Advertisement

ಕೋವಿಡ್ ವಿರುದ್ದದ ಸೇನಾನಿಗಳಿಗೆ ಸನ್ಮಾನ

11:41 AM Jun 08, 2020 | Suhan S |

ಹುಬ್ಬಳ್ಳಿ: ಕೋವಿಡ್ ವಾರಿಯರ್ಸ್ ಗಳಾದ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸ್‌ ಸಿಬ್ಬಂದಿ ಸಲ್ಲಿಸುತ್ತಿರುವ ಸೇವೆ ಅಮೂಲ್ಯವಾಗಿದೆ ಎಂದು ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಹೇಳಿದರು.

Advertisement

ವಾರ್ಡ್‌ 52ರಲ್ಲಿ ಮಾಜಿ ಮಹಾಪೌರ ಸುಧಿಧೀರ ಸರಾಫ್‌ ಅವರ ಜನ ಸಂಪರ್ಕ ಕಚೇರಿಯಲ್ಲಿ ನಡೆದ ಕೋವಿಡ್ ವಾರಿಯರ್ಸ್‌ಗಳ ಸನ್ಮಾನ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದರು. ಪೊಲೀಸ್‌, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಪ್ರೋತ್ಸಾಹ ತುಂಬುವ ಕಾರ್ಯ ಪ್ರಧಾನಿ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ, ಅವರ ಈ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸೋಣ ಎಂದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆಯಿಂದ ಕೋವಿಡ್ ವಾರಿಯರ್ಸ್‌ಗಳಿಗೆ ಆಹಾರದ ಕಿಟ್‌ ಗಳನ್ನು ವಿತರಿಸಿ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ ಅವರ ಆಪ್ತ ಸಹಾಯಕ ಮಲ್ಲಿಕಾರ್ಜುನಗೌಡ ಪಾಟೀಲ, ಬಹಳಷ್ಟು ಸಾರ್ವಜನಿಕರು, ಜನಪ್ರತಿನಿಧಿ  ಗಳು ಕೋವಿಡ್ ವಾರಿರ್ಯಸ್‌ಗೆ ಬೆಂಬಲ ನೀಡುತ್ತಿದ್ದಾರೆ. ಎಲ್ಲಿಯೂ ಸಹ ಅವರ ಕಾರ್ಯಕ್ಕೆ ಅಡ್ಡಿಯಾಗಲಿ, ತೊಂದರೆಯಾಗಲಿ ನೀಡದೆ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರೂ ಸಹ ಮುಂದೆ ಬಂದು ಬಡವರಿಗೆ ಉಚಿತ ಆಹಾರ ಧಾನ್ಯ ವಿತರಿಸಬೇಕು ಎಂದರಲ್ಲದೇ, ಕೋವಿಡ್‌- 19ರ ವಿರುದ್ಧದ ಹೋರಾಟದಲ್ಲಿ ಇವರುಗಳು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು.

ಮಾಜಿ ಮಹಾಪೌರ ಸುಧಿಧೀರ ಸರಾಫ್‌, ಪ್ರಭು ನವಲಗುಂದಮಠ, ಶಿವು ಮೆಣಸಿನಕಾಯಿ, ಸತೀಶ ಶೇಜವಾಡಕರ, ಚಂದ್ರಶೇಖರ ಬೆಳವಾಡಿ, ರೋಹಿತ ಹುದ್ದಾರ, ವಾಸು ಸುಳ್ಳದ, ಸಂತೋಷ ಬೋಜಗಾರ, ಚಂದ್ರು ಗಾಯಕವಾಡ, ನಾಗರಾಜ್‌ ಗರಗೆ, ಮಹೇಶ ಶೇಠ, ನಾಗರಾಜ ಟಗರಗುಂಟೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next