Advertisement

ವಿಕಲಚೇತನರಿಗೆ ಕೋವಿಡ್‌ ಲಸಿಕೆ ನೀಡುವ ಮಹಾ ಅಭಿಯಾನ ಯಶಸ್ವಿ

08:17 PM May 29, 2021 | Team Udayavani |

ಕಾರವಾರ: ಜಿಲ್ಲೆಯಲ್ಲಿ ನಡೆದ ವಿಕಲಚೇತನರಿಗೆ ಕೋವಿಡ್‌ ಲಸಿಕಾ ಅಭಿಯಾನ ಯಶಸ್ವಿಯಾಗಿದೆ. 18 ರಿಂದ 44 ವರ್ಷದವರೆಗಿನ ಹಾಗೂ 45 ವರ್ಷ ಮೇಲ್ಪಟ್ಟ 4871 ವಿಕಲಚೇತನರು ಕೋವಿಡ್‌ ಲಸಿಕೆ ಪಡೆದುಕೊಂಡರು ಎಂದು ಜಿಪಂ ಸಿಇಒ ಪ್ರಿಯಂಕಾ ಎಂ. ಹೇಳಿದ್ದಾರೆ.

Advertisement

ಶುಕ್ರವಾರ ನಡೆದ ಲಸಿಕೆ ಅಭಿಯಾನದ ವಿವರ ನೀಡಿದ ಅವರು ವಿಕಲ ಚೇತನರಿಗೆ ಕೋವಿಡ್‌ ಲಸಿಕೆ ಹಾಕಲು ಮುಂದಾದ ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ ಪ್ರಯೋಗಕ್ಕೆ ಯಶಸ್ಸು ಸಿಕ್ಕಿದೆ ಎಂದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಕೋವಿಡ್‌ಗೆ ತುತ್ತಾಗುವುದನ್ನು ತಪ್ಪಿಸಲು ಜಿಲ್ಲಾಡಳಿತ ಹಾಗೂ ಜಿಪಂ ಹಲವಾರು ಮಾರ್ಗೋಪಾಯ ಕೈಗೊಂಡಿದೆ. ಈಗಾಗಲೇ ಒಂದರ ಹಿಂದೊಂದು ಪ್ರಯೋಗ ಮಾಡಿ ಯಶಸ್ವಿಯಾಗಿರುವ ಆಡಳಿತ ಇಂದು ವಿಕಲಚೇತನರಿಗೂ ಕೋವಿಡ್‌ ಲಸಿಕೆ ಹಾಕುವ ಮಹಾ ಅಭಿಯಾನ ಮಾಡಿದೆ. ವಿಕಲಚೇತನರಿಗೆ ಲಸಿಕೆ ಹಾಕಿಕೊಳ್ಳಲು ತೊಂದರೆ ಉಂಟಾಗದಂತೆ ಜಿಲ್ಲೆಯಲ್ಲಿ ಬಾರಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ವಿಕಲಚೇತನರಿಗೆ ಎರಡು ವಾಹನದ ವ್ಯವಸ್ಥೆ ಮಾಡಿತ್ತು. ಅಂಗವಿಕಲರು ಲಸಿಕೆ ಪಡೆಯಲು ಸಹಾಯ ಬಯಸಿದಲ್ಲಿ ಮನೆಯಿಂದ ವಾಹನದ ಮೇಲೆ ತಂದು ಲಸಿಕೆ ನೀಡಲಾಯಿತು.

ಇನ್ನು ಹಲವರು ಸ್ವಯಂಪ್ರೇರಿತರಾಗಿ ಬಂದು ಲಸಿಕೆ ಪಡೆದುಕೊಂಡರು. ಶುಕ್ರವಾರ ನಡೆದ ಮಹಾ ಲಸಿಕೆ ಅಭಿಯಾನದಲ್ಲಿ 18 ರಿಂದ 44 ವರ್ಷ ಒಳಗಿನ 3452 ವಿಕಲಚೇತನರು ಲಸಿಕೆ ಪಡೆದರು.

ಇನ್ನು 44 ವರ್ಷ ಮೇಲ್ಪಟ್ಟ 2789 ವಿಕಲಚೇತನರರು ಕೋವಿಡ್‌ ಲಸಿಕೆ ಪಡೆದುಕೊಂಡರು. ಕುಮಟಾ ತಾಲೂಕಿನ ತೊರ್ಕೆ ಗ್ರಾಮದಲ್ಲಿ ಶೇ.95 ಅಂಗವಿಕಲರು ಲಸಿಕೆ ಪಡೆದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 13354 ವಿಕಲಚೇತನರಲ್ಲಿ 6241ವಿಕಲಚೇತನರು ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ.

Advertisement

ಜಿಲ್ಲೆಯಲ್ಲಿ ವಿಕಲಚೇತನರಿಗೆ ಕೋವಿಡ್‌ ಲಸಿಕೆ ನೀಡುವ ಮಹಾ ಅಭಿಯಾನ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಮಹಾ ಅಭಿಯಾನದಲ್ಲಿ ಲಸಿಕೆ ಪಡೆಯದೇ ಇರುವ ವಿಕಲಚೇತನರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುವುದು ಎಂದು ಜಿಪಂ ಸಿಇಒ ಪ್ರಿಯಂಕಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next