Advertisement

ಕೊರೊನಾ ವೈರಾಣುಗಳಿಗೆ ಪೂರ್ವಜರಿಲ್ಲ! ಬ್ರಿಟನ್‌, ನಾರ್ವೆ ಸಂಶೋಧಕರ ವಾದ

08:03 AM May 31, 2021 | Team Udayavani |

ವಾಷಿಂಗ್ಟನ್‌: ಕೊರೊನಾ ವೈರಾಣುಗಳಿಗೆ ಯಾವುದೇ ನೈಸರ್ಗಿಕ ಮೂಲ ವೈರಾಣುಗಳು ಇಲ್ಲ. ಅವುಗಳನ್ನು ಪ್ರಯೋಗಾಲಯದಲ್ಲಿ ನಾನಾ ವೈರಾಣುಗಳ ವಂಶ ವಾಹಿಗಳನ್ನು ಸೇರಿಸಿ ತಯಾರಿಸಲಾಗಿದೆ ಎಂದು ಬ್ರಿಟನ್‌ನ ಒಬ್ಬ ಪ್ರಾಧ್ಯಾಪಕ ಮತ್ತು ನಾರ್ವೆಯ ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ.

Advertisement

ಬ್ರಿಟನ್‌ನ ಪ್ರೊ| ಆ್ಯಂಗಸ್‌ ಡಾಲ್ಗೆ„ಸ್‌ ಹಾಗೂ ನಾರ್ವೆಯ ಡಾ| ಬಿರ್ಗರ್‌ ಸೊರೊನ್ಸನ್‌ ಎಂಬವರು ಕೊರೊನಾ ವೈರಾಣುಗಳ ಉಗಮ ಹಾಗೂ ಅದರ ಪೂರ್ವಜ ವೈರಾಣುಗಳ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದಾರೆ. ಅವರ ಪ್ರಕಾರ, ಚೀನದ ಗುಡ್ಡಗಾಡು ಪ್ರದೇಶಗಳ ಗವಿಗಳಲ್ಲಿ ವಾಸಿಸುವ ಬಾವಲಿಗಳಲ್ಲಿ ಕೊರೊನಾ ವೈರಾಣುಗಳು ಪತ್ತೆಯಾಗಿವೆ. ಆ ವೈರಾಣು ಗಳ ಮೇಲ್ಮೆ„ನಲ್ಲಿ ಮೊಳೆಯಂಥ ಒಂದು ಸ್ಪೈಕ್‌ ಇತ್ತು. ಅದನ್ನು ಪ್ರಯೋಗಾಲಯದಲ್ಲಿ ಸಂಗ್ರಹಿಸಿ, ಅಂಥ ಅನೇಕ ಸ್ಪೈಕ್‌ಗಳುಳ್ಳ ಕೊರೊನಾ ವೈರಾಣುವನ್ನು ತಯಾ ರಿಸಲಾಗಿದೆ. ಅದನ್ನೇ ತಮ್ಮ ಸಂಶೋಧನ ವರದಿಯಲ್ಲಿ ಉಲ್ಲೇಖೀಸಿದ್ದಾರೆ. ಅದನ್ನು ಆಧರಿಸಿ “ಡೈಲಿ ಮೈಲ್‌’ ವರದಿ ಮಾಡಿದೆ. ಎಲ್ಲರ ಅನುಮಾನವೀಗ ಪುನಃ ಚೀನ ದ‌ ವುಹಾನ್‌ ವೈರಾಲಜಿ ಲ್ಯಾಬ್‌ನ ಕಡೆಗೆ ಹೊರಳಿದೆ.

ಮತ್ತಷ್ಟು ಇಳಿಮುಖ: ದೇಶದಲ್ಲಿ ಅಬ್ಬರಿಸುತ್ತಿದ್ದ ಕೊರೊನಾ ಸೋಂಕು ನಿಧಾನಕ್ಕೆ ಇಳಿಮುಖವಾಗುತ್ತಿದೆ. ಶನಿವಾರದಿಂದ ರವಿವಾರ‌ದ ಅವಧಿಯಲ್ಲಿ 1,65,553 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ದೈನಂದಿನ ಪಾಸಿಟಿವಿಟಿ ಪ್ರಮಾಣವೂ ಶೇ.8.02 ಆಗಿದೆ. ಸತತ ಹತ್ತು ದಿನಗಳಿಂದ ಪಾಸಿಟಿವಿಟಿ ಪ್ರಮಾಣವೂ ನಿಯಂತ್ರ ಣದಲ್ಲಿದೆ. 24 ಗಂಟೆಗಳ ಅವಧಿಯಲ್ಲಿ 3,460 ಮಂದಿ ಕೊರೊನಾದಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಶನಿವಾರ ಒಂದೇ ದಿನ 20,63,839 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಸಕ್ರಿಯ ಕೇಸುಗಳ ಸಂಖ್ಯೆ 21,14,508 ಆಗಿದೆ ಮತ್ತು ಚೇತರಿಕೆ ಪ್ರಮಾಣ ಶೇ.91.25ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next