Advertisement

ಕಡಲ ಕಿನಾರೆಯಲ್ಲಿ ಕೋವ್ಯಾಕ್ಸಿನ್ ಗೆ ಸ್ವಾಗತ ವೆಲ್ ಕಂ ವ್ಯಾಕ್ಸಿನ್ ಎಂದ ಸ್ಯಾಂಡ್ ಥೀಂ ಉಡುಪಿ

09:44 PM Jan 16, 2021 | Team Udayavani |

ಕುಂದಾಪುರ : ಕೋವಿಡ್ ಹಾವಳಿಯಿಂದ ಇಡೀ ವಿಶ್ವವೇ ಹೈರಾಣಾಗಿದೆ. ಅದೆಷ್ಟೋ ಮಂದಿ ನಲುಗಿದ್ದಾರೆ. ಇನ್ನೆಷ್ಟೋ ಮಂದಿ ಜೀವ ಕಳೆದುಕೊಂಡಿದ್ದಾರೆ. ಆದರೆ, ಇಂದಿನ ದಿನ ಭಾರತೀಯರು ಕೊಂಚ ನಿರಾಳರಾಗುವ ದಿನ. ಯಾಕೆಂದರೆ ಇಂದಿನಿಂದ ಕೋವ್ಯಾಕ್ಸಿಕ್ ಚುಚ್ಚುಮದ್ದು ನೀಡಲಾಗುತ್ತಿದೆ.

Advertisement

ಕೋವಿಡ್ ಭೀತಿಯಿಂದಲೇ ನೀವೇನಾದರೂ ಕೋಟೇಶ್ವರ ಹಳೆ – ಅಳಿವೆ ಕೋಡಿ ಬೀಚ್ ಗೆ ಭೇಟಿ ನೀಡಿದರೆ ಮತ್ತಷ್ಟು ಖುಷಿಯಾಗ್ತಿರಾ.ಯಾಕೆಂದರೆ, ಕಡಲ ತಟದಲ್ಲಿ ‘ವೆಲ್ ಕಂ ವ್ಯಾಕ್ಸಿನ್’ ಶೀರ್ಷಿಕೆಯಡಿ ಮರಳು ಶಿಲ್ಪವೊಂದು ನಿಮ್ಮನ್ನು ಸ್ವಾಗತಿಸುತ್ತದೆ.7 ಇಂಚು ಅಗಲ ಮತ್ತು 4 ಅಡಿ ಎತ್ತರದ ಈ ಮರಳು ಶಿಲ್ಪವನ್ನು ‘ಸ್ಯಾಂಡ್ ಥೀಂ’ ಉಡುಪಿ ತಂಡವು ರಚಿಸಿದೆ. ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಜೈ ನೇರಳಕಟ್ಟೆಯವರ ಕೈಚಳಕ ಈ ಮರಳು ಶಿಲ್ಪದಲ್ಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next