Advertisement

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ಕಡ್ಡಾಯ

08:18 PM Mar 31, 2021 | Team Udayavani |

 ದಾವಣಗೆರೆ :  ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟಂತಹವರು ಏ. 1ರಿಂದ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿ ಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏ. 1 ರಿಂದ 45 ವರ್ಷ ತುಂಬಿದವರೆಲ್ಲ ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆದ ನಂತರವೂ ಸೋಂಕು ತಗುಲಬಹುದು. ಆದರೆ ಲಸಿಕೆ, ಸೋಂಕಿತರನ್ನು ಸಾವಿನ ದವಡೆಯಿಂದ ರಕ್ಷಿಸುತ್ತದೆ. ಹಾಗಾಗಿ ಎಲ್ಲ ಅರ್ಹರು ಲಸಿಕೆ ಪಡೆಯಬೇಕು ಎಂದರು. ಕೊರೊನಾ ಲಸಿಕೆ ಬಗ್ಗೆ ಯಾರೂ ನಿರ್ಲಕ್ಷé ವಹಿಸಬಾರದು. ಲಸಿಕೆ ಕುರಿತು ಸುಳ್ಳು ಸುದ್ದಿ, ವದಂತಿಗಳನ್ನು ನಂಬದೇ ಅರ್ಹರೆಲ್ಲರೂ ಉಚಿತ ಲಸಿಕೆ ಪಡೆಯಬೇಕು. ಜೊತೆಗೆ ಇತರರ ಮನವೊಲಿಸಿ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರಾಘವನ್‌ ಮಾತನಾಡಿ, ಜಿಲ್ಲೆಯಲ್ಲಿಗ 3,200 ಪ್ರಕರಣಗಳಿಗೆ ಚಿಕಿತ್ಸೆ ನೀಡುವಷ್ಟು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಸೆ.17 ರಂದು 3,185 ಪ್ರಕರಣ ದಾಖಲಾಗಿತ್ತು. ಚಿಗಟೇರಿ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ 400 ಬೆಡ್‌ ಗಳ ಕೋವಿಡ್‌ ಆಸ್ಪತ್ರೆಯೆಂದು ಗುರುತಿಸಲಾಗಿದೆ. ಮಾ. 29 ರವರೆಗೆ 44 ಸಕ್ರಿಯ ಪ್ರಕರಣಗಳಿದ್ದು, 32 ಜನರು ಆಸ್ಪತ್ರೆಯಲ್ಲಿ ಮತ್ತು 12 ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ 2200 ರಿಂದ 2500 ರವೆಗೆ ಸ್ವಾಬ್‌ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪಾಸಿಟಿವಿಟಿ ದರ 0.41 ಇದೆ. ಈವರೆಗೆ 264 ಮರಣ ಸಂಭವಿಸಿದ್ದು, ಡಿ. 10 ರಂದು ಕೊನೆಯ ಮರಣ ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾ ಧಿಕಾರಿ ಡಾ| ನಟರಾಜ್‌ ಮಾತನಾಡಿ, ಜಿಲ್ಲೆಯಲ್ಲಿ 2 ಖಾಸಗಿ ಮತ್ತು 100 ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕ್‌ಗಳಿವೆ. ಒಟ್ಟು 21 ಸ್ವಾಬ್‌ ಸಂಗ್ರಹಣಾ ಮೊಬೈಲ್‌ ಟೀಂಗಳಿವೆ. 13 ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ 1030 ಬೆಡ್‌ ಸಿದ್ದವಾಗಿವೆ. ಖಾಸಗಿ ಮತ್ತು ಸರ್ಕಾರಿ ಸೇರಿದಂತೆ ಒಟ್ಟು 113 ವೆಂಟಿಲೇಟರ್‌ಗಳಿವೆ. ಸಿಸಿಸಿ, ಡಿಸಿಎಚ್‌ಸಿ ಮತ್ತು ಡಿಸಿಎಚ್‌ ಸೇರಿದಂತೆ ಒಟ್ಟು 1890 ಬೆಡ್‌ಗಳಿವೆ. ಸಮಿತಿ ರಚಿಸಿ ನಿರ್ವಹಣಾ ಕೆಲಸ ಮಾಡಲಾಗುವುದು ಎಂದರು.

ಕಳೆದ ಡಿ. 10 ರಂದು ಕೋವಿಡ್‌ನ‌ ಕೊನೆಯ ಸಾವಾಗಿದ್ದು, ನಂತರ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ. ವೈದ್ಯರ ಶ್ರಮಕ್ಕೆ ಅಭಿನಂದಿಸುತ್ತೇನೆ. ತಾಲೂಕು ಮಟ್ಟದ ಸಮಿತಿಗಳು ಪ್ರತಿ ದಿನ ಕೋವಿಡ್‌ ಪ್ರಗತಿ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಐಎಲ್‌ಐ ಮತ್ತು ಎಸ್‌ ಎಆರ್‌ಐ ಪ್ರಕರಣಗಳ ಸ್ವಾಬ್‌ ಪರೀಕ್ಷೆ ಕಡ್ಡಾಯವಾಗಿ ಆಗಬೇಕು. ಹಳೇ ದಾವಣಗೆರೆ ಭಾಗದಲ್ಲಿ ಹಾಗೂ ಜನನಿಬಿಡ ಪ್ರದೇಶಗಳನ್ನು ಟಾರ್ಗೆಟೆಡ್‌ ಗ್ರೂಪ್‌ ಎಂದು ಗುರುತಿಸಿ ಪರೀಕ್ಷೆ ಸಂಖ್ಯೆಹೆಚ್ಚಿಸಬೇಕು.

ಹಾಸ್ಟೆಲ್‌ ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಆರ್‌ಸಿಎಚ್‌ ಅಧಿ ಕಾರಿ ಡಾ| ಮೀನಾಕ್ಷಿ ಮಾತನಾಡಿ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಲಸಿಕಾಕರಣ ಶೇ. 60 ಆಗಿದೆ. 60 ವರ್ಷ ಮೇಲ್ಪಟ್ಟ 1,58,619 ಜನರಲ್ಲಿ 42,304 ಶೇ. 27 ಲಸಿಕಾಕರಣವಾಗಿದೆ. ದಾವಣಗೆರೆಯಲ್ಲಿ ಅತಿ ಕಡಿಮೆ ಮತ್ತು ಜಗಳೂರು ತಾಲೂಕಲ್ಲಿ ಅತಿ ಹೆಚ್ಚು ಲಸಿಕೆ ಆಗಿದೆ. ಏ. 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆಯನ್ನು ಆನ್‌ಸ್ಪಾಟ್‌ ನೋಂದಣಿಯೊಂದಿಗೆ ಸಬ್‌ ಸೆಂಟರ್‌ಗಳಲ್ಲೂ ವಾರದಲ್ಲಿ ನಾಲ್ಕು ದಿನ ಲಸಿಕೆ ನೀಡಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next