Advertisement
ಮೇಲೆ ತಿಳಿಸಿದ ಕೊವಿನ್ ವೆಬ್‌ಸೈಟ್‌ಗೆ ಹೋದಾಗ ಅಲ್ಲಿ ರಿಜಿಸ್ಟರ್ ಫಾರ್ ವ್ಯಾಕ್ಸಿನೇಶನ್ ಎಂದು ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ “ಗೆಟ್ ಒಟಿಪಿ’ ಪಟ್ಟಿಗೆ ಕ್ಲಿಕ್ ಮಾಡಬೇಕು. ಆ ಕೂಡಲೇ ನಿಮ್ಮ ಮೊಬೈಲ್ಗೆಎಸ್ಎಂಎಸ್ ಮೂಲಕ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ದಾಖಲಿಸಿ ಅಲ್ಲಿ ಕಾಣಿಸುವ “ವೆರಿಫೈ ಬಟನ್’ ಕ್ಲಿಕ್ ಮಾಡಬೇಕು.
ಒಟಿಪಿ ಸರಿಯಾಗಿ ನಮೂದಿಸಿದ ಬಳಿಕ ನೋಂದಣಿ ಪುಟ ತೆರೆದುಕೊಳ್ಳುತ್ತದೆ. ಬಳಿಕ ಅಲ್ಲಿ ನಿಮ್ಮ ಕುರಿತು ಕೇಳಿರುವ ಮಾಹಿತಿಗಳನ್ನು ಭರ್ತಿ ಮಾಡಬೇಕು. (ಮೊದಲಾಗಿ ಯಾವ ಫೋಟೊ ಐಡಿ ಪ್ರೂಫ್ ಎಂಬುದನ್ನು ತಿಳಿಸಬೇಕು. ಉದಾ: ಡ್ರೈವಿಂಗ್ ಲೈಸನ್ಸ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತ್ಯಾದಿ. ಅನಂತರ ಕಾರ್ಡ್‌ನ ಸಂಖ್ಯೆ ನಮೂದಿಸಬೇಕು.
ಒಂದು ಬಾರಿ ಓರ್ವ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿದ ಬಳಿಕ ಇತರ ಮೂವರನ್ನು ಇದೇ ಮೊಬೈಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಅಲ್ಲಿ ಅಕೌಂಟ್ ಡಿಟೇಲ್ಸ್ ಎಂಬ ಪಟ್ಟಿ ಕಾಣಿಸುವುದು. ಅದರಲ್ಲಿ ಇತರ ಮೂವರ ಮಾಹಿತಿ (ಈ ಮೊದಲು ನೀಡಿದಂತೆಯೇ ಎಲ್ಲ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಮೊಬೈಲ್ ನಂಬರ್ ಹೊರತುಪಡಿಸಿ ಇತರ ಎಲ್ಲ ಮಾಹಿತಿಗಳು ಪ್ರತ್ಯೇಕವಾಗಿರುತ್ತದೆ) ನೀಡಿ ಹೆಸರು ನೋಂದಾಯಿಸಬಹುದು. ಇಷ್ಟು ಮಾಹಿತಿ ನೀಡಿದ ಬಳಿಕ ಮತ್ತೂಮ್ಮೆ ನೋಂದಣಿ ಖಚಿತವಾದ ಮಾಹಿತಿ ಬರುತ್ತದೆ.
Related Articles
Advertisement
ದಿನಾಂಕ ಮತ್ತು ಸಮಯ ನಿಗದಿಅಕೌಂಟ್ ಡಿಟೇಲ್ ಪೇಜ್‌ಗೆ ಹೋಗಿ ಅಲ್ಲಿ ನಿಮ್ಮ ಹೆಸರಿನ ಎದುರು ಇರುವ ಶೆಡ್ನೂಲ್ ಕೊಂಡಿಗೆ ಕ್ಲಿಕ್ ಮಾಡಿದಾಗ ಬುಕ್ ಅಪಾಯಿಂಟ್‌ಮೆಂಟ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್, ಪಿನ್‌ಕೋಡ್ ನಮೂದಿಸಿದಾಗ ನಿಮ್ಮ ಹತ್ತಿರದ ಕೇಂದ್ರಗಳಿರುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹತ್ತಿರದ ಕೇಂದ್ರವನ್ನು ಆಯ್ಕೆ ಮಾಡಿದಾಗ ಅಲ್ಲಿ ಲಭ್ಯವಿರುವ ದಿನಾಂಕ ಕಾಣಿಸುತ್ತದೆ. ಇವುಗಳಲ್ಲಿ ನಿಮಗೆ ಅನುಕೂಲವಾದ ದಿನಾಂಕವನ್ನು ಆಯ್ಕೆ ಮಾಡಿಕೊಂಡು “ಬುಕ್’ ಬಟನ್ ಕ್ಲಿಕ್ ಮಾಡಿದರೆ ನೋಂದಣಿ ಪೂರ್ಣವಾದ ಮಾಹಿತಿ ಲಭ್ಯವಾಗುವುದು. ಅಲ್ಲಿರುವ ನಿಮ್ಮ ಹೆಸರು, ಕೇಂದ್ರ ಮೊದಲಾದ ಮಾಹಿತಿಗಳನ್ನು ಗಮನಿಸಿ ಎಲ್ಲವೂ ಸರಿಯಾಗಿದ್ದಲ್ಲಿ ಕನ್ಫರ್ಮ್ ಬಟನ್ ಕ್ಲಿಕ್ ಮಾಡಿದರೆ “ಅಪಾಯಿಂಟ್‌ಮೆಂಟ್ ಸಕ್ಸಸ್‌ಫುಲ್’ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಇದನ್ನು ಡೌನ್‌ಲೋಡ್ ಮಾಡಿಟ್ಟು ಲಸಿಕೆ ಪಡೆಯುವ ದಿನ ನೀವು ನೋಂದಾಯಿಸಿದ ಕೇಂದ್ರಕ್ಕೆ ಹೋಗಿ ತೋರಿಸಿದರೆ ನಿಮಗೆ ಲಸಿಕೆ ನೀಡಲಾಗುತ್ತದೆ.