Advertisement

ICMR: ಯುವಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ… ಐಸಿಎಂಆರ್ ವರದಿ

11:41 AM Nov 21, 2023 | Team Udayavani |

ನವದೆಹಲಿ: ಯುವಜನರಲ್ಲಿ ಹಠಾತ್ ಸಾವಿನ ಹೆಚ್ಚಳಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ಹೇಳಿದೆ.

Advertisement

ಇದಲ್ಲದೆ, ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಅಂತಹ ಅಪಾಯದಿಂದ ಪಾರಾಗುವುದು ಹೆಚ್ಚು ಎಂದು ಅಧ್ಯಯನ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣ ಹೆಚ್ಚಾಗಿದ್ದು, ಕೋವಿಡ್ ಲಸಿಕೆ ಸ್ವೀಕಾರದಿಂದಾಗಿ ಯುವಜನರಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವಾಗಲೇ ಐಸಿಎಂಆರ್‌ನ ಅಧ್ಯಯನ ವರದಿ ಹೊರಬಿದ್ದಿರುವುದು ಗಮನಾರ್ಹ. ಅಷ್ಟು ಮಾತ್ರವಲ್ಲದೆ ಜನರ ಜೀವನಶೈಲಿಯಲ್ಲಿನ ಬದಲಾವಣೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಅಧ್ಯಯನವು ಒತ್ತಿಹೇಳಿದೆ.

ಈ ಅಧ್ಯಯನವು ಅಕ್ಟೋಬರ್ 1, 2021 ರಿಂದ ಮಾರ್ಚ್ 31, 2023 ರವರೆಗೆ ದೇಶದ 47 ಆಸ್ಪತ್ರೆಗಳ ಮೇಲೆ ಕೇಂದ್ರೀಕರಿಸಿದೆ. ಜೊತೆಗೆ ಈ ಅಧ್ಯಯನವು 18 ರಿಂದ 45 ವರ್ಷ ವಯಸ್ಸಿನ ಜನರನ್ನು ಒಳಗೊಂಡಿದೆ ಎಂದು ಹೇಳಲಾಗಿದ್ದು ಇಲ್ಲಿ ವ್ಯಕ್ತಿಗಳು ಯಾವುದೇ ಕಾಯಿಲೆಯಿಂದ ಬಳಲದೆ ಹಠಾತ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು. ಅಂತಹ 729 ಪ್ರಕರಣಗಳನ್ನು ತಂಡವು ಅಧ್ಯಯನ ಮಾಡಿದೆ.

ಅಧ್ಯಯನದ ಬಳಿಕ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಹಠಾತ್ ಸಾವಿನ ಅಪಾಯವನ್ನು ಕಡಿಮೆ ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ. ಜೊತೆಗೆ ಒಂದೇ ಡೋಸ್ ತೆಗೆದುಕೊಂಡವರು ಕೂಡಾ ಕಡಿಮೆ ಅಪಾಯದ ಮಟ್ಟವನ್ನು ಹೊಂದಿರುತ್ತಾರೆ ಎಂದು ಅಧ್ಯಯನ ಹೇಳಿದೆ.

Advertisement

ಇದನ್ನೂ ಓದಿ: Agra Wedding: ಮದುವೆ ಸಮಾರಂಭದಲ್ಲಿ ರಸಗುಲ್ಲಾಕ್ಕಾಗಿ ಮಾರಾಮಾರಿ… 6 ಮಂದಿ ಆಸ್ಪತ್ರೆಗೆ

Advertisement

Udayavani is now on Telegram. Click here to join our channel and stay updated with the latest news.

Next