Advertisement

ಕೋವಿಡ್ ಹಿನ್ನೆಲೆ: ಮೊಹರಂ ಕುಣಿತ ತಡೆಯಲು ಹೋದ ಪೊಲೀಸ್ ಮೇಲೆ ಮಾರಣಾಂತಿಕ ಹಲ್ಲೆ

07:55 PM Aug 30, 2020 | Mithun PG |

ಗಂಗಾವತಿ: ಕೋವಿಡ್ ರೋಗ ಹರಡದಂತೆ ತಡೆಯಲು ಸರಕಾರ ಸಾರ್ವಜನಿಕ ಮೊಹರಂ ಹಬ್ಬ ಆಚರಣೆ ನಿಷೇಧಿಸಿದ್ದು, ಗುಂಪುಗೂಡಿ ಮೊಹರಂ ಹಬ್ಬದ ಕುಣಿತವಾಗುತ್ತಿದ್ದ ಸಂದರ್ಭ,  ತಡೆಯಲು ಯತ್ನಿಸಿದ ಪೊಲೀಸ್ ಗೆ ಅವಾಚ್ಯಶಬ್ದಗಳಿಂದ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ಆರಾಳ ಗ್ರಾಮದಲ್ಲಿ ಶನಿವಾರ ರಾತ್ರಿ ಜರುಗಿದೆ.

Advertisement

ತಾಲೂಕಿನ ಆರಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸೋಮನಾಥ, ಹಬ್ಬದ ಸಂದರ್ಭದಲ್ಲಿ ಗುಂಪು ಸೇರಿ ಕುಣಿಯದಂತೆ ಸೂಚನೆ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಆರಾಳ ಗ್ರಾಮದ ಕೆಲವರುಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಪ್ರಭು,ತಿಮ್ಮಣ್ಣ, ಅಶೋಕ, ವೆಂಕಟೇಶ, ಮುದಿಯಪ್ಪ, ನಿಂಗಪ್ಪ, ಉಮೇಶ,ಶರಣಪ್ಪ,ಶಿ ವು, ರುದ್ರೇಶ, ಸಿದ್ದಪ್ಪ, ಯಮನೂರ, ಕನಕಪ್ಪ, ಗವಿಸಿದ್ದಪ್ಪ, ಮಹೇಶ, ಹಾಗೂ ಚಂದೂಸಾಬ ಹಾಗೂ 15 ಜನರು ಅವಾಚ್ಯಶಬ್ದಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮೀಣ ಪಿಎಸ್ ಐ ಜೆ.ದೊಡ್ಡಪ್ಪ ಹಾಗೂ ಇತರೆ ಪೊಲೀಸ್ ಸಿಬ್ಬಂಯಿದ್ದ ಜೀಪ್ ಬರುವುದನ್ನು ಕಂಡು ಹಲ್ಲೆ ನಿರತರು ಅಲ್ಲಿಂದ ಪರಾರಿಯಾಗಿದ್ದಾರೆ, ಹಲ್ಲೆಗೊಳಗಾದ ಪೊಲೀಸ್ ಸೋಮನಾಥ,  ಪ್ರಭು ಹಾಗೂ 14 ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಗಾಯಗೊಂಡ ಸೋಮನಾಥ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next