Advertisement
ಯಾವ ಲಸಿಕೆ ಉತ್ತಮವಾಗಿದೆ? :
Related Articles
Advertisement
ಕೋವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಶೀಘ್ರದಲ್ಲೇ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ರಾಜ್ಯ ಸರಕಾರಗಳು ಕೂಡ ಇವುಗಳನ್ನು ಖರೀದಿಸಲು ಮತ್ತು ಬಳಸಲು ಸಾಧ್ಯವಾಗುತ್ತದೆ. ಸ್ಪುಟ್ನಿಕ್ ವಿ ಲಸಿಕೆ ಕೂಡ ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಒಂದು ಕೊವಿಶೀಲ್ಡ್ ಡೋಸ್ ಬೆಲೆಯನ್ನು ರಾಜ್ಯ ಸರಕಾರ ಗಳಿಗೆ 300 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ಎಂದು ನಿಗದಿಪಡಿಸಿದೆ. ಆದರೆ ಕೋವ್ಯಾಕ್ಸಿನ್ ಸ್ವಲ್ಪ ದುಬಾರಿ ಯಾಗಿದೆ. ಇದು ರಾಜ್ಯ ಸರಕಾರಗಳಿಗೆ 400 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1,200 ರೂ.ಗಳಿಗೆ ಲಭ್ಯವಿರುತ್ತದೆ.
ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಆರ್‌ಡಿಐಎಫ್ ಮುಖ್ಯಸ್ಥ ಡಿಮಿಟ್ರೆವ್ ಪ್ರಕಾರ ಈ ಲಸಿಕೆ 700 ರೂ.ಗಳಿಗೆ ಲಭ್ಯವಿರಲಿದೆ. ರಾಜ್ಯ ಸರಕಾರಗಳು ಮತ್ತು ಖಾಸಗಿ ಆಸ್ಪತ್ರೆ ಗಳಿಗೆ ದರಗಳನ್ನು ಬಹಿರಂಗಪಡಿಸಿಲ್ಲ. 24 ರಾಜ್ಯಗಳು ಇಲ್ಲಿಯ ವರೆಗೆ 18+ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿವೆ.
ಲಸಿಕೆ ಡೋಸ್‌ಗಳ ನಡುವಿನ ವಾರಗಳ ಅಂತರ ಎಷ್ಟು ? :
ಈ ಎಲ್ಲ ಮೂರು ಲಸಿಕೆಗಳ :
ಎರಡು ಡೋಸ್ ಅನ್ನು ತೆಗೆದುಕೊಂಡರೆ ಕೊರೊನಾದ ತೀವ್ರತೆಯಿಂದ ಪಾರಾಗಲು ಸಾಧ್ಯವಾಗುತ್ತದೆ. ಅಂದರೆ ಕೊರೊನಾ ವಿರುದ್ಧ ಪ್ರತಿರಕ್ಷಣ ಪ್ರತಿಕ್ರಿಯೆಗಾಗಿ ಎರಡು ಡೋಸ್‌ಗಳು ಆವಶ್ಯಕ. ಈ ಲಸಿಕೆ ಇಂಟ್ರಾಮಸ್ಕಾಲರ್ ಆಗಿದೆ. ಅಂದರೆ ಇಲ್ಲಿ ಭುಜದ ಬಳಿ ತೋಳಿನ ಸ್ನಾಯುಗಳಿಗೆ ಚುಚ್ಚಲಾಗುತ್ತದೆ.
ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳನ್ನು 4ರಿಂದ 6 ವಾರಗಳ ಅಂತರದಲ್ಲಿ ನೀಡಲಾಗು ತ್ತದೆ. 6-8 ವಾರಗಳ ಅಂತರದೊಂದಿಗೆ ಕೊವಿಶೀಲ್ಡ್‌ನ ಎರಡು ಡೋಸ್ ನೀಡಬೇಕಾ ಗುತ್ತದೆ. ಇವೆರಡರ ಮಧ್ಯೆ ಮೂರು ವಾರ ಗಳ ಅಂತರವಿದೆ. ಆದರೆ ಸ್ಪುಟ್ನಿಕ್ ವಿಯನ್ನು ತೆಗೆದುಕೊಳ್ಳುವ ಅಂತರ 21 ದಿನಗಳು.
ಆರಂಭದಲ್ಲಿ ಭಾರತದಲ್ಲಿ ಎರಡು ಡೋಸ್ ಕೊವಿಶೀಲ್ಡ್ ಅನ್ನು 4-6 ವಾರಗಳ ಅಂತರದಲ್ಲಿ ಇರಿಸಲಾಗಿತ್ತು. ಆದರೆ ಕೊವಿಶೀಲ್ಡ್‌ನ ಎರಡನೇ ಡೋಸ್ ಅನ್ನು ಇನ್ನಷ್ಟು ಮುಂದೂಡಿದರೆ ಅದರ ಪರಿಣಾಮಕತ್ವ ಹೆಚ್ಚಾಗುತ್ತದೆ ಎಂದು ಪ್ರಯೋಗಗಳಲ್ಲಿ ತಿಳಿದುಬಂದಿದೆ.
ಹೊಸ ರೂಪಾಂತರಗಳಿಗೆ ಈ ಲಸಿಕೆ ಎಷ್ಟು ಪರಿಣಾಮಕಾರಿ? :
ಕೋವಿಡ್ ವೈರಸ್‌ನ ಹಲವಾರು ಹೊಸ ರೂಪಾಂತರಿತ ತಳಿಗಳು ಅನೇಕ ದೇಶಗಳಲ್ಲಿವೆ. ಯುಕೆ ಕೆಂಟ್ ತಳಿಗಳು, ಬ್ರೆಜಿಲ್, ದ. ಆಫ್ರಿಕಾದ ತಳಿಗಳು ಮತ್ತು ಡಬಲ್ ರೂಪಾಂತರಿತ ಮತ್ತು ಟ್ರಿಪಲ್ ರೂಪಾಂತರಿತ ತಳಿಗಳು ಅನೇಕ ದೇಶಗಳಲ್ಲಿ ಕಂಡುಬಂದಿವೆ. ಈ ರೂಪಾಂತರಗಳ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ ಎಂಬುದು ಸಾಬೀತಾಗಿದೆ. ಕೊವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಕೂಡ ಸಮರ್ಥವಾಗಿದ್ದು ಲಸಿಕೆಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಇವುಗಳು ಕೋವಿಡ್ ವಿರುದ್ಧ ಹೋರಾಡುವುದರಲ್ಲಿ ಎರಡು ಮಾತಿಲ್ಲ.
ಅಡ್ಡಪರಿಣಾಮಗಳು ? :
ಈ ಮೂರೂ ಲಸಿಕೆಗಳು ಒಂದೇ ತೆರನಾದ ಅಡ್ಡ ಪರಿಣಾಮ ಗಳನ್ನು ಹೊಂದಿವೆ. ಒಳ-ಸ್ನಾಯು ಮತ್ತು ಕೈಗೆ ಆಳವಾಗಿ ಚುಚ್ಚಲಾಗುತ್ತದೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ನೋವು, ಊತಕ್ಕೆ ಕಾರಣವಾಗುತ್ತದೆ. ಅಂತೆಯೇ ಲಘು ಜ್ವರ, ಸೌಮ್ಯ ಶೀತ, ತಲೆನೋವು, ಕೈ ಕಾಲುಗಳ ನೋವು ಕೂಡ ಕಾಣಿಸಿಕೊಳ್ಳಬಹುದು. ಆದರೆ ಇವುಗಳು ಕಡಿಮೆಯಾಗುತ್ತವೆ. ಆದರೆ ಇದಕ್ಕಾಗಿ ಯಾರೂ ಹೆದರುವ ಅಗತ್ಯ ಇಲ್ಲ ಎಂದು ತಜ್ಞರು ಪುನರುಚ್ಚರಿಸಿದ್ದಾರೆ.
ಈ ಲಸಿಕೆಗಳ ಪರಿಣಾಮ ಎಷ್ಟು ಕಾಲ ಉಳಿಯುತ್ತದೆ? :
ಈ ಎಲ್ಲ ಲಸಿಕೆಗಳನ್ನು ಬಹಳ ಕಡಿಮೆ ಸಮಯದಲ್ಲಿ ತಯಾರಿಸ ಲಾಗಿದೆ. ಇದು ಎಷ್ಟು ಸಮಯದವರೆಗೆ ಪರಿಣಾಮಕಾರಿ ಎಂಬು ದನ್ನು ಪ್ರಯೋಗಗಳು ಸಾಬೀತು ಮಾಡಿಲ್ಲ. ಈ ಕಾರಣಕ್ಕಾಗಿ ಅವು ಎಷ್ಟು ಸಮಯದವರೆಗೆ ಪರಿಣಾಮ ಬೀರುತ್ತವೆ ಎಂದು ಹೇಳುವುದು ತುಂಬಾ ಕಷ್ಟ. ಅದೇನೇ ಇದ್ದರೂ ಕೊರೊನಾ ವಿರುದ್ಧದ ಪ್ರತಿಕಾಯಗಳು ಕನಿಷ್ಠ 9ರಿಂದ 12 ತಿಂಗಳ ವರೆಗೆ ಪರಿಣಾಮಕಾರಿ ಯಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಇತ್ತೀಚೆಗೆ ಫೈಜರ್ ಲಸಿಕೆಗೆ ಸಂಬಂಧಿಸಿದ ವರದಿಯಂತೆ ಒಂದು ವರ್ಷದೊಳಗೆ ಮೂರನೇ ಡೋಸ್ ಅಗತ್ಯವಿರಬಹುದು. ಈ ಕುರಿತಂತೆ ಅಧ್ಯಯನ ಮುಂದು ವರಿದಿದ್ದು, ಆದಷ್ಟು ಬೇಗ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.
ಹೇಗೆ ತಯಾರಿಸಲಾಗುತ್ತದೆ? :
ಕೋವ್ಯಾಕ್ಸಿನ್ ಅನ್ನು ಸತ್ತ ವೈರಸ್‌ನಿಂದ ತಯಾ ರಿಸಲಾಗುತ್ತದೆ. ಹೀಗಾಗಿ ಇದು ಪ್ರತಿಕಾಯದ ಪ್ರತಿಕ್ರಿಯೆಯನ್ನು ದೇಹದಲ್ಲಿ ಉಂಟುಮಾಡುತ್ತದೆ. ಜತೆಗೆ ದೇಹವು ವೈರಸ್ ಅನ್ನು ಗುರುತಿಸಿ ಅದರ ವಿರುದ್ಧ ಹೋರಾಡಲು ಸಿದ್ಧವಾಗುತ್ತದೆ.
ಕೊವಿಶೀಲ್ಡ್ ಎಂಬುದು ವೈರಲ್ ವೆಕ್ಟರ್ ಲಸಿಕೆ. ಕೊರೊನಾ ವೈರಸ್‌ನಂಥೆ ಸ್ಪೈಕ್ ಪ್ರೊಟೀನ್ ಅನ್ನು ರಚಿಸಲು ಇದು ಚಿಂಪಾಂಜಿಗಳಲ್ಲಿ ಕಂಡುಬರುವ ಅಡೆನೊ ವೈರಸ್ ChAD0x1 ಅನ್ನು ಬಳಸುತ್ತದೆ. ಇದು ದೇಹಕ್ಕೆ ರಕ್ಷಣೆ ನೀಡುತ್ತದೆ.
ಸ್ಪುಟ್ನಿಕ್ ವಿ ಕೂಡ ವೈರಲ್ ವೆಕ್ಟರ್ ಲಸಿಕೆಯಾ ಗಿದೆ. ಆದರೆ ವ್ಯತ್ಯಾಸವೆಂದರೆ ಇದನ್ನು ಒಂದರ ಬದಲು ಎರಡು ವೈರಸ್‌ಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಎರಡೂ ಪ್ರಮಾಣಗಳು ವಿಭಿನ್ನವಾಗಿವೆ.