Advertisement

24 ಗಂಟೆಗಳಲ್ಲಿ 73 ಸಾವು; ದೇಶದಲ್ಲಿ 1,000 ಗಡಿ ದಾಟಿದ ಮೃತರ ಸಂಖ್ಯೆ, 31 ಸಾವಿರ ಸೋಂಕಿತರು

08:10 AM Apr 30, 2020 | Mithun PG |

ನವದೆಹಲಿ: ದೇಶದಲ್ಲಿ ಕೋವಿಡ್-19 ಭೀತಿ ಹೆಚ್ಚಾಗುತ್ತಲೇ ಇದ್ದು ಕಳೆದ 24 ಗಂಟೆಗಳ ಅವಧಿಯಲ್ಲ್ಲಿ 73 ಜನರು ಮೃತಪಟ್ಟಿದ್ದು , ಇದು ವೈರಸ್ ಕಾಣಿಸಿಕೊಂಡಾಗಿನಿಂದ ದಾಖಲಾದ ಅತೀ ದೊಡ್ಡ ಮೊತ್ತವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಭಾರತದಲ್ಲಿ ಒಟ್ಟಾರೆಯಾಗಿ 1,007 ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 31 ಸಾವಿರದ ಗಡಿ  ದಾಟಿದೆ. ದೇಶಾದ್ಯಂತ  ಸೋಂಕಿಗೆ ತುತ್ತಾದವರಲ್ಲಿ ಸುಮಾರು 7, 696 ಮಂದಿ ಗುಣಮುಖರಾಗಿದ್ದು, ವೈರಸ್ ಕುರಿತ ಆತಂಕವನ್ನು ಕೋಂಚ ಕಡಿಮೆ ಮಾಡಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ಹೆಚ್ಚು ಕೋವಿಡ್ 19 ಸೋಂಕಿತರಿದ್ದು ಮಂಗಳವಾರ ಒಂದೇ ದಿನ 729 ಪ್ರಕರಣಗಳು ದಾಖಲಾಗಿದ್ದು, 31 ಜನರು ಮೃತಪಟ್ಟಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 9,318ಕ್ಕೆ ತಲುಪಿದ್ದು ಒಟ್ಟಾರೆ ಮೃತರ ಪ್ರಮಾಣ 400ಕ್ಕೆ ಏರಿಕೆಯಾಗಿದೆ. ಇಲ್ಲಿ ಸುಮಾರು 1.55 ಲಕ್ಷ ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಮುಂಬೈನಲ್ಲಿ 6000 ಪ್ರಕರಣಗಳು ದಾಖಲಾಗಿವೆ.

ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಗರ್ವಾಲ್, ದೇಶದಲ್ಲಿ ಕೋವಿಡ್ 19 ವೈರಸ್ ಆರ್ಭಟ ಗಣನೀಯವಾಗಿ ಇಳಿಕೆಯಾಗುತ್ತಿದೆ. ಕಳೆದ 28 ದಿನಗಳಿಂದ ದೇಶದ 17 ಜಿಲ್ಲೆಗಳಲ್ಲಿ ಒಂದೇ ಒಂದು ಹೊಸ  ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಇದರರ್ಥ ನಾವು ಇದೇ ರೀತಿಯ ನಿರ್ವಹಣೆಯನ್ನು ಮುಂದುವರೆಸಿದರೆ ದೇಶ ಶೀಘ್ರದಲ್ಲೇ ಕೋವಿಡ್ ಮುಕ್ತವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next