Advertisement

15 ದಿನದಲ್ಲಿ 3 ಲಕ್ಷ ಮಂದಿಗೆ ಲಸಿಕೆ ಗುರಿ

01:28 PM Apr 06, 2021 | Team Udayavani |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಶುರುವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನ್‌ ಸಂಸ್ಥೆಯ ಖಾಸಗಿ ಆಸ್ಪತ್ರೆಯ ವತಿಯಿಂದ ಮೈಸೂರು ನಗರದಲ್ಲಿ15 ದಿನದೊಳಗಾಗಿ 3 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

Advertisement

ಮೈಸೂರಿನ ಹೆಬ್ಬಾಳ್‌ ನಗರದಲ್ಲಿರುವ ಆಶಾಕಿರಣ ಆಸ್ಪತ್ರೆಗೆ ಸೋಮವಾರ ಭೇಟಿನೀಡಿ ಮಾತನಾಡಿದ ಅವರು, ನಗರದ 65 ವಾರ್ಡ್‌ಗಳಲ್ಲಿ ಮಹಾನ್‌ ಒಕ್ಕೂಟ(ಖಾಸಗಿಆಸ್ಪತ್ರೆಗಳ ಒಕ್ಕೂಟ) ನಮ್ಮ ಕೇಂದ್ರಗಳಲ್ಲಿಉಚಿತವಾಗಿ ಲಸಿಕೆ ನೀಡಲು ಬಂದಿದ್ದಾರೆ. ಈಗಾಗಲೇ 25ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳುಲಸಿಕೆ ನೀಡಲು ಮುಂದೆ ಬಂದಿದ್ದು, ಒಂದುವಾರದಲ್ಲಿ 50 ಖಾಸಗಿ ಆಸ್ಪತ್ರೆಗಳು ಇದಕ್ಕೆಸೇರಲಿದೆ. ಖಾಸಗಿ ಆಸ್ಪತ್ರೆಯವರು ಜನರಿಗೆಉಚಿತವಾಗಿ ಲಸಿಕೆ ನೀಡಲು ತಾವಾಗಿಯೇಮುಂದೆ ಬರುತ್ತಿರುವುದು ಶ್ಲಾಘನೀಯ ಎಂದರು.

ಮೈಸೂರು ನಗರದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣ ಸಂಖ್ಯೆಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಜನರುಲಸಿಕೆ ಪಡೆದುಕೊಂಡರೆ ಕೊರೊನ ತಗಲುವಸಂಭವ ಕಡಿಮೆ ಇರುತ್ತದೆ. ಮೈಸೂರು ಜಿಲ್ಲೆಯಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ 45ವರ್ಷಕ್ಕೂ ಮೇಲ್ಪಟ್ಟವರಿದ್ದು, ಮೊದಲಹಂತದಲ್ಲಿ 2ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ 53 ಲಸಿಕೆ ಕೇಂದ್ರಗಳನ್ನು ಬಹುತೇಕ ವಾರ್ಡ್‌ಗಳಲ್ಲಿ ತೆರೆದಿದ್ದು,ಮುಂದಿನ ದಿನಗಳಲ್ಲಿ ಲಸಿಕೆ ಕೇಂದ್ರಗಳನ್ನು ಹೆಚ್ಚಾಗಿ ತೆರೆಯುವ ಕಾರಣ ಲಸಿಕೆ ಪಡೆಯಲುಅರ್ಹರಿರುವವರು ಹತ್ತಿರವಿರುವ ಕೇಂದ್ರಗಳಿಗೆತೆರಳಿ ಲಸಿಕೆ ಪಡೆದುಕೊಳ್ಳಲು ಸೂಚಿಸಿದರು.ಮಾರುಕಟ್ಟೆ ಹಾಗೂ ಸಿನಿಮಾ ಮಂದಿರಗಳಲ್ಲಿ ಜನರು ಗುಂಪಾಗಿ ಸೇರುತ್ತಿದ್ದು,ಕೋವಿಡ್‌ ಮಾರ್ಗಸೂಚಿಯ ಪ್ರಕಾರಮಾರುಕಟ್ಟೆಗಳನ್ನು ಹಿಂದಿನಂತೆಯೇ ವಿಕೇಂದ್ರೀಕರಣ ಮಾಡಲು ಸೂಚಿಸಲಾಗಿದೆ. ಸರ್ಕಾರದ ಆದೇಶದಂತೆ ಏ.07ರ ನಂತರಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಅವಕಾಶ ನೀಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಆರೋಗ್ಯಾಧಿಕಾರಿ ಡಾ.ನಾಗರಾಕ್‌, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ಸಿರಾಜ್‌, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪಿ.ರವಿ ಸೇರಿದಂತೆ ಇತರರು ಹಾಜರಿದ್ದರು.

Advertisement

 

ಜಿಲ್ಲೆಗೆ 5 ಲಕ್ಷ ಲಸಿಕೆ ಬೇಕಿದೆ :

ಜಿಲ್ಲೆಯಲ್ಲಿ 45ರಿಂದ 60 ವರ್ಷದೊಳಗಿನವರು 8 ಲಕ್ಷ ಜನರಿದ್ದಾರೆ. ನಮಗೆ ಈಗ ಮೂರು ದಿನಗಳಿಗೆಸಾಕಾಗುವಷ್ಟು ಲಸಿಕೆ ಇದೆ. ಕೊವ್ಯಾಕ್ಸಿನ್‌-ಕೊವಿಶೀಲ್ಡ್‌ ಲಸಿಕೆ ಹಾಕುತ್ತಿದ್ದು, ಶಿಕ್ಷಿತರು, ನಗರ ಪ್ರದೇಶದವರು ಕೊವ್ಯಾಕ್ಸಿನ್‌ ಲಸಿಕೆ ಹಾಕುವಂತೆ ಕೇಳುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್‌ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಾಗೂ ಲಸಿಕಾ ಕಾರ್ಯಕ್ರಮದ ಕುರಿತ ಅಧಿಕಾರಿಗಳ ಸಭೆ ನಡೆಸಿ ಈ ವಿಷಯ ಪ್ರಸ್ತಾಪಿಸಿದ ಅವರು,ನಮಗೆ 5 ಲಕ್ಷ ಲಸಿಕೆ ಬೇಕಿದೆ. ಲಸಿಕೆ ಬಂದರೆ 10 ದಿನಗಳೊಳಗೆ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಬಹುದು ಎಂದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಜೊತೆ ದೂರವಾಣಿ ಮೂಲಕ ಮಾತುಕತೆನಡೆಸಿದರು.ಜಿಲ್ಲೆಗೆ 5 ಲಕ್ಷ ಲಸಿಕೆ ಬೇಕಿದ್ದು, ಈಗ 2 ಲಕ್ಷ ಕಳುಹಿಸಿ, ಉಳಿದ 3 ಲಕ್ಷ ಲಸಿಕೆಯನ್ನು ಮುಂದಿನ ವಾರ ಕಳುಹಿಸಿ. ಮೈಸೂರಿನಲ್ಲಿ ಸೋಂಕು ಜಾಸ್ತಿಯಾಗಿರುವುದರಿಂದ ತಲ್ಲಣವಾಗಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ತಕ್ಷಣವೇ ಒಂದು ಲಕ್ಷ ಲಸಿಕೆ ಕಳುಹಿಸಿಕೊಡಲು ಆಶ್ವಾಸನೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next