Advertisement

ಬೆಂಗಳೂರಿನಲ್ಲಿ ಕೆಲಸ ಮಾಡಿದ ಮೈಸೂರಿನ 13 ಮಂದಿ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

12:27 PM Jun 20, 2020 | sudhir |

ಮೈಸೂರು : ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಮೈಸೂರಿಗೆ ಬಂದ 13 ಮಂದಿ ಕೆಎಸ್ಆರ್ ಪಿ ಸಿಬಂದಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಇದರಿಂದ ಮೈಸೂರು ಪೊಲೀಸರಲ್ಲಿ ಆತಂಕ ಮನೆಮಾಡಿದೆ.

Advertisement

ಮೇ 6ರಿಂದ 17ರ ವರೆಗೆ ಬೆಂಗಳೂರಿನಲ್ಲಿ ಡ್ಯೂಟಿ ಮಾಡಿ ಮೈಸೂರಿಗೆ ವಾಪಸಾಗಿದ್ದ ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ, ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಸಮಯ ಈ ಬ್ಯಾಚ್‌ನಲ್ಲಿ 25 ಮಂದಿ ಸಿಬ್ಬಂದಿಗಳು ಇದ್ದು ಅದರಲ್ಲಿ 13 ಮಂದಿಗೆ ಸೋಂಕು ದೃಢಪಟ್ಟಿದ್ದು ಉಳಿದ 12 ಮಂದಿಗೂ ಕೋವಿಡ್ ಸೋಂಕು ತಗಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಲಸದ ಸಮಯದಲ್ಲಿ ಎಲ್ಲಾ 25 ಮಂದಿ ಸಿಬ್ಬಂದಿಗಳು ಕೆ‌ಎಸ್‌ಆರ್‌ಪಿ ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದರು 13 ಮಂದಿಯಲ್ಲಿ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಮೈಸೂರಿನ ಪೊಲೀಸರಲ್ಲಿ ಆತಂಕ ಮನೆಮಾಡಿದೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿ ಹಿಂತಿರುಗಿದ್ದ ಹಾಸನ ಹಾಗೂ ಶಿವಮೊಗ್ಗ ಕೆಎಸ್‌ಆರ್‌ಪಿ ಪೊಲೀಸರಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next