Advertisement

ಭಾರತದಿಂದ ಬಂದವರಲ್ಲೇ ಕೋವಿಡ್‌ ಸೋಂಕು: ನೇಪಾಲ

02:05 PM Jun 11, 2020 | sudhir |

ಕಾಠ್ಮಂಡು: ನೇಪಾಲಕ್ಕೆ ಕೋವಿಡ್‌ ಸೋಂಕು ಹಬ್ಬಲು ಭಾರತವೇ ಕಾರಣ ಎಂದು ಈ ಮೊದಲು ದೂರಿದ್ದ ನೇಪಾಲದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರೀಗ ಮತ್ತೆ ಭಾರತವನ್ನು ದೂಷಿಸುವ ಮಾತುಗಳನ್ನಾಡಿದ್ದಾರೆ.

Advertisement

ಭಾರತದಿಂದ ಬಂದ ನೇಪಾಲಿಗರಲ್ಲಿ ಶೇ.85ರಷ್ಟು ಮಂದಿಗೆ ಸೋಂಕು ಇದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತದಿಂದ ಕಾರ್ಮಿಕರು ಬರುತ್ತಿದ್ದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನರು ತಾಯ್ನಾಡಿಗೆ ಬಂದಿದ್ದು, ಅವರನ್ನು ಸೂಕ್ತ ರೀತಿಯಲ್ಲಿ ಪ್ರತ್ಯೇಕವಾಗಿರಿಸಲು, ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಎಂದಿದ್ದಾರೆ.

ನೇಪಾಲದಲ್ಲಿ ಹೊಸ 279 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 4364ಕ್ಕೇರಿದೆ. ಈವರೆಗೆ 15 ಮಂದಿ ಮೃತಪಟ್ಟಿದ್ದಾರೆ. ಭಾರತದೊಂದಿಗೆ ಗಡಿ ಹಂಚಿಕೊಂಡ 2ನೇ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಇದೇ ವೇಳೆ ಕೋವಿಡ್‌ ನಿಯಂತ್ರಣಕ್ಕೆ ಒಲಿ ಅವರ ಸರಕಾರ ವಿಫ‌ಲವಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೇ ಅವರು ಭಾರತದ ಮೇಲೆ ದೂರು ಹೇಳುತ್ತಿದ್ದಾರೆ ಎಂಬುದು ಅಲ್ಲಿನ ರಾಜಕೀಯ ವಲಯ ಹೇಳುತ್ತಿದೆ. ಎರಡು ತಿಂಗಳು ಕಾಲ ಲಾಕ್‌ಡೌನ್‌ ಮಾಡಿದರೂ ನೇಪಾಲದಲ್ಲಿ ಸೋಂಕು ಹರಡುವುದು ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಕ್ವಾರಂಟೈನ್‌ ಕೇಂದ್ರಗಳೇ ಈಗ ಕೋವಿಡ್‌ ಹಾಟ್‌ಸ್ಪಾಟ್‌ಗಳಾಗಿದ್ದು ಅಲ್ಲಿ ಕೋವಿಡ್‌ ಇದ್ದವರಿಂದ ಇಲ್ಲದವರಿಗೆ ಅತಿ ಹೆಚ್ಚು ಸೋಂಕು ಹರಡಿರುವುದು ಸಾಬೀತಾಗಿದೆ. ನೇಪಾಲದ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next