Advertisement
ಮೇಲಿನ ಮೂವರು ಮಾತ್ರವಲ್ಲ, ಕಿಡ್ನಿಗೆ ಸಂಬಂಧಿಸಿದ ಕಾಯಿಲೆ, ಧೀರ್ಘಕಾಲದ ಶ್ವಾಸಕೋಶದ ಸಮಸ್ಯೆ (ಸಿಒಪಿಡಿ), ಕೆಂಪು ರಕ್ತ ಕಣಗಳಿಗೆ ಸಂಬಂಧಿಸಿದ ಸಿಕಲ್ ಸೆಲ್ ಅನಿಮಿಯ, ಅಂಗಾಂಗ ಕಸಿ ಪ್ರಕ್ರಿಯೆಗೆ ಒಳಪಟ್ಟವರು, ಟೆ„ಪ್ 2 ಮಧುಮೇಹ ಹೊಂದಿರುವವರು ಸಹ ಕೋವಿಡ್ ಅಪಾಯಕ್ಕೆ ತೀರಾ ಹತ್ತಿರದಲ್ಲಿದ್ದಾರೆ. ಈ ಸಮಸ್ಯೆಗಳನ್ನು ಹೊಂದಿರುವವರ ವಯಸ್ಸು ಎಷ್ಟೇ ಆಗಿದ್ದರೂ, ಯಾವುದೇ ಸಂದರ್ಭದಲ್ಲಾದರೂ ಸೋಂಕು ತಗುಲಬಹುದು ಎಂದು ಸಿ.ಡಿ.ಸಿ. ಸಂಶೋಧಕರು ಹೇಳಿದ್ದಾರೆ.ಇದೇ ವೇಳೆ, “”ಅಸ್ತಮಾ ಸೇರಿ ಶ್ವಾಸಕೋಶದ ಇತರ ಎಲ್ಲ ಕಾಯಿಲೆಗಳು, ನರವಿಜ್ಞಾನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಪಿತ್ತಜನಕಾಂಗದ ತೊಂದರೆ ಹೊಂದಿರುವವರು ಹಾಗೂ ಈ ಹಿಂದೆ ಪಾರ್ಶ್ವವಾಯುವಿಗೆ ತುತ್ತಾದವರಿಗೂ ಸೋಂಕು ತಗುಲುವ ಅಪಾಯವಿದೆ. ರೋಗ ನಿರೋಧಕ ವ್ಯವಸ್ಥೆ ಉತ್ತಮವಾಗಿದ್ದರೆ ಮಾತ್ರ ಈ ಸೋಂಕಿನಿಂದ ಪಾರಾಗಬಹುದು” ಎಂದು ಸಿಡಿಸಿ ಉಪನಿರ್ದೇಶಕ ಡಾ| ಜೇಯ್ ಬಟ್ಲರ್ ಹೇಳಿದ್ದಾರೆ.
ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ಕಡಿಮೆ ಬೆಲೆಯ ಸ್ಟಿರಾಯ್ಡ, ಡೆಕ್ಸಾಮೆಥಾಸೋನ್ ಬಳಕೆಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಮಧ್ಯಮ ಮತ್ತು ಗಂಭೀರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ಮಿಥೈಲ್ಪ್ರಡ್ನಿಸೊಲೋನ್ಗೆ ಬದಲು ಡೆಕ್ಸಾಮೆಥಾಸೋನ್ ಬಳಸುವಂತೆ ಸೂಚಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಕೋವಿಡ್ ಕ್ಲಿನಿಕಲ್ ಪ್ರೋಟೊಕಾಲ್ ಪರಿಷ್ಕರಿಸಿದ್ದು, ಡೆಕ್ಸಾಮೆಥಾಸೋನ್ ಬಳಕೆಗೆ ಶಿಫಾರಸ್ಸು ಮಾಡಿದೆ. ಈಗಾಗಲೇ ಡೆಕ್ಸಾಮೆಥಾಸೋನ್‌ನ್ನು ಸಂಧಿವಾತ ಸೇರಿದಂತೆ ಹಲವು ರೋಗಗಳ ಚಿಕಿತ್ಸೆ ವೇಳೆ ಉರಿಯೂತ ಶಮನಕ್ಕಾಗಿ ಬಳಸಲಾಗುತ್ತದೆ. ಇದೀಗ ಕೋವಿಡ್ ಚಿಕಿತ್ಸೆಗೂ ಇದನ್ನು ಬಳಸಲು ಶಿಫಾರಸ್ಸು ಮಾಡಲಾಗಿದೆ. ಆಮ್ಲಜನಕದ ಪೂರೈಕೆಯ ಅಗತ್ಯವಿರುವ ಮತ್ತು ಅತಿಯಾದ ಉರಿಯೂತದ ಸಮಸ್ಯೆ ಹೊಂದಿರುವ ಕೋವಿಡ್ ರೋಗಿಗಳಿಗೆ ಇದನ್ನು ಬಳಸಬಹುದು ಎಂದು ತಿಳಿಸಲಾಗಿದೆ. ಕಳೆದ 60 ವರ್ಷಗಳಿಂದ ಕಡಿಮೆ ಡೋಸ್‌ನ ಡೆಕ್ಸಾಮೆಥಾಸೋನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅತ್ಯಂತ ಅಗ್ಗದ ಔಷಧವಾಗಿದೆ. ಕೋವಿಡ್ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಎಂಬುದು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ಇದನ್ನು ನೀಡಿದಾಗ ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಸಚಿವಾಲಯ ತಿಳಿಸಿದೆ.