ವಾಷಿಂಗ್ಟನ್: ಕೋವಿಡ್-19 ವೈರಸ್ ವ್ಯಾಪಿಸುವಿಕೆ ಪ್ರಮಾಣ ಹೆಚ್ಚಳವಾಗಿದ್ದು ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 20,83,304 ತಲುಪಿದೆ. ಬುಧವಾರ ವಿಶ್ವದಾದ್ಯಂದ 38,000ಕ್ಕೂ ಹೆಚ್ಚು ಜನರಲ್ಲಿ ವೈರಾಣು ಕಾಣಿಸಿಕೊಂಡಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 1,34 616ಕ್ಕೆ ಏರಿಕೆಯಾಗಿದೆ. ಈ ಪೈಕಿ ಯುರೋಪ್ ವೊಂದರಲ್ಲಿಯೇ 10 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಆಘಾತಕಾರಿ ಎಂದರೇ ಕೋವಿಡ್-19 ಕಂಡುಬಂದ ಮೊದಲ 93 ದಿನಗಳಲ್ಲಿ 10 ಲಕ್ಷ ಜನರಿಗೆ ಸೋಂಕು ತಗುಲಿದರೆ, ಉಳಿದ ಕೇವಲ 13 ದಿನಗಳಲ್ಲಿ 10 ಲಕ್ಷ ಜನರು ಈ ಮಾರಕ ಸೋಂಕುವಿಗೆ ಒಳಗಾಗಿದ್ದಾರೆ. ಒಟ್ಟಾರೆಯಾಗಿ 20 ಲಕ್ಷಕ್ಕಿಂತ ಹೆಚ್ಚು ಜನರು ಈ ವೈರಾಣುವಿನಿಂದ ಬಳಲುತ್ತಿದ್ದಾರೆ.
ಅಮೆರಿಕಾದಲ್ಲಿ ಸೋಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣ ಇತರ ದೇಶಗಳಿಗಿಂತ ಹೆಚ್ಚಿದ್ದು ಬುಧವಾರ ಒಂದೇ ದಿನ ದಾಖಲೆಯ 2,600 ಜನರು ಕೊನೆಯುಸಿರೆಳೆದಿದ್ದಾರೆ. ಇಟಲಿಯಲ್ಲಿ ಸಾವಿನ ಸಂಖ್ಯೆ 21,645 ಏರಿದ್ದು, ಒಟ್ಟು 1,65,155 ಮಂದಿ ಸೋಂಕಿತರಿದ್ದಾರೆ. ಸ್ಪೇನ್ ನಲ್ಲೂ 1,80 ,659 ಜನರು ಸೋಂಕಿತರಿದ್ದು 18, 812 ಜನರು ಮೃತರಾಗಿದ್ದಾರೆ.
ಮಾತ್ರವಲ್ಲದೆ ಫ್ರಾನ್ಸ್, ಜರ್ಮನಿ, ಬ್ರಿಟನ್ ನಲ್ಲೂ ಸೋಂಕಿತರ ಮತ್ತು ಸಾವಿನ ಪ್ರಮಾಣ ದ್ವಿಗುಣಗೊಳ್ಳುತ್ತಲೇ ಇರುವುದು ಆತಂಕಕಾರಿ ವಿಚಾರವಾಗಿದೆ ಎಂದು ಮಾಧ‍್ಯಮದ ವರದಿ ತಿಳಿಸಿದೆ.