Advertisement
ಈ ಸಂಸ್ಥೆಯ ಪ್ರಕಾರ ಡಿಸೆಂಬರ್ ತಿಂಗಳೊಂದರಲ್ಲೇ ಅಲ್ಲಿ 1 ಲಕ್ಷ ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಅವಧಿಯಲ್ಲಿ 1.80 ಕೋಟಿ ಪ್ರಕರಣಗಳು ಕಾಣಿಸಿಕೊಂಡಿವೆ. ಜನವರಿ ಮಧ್ಯಭಾಗದ ಹೊತ್ತಿಗೆ ದಿನವೂ 37 ಲಕ್ಷ ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಜ. 23ರ ವೇಳೆಗೆ 5.84 ಲಕ್ಷ ಮಂದಿ ಸಾವನ್ನಪ್ಪಲಿದ್ದಾರೆ ಎಂದು ಈ ಸಂಸ್ಥೆ ಹೇಳಿದೆ.
ವೈದ್ಯಕೀಯ ಶಿಕ್ಷಣಕ್ಕೆಂದು ಚೀನಕ್ಕೆ ತೆರಳಿದ್ದ ತಮಿಳುನಾಡು ಮೂಲಕ ವಿದ್ಯಾರ್ಥಿಯೊಬ್ಬರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಚೀನದಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ ವಿದ್ಯಾರ್ಥಿ ಅಬ್ದುಲ್ ಶೇಖ್ ಡಿ. 11ರಂದು ಭಾರತದಿಂದ ವಾಪಸ್ ಆಗಿದ್ದರು. ಅಲ್ಲಿಗೆ ಹೋದ ಮೇಲೆ ದಿಢೀರ್ ಆರೋಗ್ಯದಲ್ಲಿ ಬದಲಾವಣೆಯಾಗಿ ಸಾವನ್ನಪ್ಪಿದ್ದಾರೆ. ಇವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.