Advertisement

ಆರೋಗ್ಯ ಯೋಧರಿಗೆ 10 ಲಕ್ಷ ಡಾಲರ್‌ ಬಳುವಳಿ

12:54 PM May 06, 2020 | sudhir |

ಕ್ಯಾಲಿಫೋರ್ನಿಯಾ: ಕೋವಿಡ್‌-19 ವೈರಸ್‌ ಸೋಂಕು ಕಾರಣಕ್ಕೆ ಜಾಗತಿಕ ಅರ್ಥ ವ್ಯವಸ್ಥೆ ತೊಂದರೆಗೀಡಾಗಿದೆ. ಅಮೆರಿಕವೂ ಸೇರಿ ನಾನಾ ದೇಶಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತದ ಕ್ರಮಗಳು ಚಾಲ್ತಿಯಲ್ಲಿವೆ. ಇವೆಲ್ಲದರ ನಡುವೆ ಸೋಂಕಿನ ವಿರುದ್ಧ ಹಗಲು ರಾತ್ರಿಯನ್ನದೇ ಹೋರಾಟ ಮಾಡುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತೆ ಯರು, ಪೊಲೀಸರನ್ನು ಅಭಿನಂದಿಸುವ, ಗೌರವಿಸುವ ಕೆಲಸಗಳು ಗಮನಸೆಳೆಯುತ್ತಿವೆ. ಆದರೆ ಅಮೆರಿಕದಲ್ಲಿ ಅಚ್ಚರಿ ಅನ್ನಿಸುವ ರೀತಿಯಲ್ಲಿ ವೈದ್ಯಕೀಯ ಸಿಬಂದಿಗೆ ಗೌರವ ಸಲ್ಲಿಸಿದ್ದು, ಅನಾಮಧೇಯ ದಾನಿಯೊಬ್ಬರು 10 ಲಕ್ಷ ಡಾಲರ್‌ ಹಣವನ್ನು ಆಸ್ಪತ್ರೆ ಸಿಬಂದಿಗೆ ಬಳುವಳಿಯಾಗಿ ನೀಡಿದ್ದಾರೆ.

Advertisement

ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಝ್ನಲ್ಲಿರುವ ಡೊಮಿನಿಕನ್‌ ಹಾಸ್ಪಿಟಲ್‌ನ ಉದ್ಯೋಗಿಗಳಿಗೆ ಈ ಉಡುಗೊರೆ ದೊರಕಿದ್ದು, ಹಣ ನೀಡಿದ ವ್ಯಕ್ತಿ ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ ಆ ವ್ಯಕ್ತಿ ಬರೆದ ಪತ್ರ ಸಿಕಿದ್ದು, ನಮ್ಮ ಜನರನ್ನು ರಕ್ಷಿಸಿದ್ದಕ್ಕೆ ನಿಮ್ಮೆಲ್ಲರಿಗೂ ಗೌರವ ಸೂಚಿಸುತ್ತೇವೆ. ಮಾನವೀಯತೆ ಪ್ರದರ್ಶಿಸಿದ ನಿಮ್ಮ ನಡವಳಿಕೆಯೇ ಆದರ್ಶಪ್ರಾಯವಾದುದು. ನಿಮಗೊಂದು ಕಿರು ಕಾಣಿಕೆ ಇಲ್ಲಿದೆ ಎಂದು ಪತ್ರ ಬರೆದಿಡಲಾಗಿದೆ.

ಪ್ರತಿಯೊರ್ವರಿಗೂ ಹಂಚಿಕೆ
ಆ ಮೊತ್ತವನ್ನು ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿರುವ ದಾದಿಗಳು, ಸ್ವಚ್ಛತಾ ನೌಕರರು, ಲ್ಯಾಬ್‌ ಟೆಕ್ನಿಷಿಯನ್ಸ್ , ಔಷಧಾಲಯ ಸಿಬಂದಿ. ಕಾವಲುಗಾರರು ಸೇರಿದಂತೆ ಎಲ್ಲರಿಗೂ ಹಂಚಿಕೆ ಮಾಡಿದೆ ಕಾಯಂ ನೌಕರರಿಗೆ 800 ಡಾಲರ್‌ ಮತ್ತು ಅರೆಕಾಲಿಕ ನೌಕರರಿಗೆ 600 ಡಾಲರ್‌ಬೋನಸ್‌ ನೀಡಲಿದೆ ಎಂದು ತಿಳಿಸಿದೆ.

ಧನ್ಯವಾದ ಸಲ್ಲಿಸಿದ ಸಿಬಂದಿ
ಸೋಂಕು ತಡೆಗೆ ಅನೇಕ ವಾರಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದವರಿಗೆ ಕಾಣದ ಕೈಗಳು ನೀಡಿದ ಸಹಾಯ ಮತ್ತು ಗೌರವ ನೋಡಿ ಹೃದಯ ತುಂಬಿ ಬಂದಿದ್ದು, ಪ್ರತಿಯೊರ್ವ ಸಿಬಂದಿಯೂ ಭಾವುಕರಾಗಿದ್ದಾರೆ. ಅನಾಮಧೇಯ ದಾನಿಗೆ ಧನ್ಯವಾದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next