Advertisement

ಕೋವಿಡ್-19 ಸೇವಾ ಚಕ್ರ…

10:27 AM Apr 14, 2020 | mahesh |

ಎಲ್ಲೆಲ್ಲೂ ಕೋವಿಡ್-19 ಭಯ. ಅದರಿಂದಾಗುತ್ತಿರುವ ಪರಿಣಾಮ ತಡೆಯಲು, ಸುಮಾರು ಜನ ಸೇವಾಕರ್ತರು ಫಿಲ್ಡಿಗೆ ಇಳಿದು ಕೆಲಸ ಮಾಡುತ್ತಿದ್ದರೆ, ಚಕ್ರವರ್ತಿ ಸೂಲಿಬೆಲೆ ಅವರ ಟೀಂ ಮಾತ್ರ, ಆಫ್ ಪೀಲ್ಡ…ನಲ್ಲಿ ಕೆಲಸ  ಮಾಡುತ್ತಿದೆ. ಅದನ್ನು ಚಕ್ರವರ್ತಿ ವಿವರಿಸಿದ್ದು ಹೀಗೆ-

Advertisement

“ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳನ್ನು ಸುಧಾರಿಸುವುದು ಬಹಳ ಕಷ್ಟ. ಟಿ. ವಿ, ಮೊಬೈಲ್, ಫೇಸ್‌ಬುಕ್‌ ಎಲ್ಲವೂ ಸ್ವಲ್ಪ ದಿನದಲ್ಲೇ ಬೋರ್‌ ಹೊಡೆಸುವುದು ಗ್ಯಾರಂಟಿ. ಆಗ ಮಕ್ಕಳು ಕಿರಿಕಿರಿ ಶುರುಮಾಡುತ್ತಾರೆ. ಅವರನ್ನು ಸಂಭಾಳಿಸುವ ಉದ್ದೇಶದಿಂದಲೇ, ಯುವ ಲೈವ್‌ ಟ್ಯೂಬ್‌ ಚಾನೆಲ್‌ ಹಾಗೂ ಯುವ ಅನ್ನೋ ಫೇಸ್‌ಬುಕ್‌ ಪೇಜ್‌ ಶುರುಮಾಡಲಾಗಿದೆ. ಅದರಲ್ಲಿ ಯೋಗ, ಮಹಾಭಾರತದ ಕ್ಲಾಸ್‌ಗಳನ್ನು ಶುರು ಮಾಡಿದ್ದೇವೆ. ಮಕ್ಕಳಿಗೆ ಹಿತವಚನ ಸ್ಪರ್ಧೆ ಏರ್ಪಡಿಸಿದ್ದೇವೆ. ಇದಕ್ಕಾಗಿ, 20 ಜನ ಕೆಲಸ ಮಾಡುತ್ತಿದ್ದಾರೆ…’

ಕೊರೊನಾ ನಾಡಿಗೆ ಕಾಲಿಟ್ಟ ತಕ್ಷಣ, ಸೂಲಿಬೆಲೆ, ಒಂದು ಬ್ಲೂ ಮ್ಯಾಪ್‌ ತಯಾರು ಮಾಡಿದ್ದಾರೆ. ಕೊರೊನಾ ಹೇಗೇಗೆಲ್ಲಾ ಹಬ್ಬಿದರೆ, ಏನೇನೆಲ್ಲಾ ಆಗುತ್ತದೆ ಅನ್ನೋ ಲೆಕ್ಕಾಚಾರ ಅದರಲ್ಲಿದೆ. ಅವರ ಪ್ರಕಾರ, ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು, ಈಗಾಗಲೇ ಯೂ ಟ್ಯೂಬ್‌ನಲ್ಲಿ ಶುರು ಮಾಡಿದ್ದಾರೆ. ಈ ಕೆಲಸದಲ್ಲಿ ಅವರ ತಂಡದ 60 ಮಂದಿ ಉತ್ಸಾಹಿಗಳು ತೊಡಗಿಕೊಂಡಿದ್ದಾರೆ.

ಕೊರೊನಾ ವೈರಾಣುಗಳಿಂದ ಪಾರಾಗಲು ಪದೇಪದೆ ಕೈ ತೊಳೆಯೋದು ಸರಿ. ಆದರೆ, ಯಾವ ರೀತಿ? ನಾನು ಗಮನಿಸಿದ್ದೇನೆ, ನಲ್ಲಿಯಲ್ಲಿ ನೀರು ಬಿಟ್ಟು, ಕೈಯನ್ನು 30-40 ಸೆಕೆಂಡುಗಳ ಕಾಲ ತೊಳೆಯುತ್ತಾರೆ. ಈ ಸಂದರ್ಭದಲ್ಲಿ, ಕನಿಷ್ಠ ಎಂದರೂ ಒಂದು ಚೆಂಬು ನೀರು ಪೋಲಾಗುತ್ತದೆ, ಕೈ ತೊಳೆಯದೆ. ದಿನಕ್ಕೆ
ಹತ್ತು ಸಲ ಒಬ್ಬ ವ್ಯಕ್ತಿ ಈ ರೀತಿ ಮಾಡಿದರೆ, 10 ಚೆಂಬು ನೀರು ಒಬ್ಬ ವ್ಯಕ್ತಿಯಿಂದ ವೇಸ್ಟ್. ಹಾಗಾದರೆ, ದೇಶದ ಎಲ್ಲಾ ಜನ ಕೈ ತೊಳೆಯುವ ಸಂದರ್ಭದಲ್ಲಿ ಅದೆಷ್ಟು ಕೋಟಿ ಲೀಟರ್‌ ನೀರು ಪೋಲಾಗು ವುದೋ, ಯೋಚಿಸಿ.

ಒಂದು ಮೂಲದ ಪ್ರಕಾರ, ಈ ವರ್ಷ ಕೇವಲ ಎರಡು ತಿಂಗಳು ಮಾತ್ರ ಮಳೆ ಬರುತ್ತದಂತೆ. ಅಂದರೆ, ಮುಂದೆ, ಜಲಕ್ಷಾಮದ ಮೂಲಕವೂ ಇನ್ನೊಂದು ಹೊಡೆತ ಬೀಳಬಹುದು. ಹಾಗಾಗಿ, ಮಳೆ ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸಲು, ಲಾಕ್‌ಡೌನ್‌ ಅವಧಿ ಮುಗಿದ ನಂತರ ನಮ್ಮ ತಂಡ ಫಿಲ್ಡಿಗೆ ಇಳಿಯಲಿದೆ ಎನ್ನುತ್ತಾರೆ ಸೂಲಿಬೆಲೆ.

Advertisement

ಕೈ ತುತ್ತು ಕೊಡೋರು…
ಬೆಂಗಳೂರು ಗ್ರಾಮಾಂತರದ ವಿಜಯಪುರದಲ್ಲಿರುವ ರವಿಕುಮಾರ್‌, ಜೈ ಹಿಂದ್‌ ಯೋಧ ನಮನ ಅಂತೊಂದು ಟೀಮ್‌ ತಂಡ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಸುರೇಶ್‌ ಬಾಬು, ಚಂದನ್‌, ಸಾಗರ್‌, ಲೋಕೇಶ್‌ , ಮುರಳಿ, ಸಂತೋಷನ…, ಪ್ರಸನ್ನ ಹೀಗೆ ಒಂದಷ್ಟು ಜನ ಒಗ್ಗೂಡಿ, ಊರಿನ ಹೈಸ್ಕೂಲ್‌ ಮೈದಾನದಲ್ಲಿ ಸುಮಾರು 150 ಗಿಡಗಳನ್ನು ನೆಟ್ಟಿದ್ದಾರೆ. ಕೈಯಿಂದ ಹಣ ಹಾಕಿ, ಟ್ಯಾಂಕರ್‌ ನೀರು ತರಿಸಿ ಆ ಗಿಡಗಳಿಗೆ ಪೂರೈಸುವ ಪುಣ್ಯದ ಕೆಲಸ ಮಾಡುತ್ತಿರುವಾಗಲೇ ಕೊರೊನ ಎದುರಿಗೆ ಬಂದು ನಿಂತದ್ದು. ಮತ್ತೆ ಒಂದಷ್ಟು ಹಣ ಜೋಡಿಸಿಕೊಂಡು, ಜೇಸಿಸ್‌ ಸಂಸ್ಥೆಯ ಬಲಮುರಿ ಶ್ರೀನಿವಾಸ…, ಜನಾರ್ಧನ್‌ ಅವರೊಂದಿಗೆ ಕೈ ಜೋಡಿಸಿ, ದಿನಕ್ಕೆ 100 ಜನಕ್ಕೆ ಆಹಾ ಪೂರೈಸುವ ಕೆಲಸದಲ್ಲಿ ಈ ತಂಡ 10 ದಿನದಿಂದ ತೊಡಗಿದೆ. ಪ್ರತಿದಿನ ಆಹಾರವನ್ನು ಪ್ಯಾಕ್‌ ಮಾಡಿ, ನೀರು, ಮಾಸ್ಕ…ಗಳನ್ನು ವಿತರಿಸುತ್ತಿದೆ. ಜೊತೆಗೆ, ಕೋತಿ, ನಾಯಿಗಳಿಗೆ ಬಿಸ್ಕೆಟ್, ಬನ್ನುಗಳನ್ನು ಕೊಡುವ ಕಾಯಕ ದಲ್ಲೂ ಮುಳುಗಿದೆ. ಜೊತೆಯಲ್ಲಿ ರೋರು ಚೆನ್ನಾಗಿ
ಬದುಕಿದಾಗ ಮಾತ್ರ ನಾವೂ ಸಂತೋಷವಾಗಿ ಇರೋಕೆ ಸಾಧ್ಯ. ಅಂತಾರೆ ರವಿಕುಮಾರ್‌.

Advertisement

Udayavani is now on Telegram. Click here to join our channel and stay updated with the latest news.

Next