Advertisement

ಕೋವಿಡ್ 19 ಅನಗತ್ಯ ಆತಂಕ ಬೇಡ: ಹನುಮಂತಪ್ಪ

02:27 PM Mar 18, 2020 | Suhan S |

ಶಿಗ್ಗಾವಿ: ಕೊರೊನಾ ಆತಂಕದಿಂದ ಅನಗತ್ಯವಾಗಿ ಮಾಸ್ಕ್ ಧರಿಸುವ ರೂಢಿ ಬೇಡ. ವಿನಾಕಾರಣ ಭಯದ ವಾತಾವರಣ ಸೃಷ್ಟಿಸದೇ ಕೊರೊನಾ ವೈರಸ್‌ ಇದು ನಮ್ಮ ಭಾಗದ ಜನರ ದೈಹಿಕ ಉಷ್ಣತೆಗೆ ತಗಲುವ ಪ್ರಮಾಣ ಕಡಿಮೆ. ಆದರೂ ಮುಂಜಾಗೃತಾ ಕ್ರಮವಾಗಿ ಮುನ್ನಚ್ಚರಿಕೆ ಅವಶ್ಯವಾಗಿದೆ ಎಂದು ಶಿಗ್ಗಾವಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಹನುಮಂತಪ್ಪ ಪಿ.ಎಚ್‌. ಹೇಳಿದರು.

Advertisement

ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಾರ್ಯಲಯದ ಸಭಾಭವದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ಯುವಕರು ಭಯಪಡುವ ಅವಶ್ಯಕತೆಯಿಲ್ಲ. 60 ವರ್ಷ ಮೇಲ್ಪಟ್ಟ ವಯೋವೃದ್ಧರು ಸೋಂಕು ಹತೋಟಿಗೆ ಬರುವವರೆಗೂ ವಿವಿಧ ಊರುಗಳಿಗೆ ಹೋಗುವುದನ್ನ ನಿಲ್ಲಿಸುವುದು ಸೂಕ್ತ. ಆದಷ್ಟು ಕೈಗಳನ್ನು ಸಾಬೂನು ಹಾಗೂ ಹ್ಯಾಂಡ್‌ವಾಷ್‌ ಲಿಕ್ವಿಡ್‌ಗಳಿಂದ ತೊಳೆದು ದಿನನಿತ್ಯದ ಕಾರ್ಯಗಳನ್ನು ಮಾಡಬೇಕು. 100 ಜನರಿಗೆ ಸೋಂಕು ತಗುಲಿದರೆ ನಮ್ಮ ಭಾಗದಲ್ಲಿ ಸಾಯುವವರ ಪ್ರಮಾಣ 3 ಜನ ಮಾತ್ರ. ಆದ್ದರಿಂದ ಎಲ್ಲರಲ್ಲಿಯೂ ಭಯದ ವಾತಾವರಣ ಬೇಡ. ಇದು ನಮಗೆ ಮುನ್ನಚ್ಚರಿಖೆಯಾಗಿ ಮಾಹಿತಿ ಸಿಕ್ಕಿರುವ ಕಾರಣ ಎಚ್ಚೆತ್ತುಕೊಳ್ಳುವ ಮೂಲಕ ಮಹಾಮಾರಿ ರೋಗವನ್ನು ಹತೋಟಿಗೆ ತರಲು ಸಹಕಾರ ಮುಖ್ಯವಾಗಿದೆ ಎಂದರು.

ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಮಾತನಾಡಿ, ಪ್ರಜ್ಞಾವಂತ ನಾಗರಿಕರಾದ ನಾವು ನೀವೆಲ್ಲ ವಿವಿಧೆತೆಯಲ್ಲಿ ಏಕತೆಯನ್ನು ಕಾಣಬೇಕಾದರೆ ಇಂತಹ ಸಂದರ್ಭವನ್ನ ಸಮುದಾಯ ಭಾಗಿತ್ವದಲ್ಲಿ ಎದುರಿಸಲೇಬೇಕಿದೆ. ಪಡಿತರ ಅಕ್ಕಿ ಪಡೆಯಲು ಹೆಬ್ಬರಳಿನ ಗುರುತುನೀಡುವುದು ಕಡ್ಡಾಯ ಮಾಡಬೇಡಿ. ಪಡಿತರ ಪಡೆಯುವ ಫಲಾನುಭವಿಗಳೆಲ್ಲರೂ ಬಡವರೇ ಇರುವುದರಿಂದ ಒಂದು ರೆಜಿಸ್ಟಾರ್‌ ಮಾಡುವ ಮೂಲಕ ಅದರಲ್ಲಿ ಸಹಿ ಪಡೆದು ಅವರಿಗೂ ಸಹಿತ ಅಲೆದಾಡಿಸದೇ ಸಹಕರಿಸಿ ಮತ್ತು ನಮ್ಮ ಶರೀರದಲ್ಲಿರುವ ಜೀನ್ಸ್‌ಗಳು ರೋಗನಿರೋಧಕ ಶಕ್ತಿ ಹೊಂದಿರುವುದರಿಂದ ಸ್ವಯಂ ಆಗಿ ರಕ್ಷಣೆ ಮಾಡಲಿದೆ. ಸಾಧ್ಯವಾದಷ್ಟು ವೈದ್ಯರ ಸಲಹೆ ಪಾಲಿಸಿ ಎಂದರು.

ಚಿಕ್ಕಮಕ್ಕಳ ತಜ್ಞ ಡಾ. ಮಹೇಶ ಜಗದವರ, ತಹಶೀಲ್ದಾರ್‌ ಪ್ರಕಾಶ ಕುದುರಿ, ದಿವಾಣಿ ನ್ಯಾಯಾಧಿಧೀಶರಾದ ಶ್ರೀದೇವಿ ದರಬಾರೆ, ಸಹಾಯಕ ಸರ್ಕಾರಿ ಅಭಿಯೋಜಕ ಜಿ.ಕೆ. ಕುರುಡೀಕೆರೆ, ಪಿ.ಪಿ. ಗುಂಡಣ್ಣವರ, ಸಿ.ಎನ್‌. ಬಡ್ಡಿ, ಎಂ. ಜಿ. ವಿಜಾಪೂರ, ಎಂ.ಐ. ಗೋಣೆಪ್ಪನವರ, ಸಿ.ಎಂ. ಹರಕುಣಿ, ಶಿಗ್ಗಾವಿ ಪಿಎಸ್‌ಐ ಎಸ್‌.ಪಿ. ಹಳ್ಳಿ ಸೇರಿದಂತೆ ನ್ಯಾಯವಾದಿಗಳು, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ವಿವಿಧ ಇಲಾಖೆ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next