Advertisement

ಒಲಿಂಪಿಯನ್ ಗಳಿಗೆ ಕೋವಿಡ್ ಲಸಿಕೆ

05:40 PM Jun 07, 2021 | Team Udayavani |

ಹೊಸದಿಲ್ಲಿ: ಕೋವಿಡ್‌ನಿಂದ ಚೇತರಿಸಿದ, ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ಭಾರತದ 5 ಮಂದಿ ಕ್ರೀಡಾಪಟುಗಳು ಕೂಡಲೇ ಮೊದಲ ಡೋಸ್‌ ಲಸಿಕೆ ಪಡೆಯಬೇಕು ಎಂಬುದಾಗಿ ಐಒಎ ಸೂಚಿಸಿದೆ.

Advertisement

2018ರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್‌ ಸಿಮ್ರನ್‌ಜಿತ್‌ ಕೌರ್‌ (60 ಕೆ.ಜಿ.) ಇವರಲ್ಲೊಬ್ಬರು.

ಉಳಿದ ನಾಲ್ಕೂ ಮಂದಿ ಶೂಟರ್ ಗಳಾಗಿದ್ದಾರೆ. ಇವರೆಂದರೆ 19 ವರ್ಷದ ಪ್ರತಿಭಾನ್ವಿತ ಶೂಟರ್‌ ಸೌರಭ್‌ ಚೌಧರಿ, ರಾಹಿ ಸರ್ನೋಬತ್‌, ದೀಪಕ್‌ ಕುಮಾರ್‌ ಮತ್ತು ಮೈರಾಜ್‌ ಅಹ್ಮದ್‌ ಶೇಖ್‌.

Advertisement

Udayavani is now on Telegram. Click here to join our channel and stay updated with the latest news.

Next