Advertisement

ಭಾರತದಲ್ಲಿ 12 ಸಾವಿರ ಗಡಿ ದಾಟಿದ ಕೋವಿಡ್-19 ಪ್ರಕರಣಗಳು: 414 ಜನರು ಸಾವು

06:01 PM Apr 16, 2020 | Mithun PG |

ನವದೆಹಲಿ: ಭಾರತದಲ್ಲಿ ಗುರುವಾರ ಬೆಳಗ್ಗೆಯ ವೇಳೆಗೆ ಕೋವಿಡ್ 19 ಪಾಸಿಟಿವ್ ಪ್ರಕರಣಗಳು 12,000 ಗಡಿ ದಾಟಿದೆ. ಮೃತರಾದವರ ಸಂಖ್ಯೆ ಕೂಡ 414 ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisement

ಒಟ್ಟಾರೆ ಸೋಂಕಿತರ ಪ್ರಮಾಣ 12,380 ಜನರಿದ್ದು, ಇದರಲ್ಲಿ ಈಗಾಗಲೇ 1,488 ಜನರು ಗುಣಮುಖರಾಗಿದ್ದಾರೆ.  ಕಳೆದ 24 ಗಂಟೆಗಳ ಅವಧಿಯಲ್ಲಿ 37 ಜನರು ಕೊನೆಯುಸಿರೆಳೆದಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ  ಹೆಚ್ಚು ಜನರು ಈ ಮಾರಕ ವೈರಾಣುವಿಗೆ ತುತ್ತಾಗಿದ್ದು ಇಲ್ಲಿ 2,916 ಜನರು ಸೋಂಕಿತರಿದ್ದು 187 ಜನರು ಮೃತಪಟ್ಟಿದ್ದಾರೆ.

ದೆಹಲಿ ಎರಡನೇ ಅತೀ ಹೆಚ್ಚು ಸೋಂಕಿತರಿರುವ ಪ್ರದೇಶವಾಗಿದ್ದು 1,578 ಜನರು ಭಾಧಿತರಾಗಿದ್ದಾರೆ. ದುರಂತವೆಂದರೇ ಫಿಜ್ಜಾ  ಡೆಲಿವರಿ ಬಾಯ್ ನಲ್ಲೂ ಸೋಂಕು ಕಂಡುಬಂದಿದ್ದು, ಈತನೊಂದಿಗೆ ಸಂಪರ್ಕಕ್ಕೆ ಬಂದಿದ್ದ 70 ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಮಾತ್ರವಲ್ಲದೆ ದೆಹಲಿಯ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್ ಅವರಿಗೂ ಸೋಂಕು ತಗುಲಿರುವ ಪಾಸಿಟಿವ್ ವರದಿ ಬಂದಿದೆ.

ಕೇಂದ್ರ ಸರ್ಕಾರ ಮುಂಬೈ, ಕೊಲ್ಕತ್ತಾ, ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ 9 ಜಿಲ್ಲೆಗಳು, ಹೈದರಬಾದ್, ಚೆನ್ನೈ, ಜೈಪುರ, ಆಗ್ರಾ ಮುಂತಾದ ಪ್ರಮುಖ ಪ್ರದೇಶಗಳನ್ನು ಕೋವಿಡ್ 19 ಹಾಟ್ ಸ್ಪಾಟ್ ಗಳೆಂದು ಘೋಷಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next