Advertisement

ಅಧಿಕಾರಿಗಳು ಸಿಬ್ಬಂದಿಯಿಂದ ಸಮಗ್ರ ಮಾಹಿತಿ ಸಂಗ್ರಹಿಸಿ

07:13 PM Dec 07, 2020 | Suhan S |

ಕೂಡ್ಲಿಗಿ: ಶೀಘ್ರದಲ್ಲೇ ಕೋವಿಡ್‌ ಲಸಿಕೆ ಲಭ್ಯ ವಾಗಲಿದ್ದು ಆಯಾ ಕಚೇರಿ ಸಿಬ್ಬಂದಿಯಿಂದ ಮಾಹಿತಿ ಯನ್ನು ಎಲ್ಲ ಅಧಿಕಾರಿಗಳು ಸಂಗ್ರಹಿಸಬೇಕು ಎಂದು ಕೂಡ್ಲಿಗಿ ಟಿಎಚ್‌ಓ ಷಣ್ಮುಖನಾಯ್ಕ ತಿಳಿಸಿದರು.

Advertisement

ಅವರು ತಾಲೂಕು ಕಚೇರಿಯಲ್ಲಿ ಕೋವಿಡ್‌ ಲಸಿಕೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. ಸರ್ಕಾರದ ನಿರ್ದೇಶನದಂತೆ ಪ್ರಾಥಮಿಕವಾಗಿ ಆರೋಗ್ಯ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನೀಡಲಿದ್ದು, ತದನಂತರ ಎಲ್ಲಕಚೇರಿಗಳ ಸಿಬ್ಬಂದಿಗೆ ಲಸಿಕೆ ನೀಡುವ ಮಾಹಿತಿ ಇದೆ. ಅದರ ಜೊತೆ ತುರ್ತು ಆರೋಗ್ಯ ಸಮಸ್ಯೆ ಇರುವವರಿಗೆ ಈ ಲಸಿಕೆ ನೀಡಬೇಕೆಂಬ ನಿರ್ದೇಶನವೂ ಇದೆ. ಆದ್ದರಿಂದ ತಮ್ಮ ಇಲಾಖೆ ಸಿಬ್ಬಂದಿ ಮಾಹಿತಿ ಜೊತೆಗೆ ಮುಂದಿನ ಹಂತದಲ್ಲಿ ಯಾವುದೇ ಸಾರ್ವಜನಿಕರಿಗೂ ತೊಂದರೆಯಾಗದಂತೆ ಅಧಿ ಕಾರಿಗಳು ಹಾಗೂ ಗ್ರಾಪಂ ಸಿಬ್ಬಂದಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಬಿಪಿ, ಸಕ್ಕರೆ ಕಾಯಿಲೆ, ಹೃದಯ ರೋಗ ಸೇರಿದಂತೆ ವಿವಿಧ ರೋಗಗಳಿಂದ ಬಳಲುತ್ತಿರುವ ನಾಗರಿಕರ ಪಟ್ಟಿಮಾಡಿ ಎಂದು ಸೂಚಿಸಿದರು.

ಶೀಘ್ರದಲ್ಲಿಯೇ ಗ್ರಾಪಂ ಚುನಾವಣೆ ಸಮೀಪದಲ್ಲಿಯೇ ಇದ್ದು, ಎರಡನೇ ಹಂತದ ಕೋವಿಡ್‌ ಅಲೆ ಎದುರಾಗುವ ಭೀತಿಯಿದೆ. ಆದ್ದರಿಂದ ಚುನಾವಣೆಗಳಲ್ಲಿ ಅಧಿ ಕಾರಿಗಳು ಜನರಿಗೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್‌ ಬಳಸಿ ರೋಗದ ಬಗ್ಗೆ ಎಚ್ಚರ ವಹಿಸಲು ಸೂಚನೆ ನೀಡಬೇಕೆಂದರು. ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ ಎಸ್‌. ಮಹಾಬಲೇಶ್ವರ ಮಾತನಾಡಿ, ಈಗಾಗಲೇ ಈ ಕುರಿತು ಡಿಸಿಯವರು ಸೂಕ್ತ ನಿರ್ದೇಶನ ನೀಡಿದ್ದು ಲಸಿಕೆ ಯಾವುದೇ ಹಂತದಲ್ಲಿ ನಮಗೆ ಬರಬಹುದು. ಆದ್ದರಿಂದ ಎಲ್ಲ ಇಲಾಖೆಯ ಸಿಬ್ಬಂದಿಗಳ ಮಾಹಿತಿ ಪಟ್ಟಿಯನ್ನು ತಯಾರಿಸಿಕೊಳ್ಳಲು ಸೂಚಿಸಿದ್ದಾರೆ.

ಆದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಪಟ್ಟಿ ತಯಾರು ಮಾಡಿಕೊಳ್ಳಬೇಕು ಎಂದರು. ಗ್ರಾಪಂ ಚುನಾವಣೆ ಎದುರಾಗುತ್ತಿದ್ದು ಪಿಡಿಓ ಹಾಗೂ ಗ್ರಾಪಂ ಅಧಿಕಾರಿಗಳು ಮೊದಲ ಹಂತವಾಗಿ ಮತದಾನ ಕೆಂದ್ರದ ಮೂಲ ಸೌಲಭ್ಯಗಳನ್ನು ತಯಾರು ಮಾಡಿ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಿ ಎಂದು ತಿಳಿಸಿದರು. ಈ ಸಮಯದಲ್ಲಿ ಡಿವೈಎಸ್‌ಪಿ ಹರೀಶ್‌, ಇಓ ಜಿ.ಎಂ. ಬಸಣ್ಣ, ಪಪಂ ಮುಖ್ಯಾಧಿಕಾರಿ ಸಿ. ಪಕೃದ್ದೀನ್‌, ಬಿಇಓ ಉಮಾದೇವಿ, ಸಿ. ಅಂಜಿನಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next