ ವಿರುದ್ಧದ ಮೊದಲ ಮಾತ್ರೆಯನ್ನು ಯುನೈಟೆಡ್‌ ಕಿಂಗ್‌ಡಮ್‌ ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಇಂಥ ತೀರ್ಮಾನ ಕೈಗೊಂಡ ಜಗತ್ತಿನ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 18 ವರ್ಷದಿಂದ ಮೇಲ್ಪಟ್ಟವರಿಗೆ ಲಕ್ಷಣ ಸಹಿತ ಕೊರೊನಾ ಸೋಂಕು ದೃಢಪಟ್ಟಲ್ಲಿ ಅವರಿಗೆ ವೈದ್ಯರ ಸಲಹೆ ಮೇರೆಗೆ ಮೊಲ್ನುಪಿರವಿರ್‌ (molnupiravir) ಮಾತ್ರೆಯನ್ನು ನೀಡಬಹುದಾಗಿದೆ.

ಯು.ಕೆ.ಯ ಔಷಧ ಮತ್ತು ಆರೋಗ್ಯ ಕಾಪಿಡುವ ವಸ್ತುಗಳ ನಿಯಂತ್ರಣ ಸಂಸ್ಥೆ (ಎಂಎಚ್‌ಆರ್‌ಎ) ಈ ಮಾತ್ರೆಗೆ ಅನು ಮೋದನೆ ನೀಡಿದ್ದು, ಅಲ್ಪ ಪ್ರಮಾಣದಿಂದ ಮಧ್ಯಮ ತೀವ್ರತೆ ಇರುವ ಕೊರೊನಾ ಸೋಂಕಿತರಿಗೆ ಮೊಲ್ನುಪಿರವಿರ್‌ ಮಾತ್ರೆ ನೀಡಬಹುದು ಎಂದು ಶಿಫಾರಸು ಮಾಡಿದೆ. ಆರಂಭದಲ್ಲಿ ಇದರ ಪೂರೈಕೆ ಸೀಮಿತ ವ್ಯಾಪ್ತಿಯಲ್ಲಿ ಇರಲಿದೆ. ವರ್ಷಾಂತ್ಯಕ್ಕೆ 10 ದಶಲಕ್ಷ ಮಾತ್ರೆಗಳನ್ನು ಉತ್ಪಾದಿ ಸಲು ಸಾಧ್ಯವಿದೆ ಎಂದು ಕಂಪೆನಿ ತಿಳಿಸಿದೆ.

ಅಮೆರಿಕದ ಔಷಧ ಕಂಪೆನಿ ಮೆರ್ಕ್‌, ಶಾರ್ಪ್‌ ಮತ್ತು ಡೋಮ್‌ ( Merck, Sharp and Dohme MSD) ಮತ್ತು ರಿಡ್ಜ್ಬ್ಯಾಕ್‌ ಬಯೋಥೆರಪ್ಯುಟಿಕ್‌ (Ridgeback Biotherapeutics) ಎಂಬ ಕಂಪೆನಿಗಳು ಅದನ್ನು ಅಭಿವೃದ್ಧಿ ಪಡಿಸಿದೆ. ಮೂಲತಃ ಅದನ್ನು ಜ್ವರವನ್ನು ನಿಯಂತ್ರಿಸಲು, ಆಸ್ಪತ್ರೆಗೆ ದಾಖಲಾಗುವುದ ರಿಂದ ತಪ್ಪಿಸಲು ಮತ್ತು ಸಾವಿನ ಪ್ರಮಾಣ ವನ್ನು ಶೇ.50ರಷ್ಟು ತಪ್ಪಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗಿತ್ತು.

ಫೆಬ್ರವರಿ ವೇಳೆಗೆ ಮತ್ತೆ 5 ಲಕ್ಷ ಸಾವು?:

Advertisement

ಯುರೋಪ್‌ನಾದ್ಯಂತ ಕೊರೊನಾ ಪ್ರಕರಣವು ಹೆಚ್ಚಳವಾಗುತ್ತಿರುವುದು ಅತ್ಯಂತ ಗಂಭೀರ ಹಾಗೂ ಕಳವಳಕಾರಿ ಸಂಗತಿಯಾಗಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಇನ್ನೂ 5 ಲಕ್ಷದಷ್ಟು ಮಂದಿ ಸೋಂಕಿಗೆ ಬಲಿಯಾಗುವ ಭೀತಿಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಐರೋಪ್ಯದ 53 ದೇಶಗಳಲ್ಲಿ ಕೊರೊನಾ ವ್ಯಾಪಿಸುತ್ತಿರುವ ವೇಗ ನೋಡಿದರೆ, ಆತಂಕ ಮೂಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಫೆಬ್ರವರಿ ವೇಳೆಗೆ ಇನ್ನೂ 5 ಲಕ್ಷ ಮಂದಿ ಕೊರೊನಾದಿಂದ ಸಾವಿಗೀಡಾಗಲಿದ್ದಾರೆ ಎಂದು ಡಬ್ಲ್ಯುಎಚ್‌ಒ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಡಾ| ಹನ್ಸ್‌ ಕ್ಲೂಗ್‌ ಹೇಳಿದ್ದಾರೆ. ನಿರ್ಬಂಧಗಳಲ್ಲಿ ಸಡಿಲಿಕೆ ಮತ್ತು ಲಸಿಕೆ ವಿತರಣೆಯಲ್ಲಿ ನಿಧಾನಗತಿಯೇ ಈ ಪರಿಸ್ಥಿತಿಗೆ ಕಾರಣ ಎಂದೂ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next