Advertisement

ಲಸಿಕೆ ನೀಡುವಲ್ಲಿ ಕೇಂದ್ರ-ರಾಜ್ಯ ಸರ್ಕಾರ ವಿಫಲ

02:59 PM Jun 05, 2021 | Suhan S |

ಶಿವಮೊಗ್ಗ: ದೇಶದ ಜನರಿಗೆ ಲಸಿಕೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಇದರ ವಿರುದ್ಧ ಕಾಂಗ್ರೆಸ್‌ ತನ್ನ ಹೋರಾಟವನ್ನು ಮುಂದುವರಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಮುನ್ನೆಚ್ಚರಿಕೆ ವಹಿಸದೆ ಲಸಿಕೆ ನೀಡದೆ ಜನರಿಗೆ ಸಂಪೂರ್ಣ ಮೋಸ ಮಾಡಿದೆ. ಸ್ವಂತ ಲಾಭಕ್ಕಾಗಿ ದೇಶದ ಜನರನ್ನು ಬಲಿ ಕೊಟ್ಟಿದ್ದಾರೆ.ಇದುವರೆಗೂ ಶೇ.3.17ರಷ್ಟು ಮಾತ್ರ ಲಸಿಕೆನೀಡಲಾಗಿದೆ. ಮೊದಲ ಹಂತದಲ್ಲಿ 20 ಕೋಟಿಜನರಿಗೆ 2ನೇ ಹಂತದಲ್ಲಿ 4.37ಕೋಟಿ ಜನರಿಗೆಮಾತ್ರ ಲಸಿಕೆ ನೀಡಲಾಗಿದೆ. 140ಕೋಟಿ ಇರುವಭಾರತದಂತಹ ದೇಶಕ್ಕೆ ಇದು ಸಾಕಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರ 8 ಕೋಟಿ ಲಸಿಕೆಯನ್ನು ಹೊರದೇಶಗಳಿಗೆ ನೀಡಿತ್ತು. ದೇಶದ ಎಲ್ಲಾ ಜನರಿಗೂ ಉಚಿತವಾಗಿಯೇ ಲಸಿಕೆ ನೀಡಬೇಕು. ಆದರೆ ಭಾರತ ಸರ್ಕಾರ ಮಾತ್ರ ಲಸಿಕೆವಿಷಯದಲ್ಲಿ ನಿರ್ಲಕ್ಷé ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ರಾಷ್ಟ್ರೀಯ ಕಾಂಗ್ರೆಸ್‌, ರಾಜ್ಯ ಕಾಂಗ್ರೆಸ್‌ ಲಸಿಕೆ ಹಾಕಿಸಲು ಒತ್ತಾಯಿಸಿ ತನ್ನ ಹೋರಾಟವನ್ನು ಮುಂದುವರಿಸುತ್ತಿದೆ. ಎಲ್ಲಾ ವಿಧಾನಸಭಾ ವ್ಯಾಪ್ತಿಯಲ್ಲೂ ಕೂಡ ಜಿಲ್ಲಾಧಿಕಾರಿಗಳಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು  ನಿರ್ಧರಿಸಲಾಗಿದೆ. ಲಸಿಕೆಗಾಗಿ ಕೇಂದ್ರ ಸರ್ಕಾರ 35 ಸಾವಿರ ಕೋಟಿ ನಿಗದಿಪಡಿಸಿತ್ತು. ಆದರೆ ಈ ಹಣ ಎಲ್ಲಿ ಹೋಯಿತು ಎಂದು ಗೊತ್ತಿಲ್ಲ. ಮೋದಿಯವರ ಜನಪ್ರಿಯತೆ ದಿನ ದಿನಕ್ಕೆ ಪಾತಳಕ್ಕೆಕುಸಿಯುವುದಂತು ನಿಜವಾಗಿದೆ ಎಂದರು.

ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಮಾತನಾಡಿ, ಜಿಲ್ಲಾಡಳಿತ ಸಾವು ಮತ್ತು ಸೋಂಕಿತರ ವಿಷಯದಲ್ಲಿ ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಿದೆ. ಸಾವಿನ ಸಂಖ್ಯೆ ಕಡಿಮೆ ತೋರಿಸುತ್ತಿದೆ ಮತ್ತು ಖಾಸಗಿ ಆಸ್ಪತ್ರೆಗಳ ಪರವಾಗಿ ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂಬ ನಿಯಮವನ್ನೇ ಖಾಸಗಿ ಆಸ್ಪತ್ರೆಗಳು ಮೀರಿವೆ ಎಂದು ದೂರಿದರು.

Advertisement

ವಿಧಾನ ಪರಿಷತ್‌ ಸದಸ್ಯ ಆರ್‌.ಪ್ರಸನ್ನಕುಮಾರ್‌, ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾರಂಗೇಗೌಡ, ಮುಖಂಡರಾದ ಎಸ್‌.ಪಿ.ದಿನೇಶ್‌,ಶಬ್ಬೀರ್‌ಖಾನ್‌, ವಿಶ್ವನಾಥಕಾಶಿ, ಎಂ.ಚಂದನ್‌,ಚಂದ್ರಶೇಖರ್‌, ಬಾಲಾಜಿ, ಎನ್‌.ಡಿ. ಪ್ರವೀಣ ಇನ್ನಿತರರು ಉಪಸ್ಥಿತರಿದ್ದರು.

ಈಗಿನ ಮೇಯರ್‌ ಸುನೀತಾ ಅಣ್ಣಪ್ಪ ಮತ್ತು ಉಪ ಮೇಯರ್‌ ಶಂಕರ್‌ಗನ್ನಿ ಡಮ್ಮಿಯಾಗಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಿನಸಿ ಕಿಟ್‌ ನೀಡುವಿಕೆಗೆ ಸಂಬಂಧಿ ಸಿದಂತೆ ಪತ್ರಿಕಾಗೋಷ್ಠಿ ನಡೆಸಿರುವುದು ಶಿಷ್ಟಾಚಾರಕ್ಕೆ ವಿರೋಧವಾಗಿದೆ. ಏಕೆಂದರೆ ಪಾಲಿಕೆ ವ್ಯಾಪ್ತಿಯಲ್ಲಿ 45 ಸಾವಿರ ದಿನಸಿ ಕಿಟ್‌ ಕೊಡುತ್ತಿರುವುದು ಬಿಜೆಪಿಯಿಂದ ಅಲ್ಲ. ಅದು ಮಹಾನಗರ ಪಾಲಿಕೆಯಿಂದ ಆದರೆ ಇವರು ತಮ್ಮ ಪಕ್ಷದಿಂದಲೆ ಕಿಟ್‌ ಕೊಡುತ್ತೇವೆ ಎಂಬ ಭ್ರಮೆಯಿಂದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹೇಳಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅದಲ್ಲದೆ ಅನೇಕ ಬಾರಿ ಮೇಯರ್‌ ಬದಲು ಚನ್ನಬಸಪ್ಪನವರೆ ಪತ್ರಿಕಾಗೋಷ್ಠಿಗಳು ಮಾಡುತ್ತಿರುವುದರಿಂದ ಅವರು ಡಮ್ಮಿಯಾಗಿದ್ದಾರೆ.  –ಎಚ್‌.ಸಿ.ಯೋಗೀಶ್‌, ಪಾಲಿಕೆ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next