ನವದೆಹಲಿ: ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುದು ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಜಿಜ್ಞಾಸೆಯ ನಡುವೆಯೇ ಪುಣೆಯ “ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ ಸಿಇಒ ಅದಾರ್ ಪೂನಾವಾಲ ನೀಡಿದ ಮಾಹಿತಿ ಪ್ರಕಾರ ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗಾಗಿ ಕೊವೊವ್ಯಾಕ್ಸ್ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾ ಡಿದ ಅವರು, ಸದ್ಯ ಈ ಲಸಿಕೆ ಪ್ರಯೋಗದ ವಿವಿಧ ಹಂತಗಳಲ್ಲಿ ಇದೆ. ಅದೃಷ್ಟವಶಾತ್ ಮಕ್ಕಳ ಆರೋ ಗ್ಯದ ಮೇಲೆ ಹೆಚ್ಚು ಪ್ರತಿಕೂಲ ಪರಿಣಾಮ ಬೀರು ವಂಥ ಅಂಶ ಕಂಡುಬಂದಿಲ್ಲ. ಇದರ ಹೊರತಾ ಗಿಯೂ ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗಾಗಿ ನಮ್ಮ ಸಂಸ್ಥೆ ಸಂಶೋಧಿಸಿರುವ ಕೊವೊವ್ಯಾಕ್ಸ್ ಲಸಿಕೆ ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಸಂಶೋಧನೆ, ಪರೀಕ್ಷೆ ಮತ್ತು ಸರ್ಕಾರ ದಿಂದ ಅನುಮತಿ ಶೀಘ್ರವೇ ಸಿಕ್ಕಿದರೆ, ಮೂರು ತಿಂಗಳಲ್ಲಿಯೂ ಅದು ಮಾರುಕಟ್ಟೆಗೆ ಬರಲಿದೆ ಎಂದರು. ಮತ್ತೆ 11 ಒಮಿಕ್ರಾನ್: ರಾಷ್ಟ್ರ ರಾಜಧಾನಿ ನವದೆಹಲಿ ಯಲ್ಲಿ ಇನ್ನೂ ನಾಲ್ಕು ಒಮಿಕ್ರಾನ್ ರೂಪಾಂತರಿ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ, ಅಲ್ಲಿ ಈವರೆಗೆ ಒಟ್ಟು 6 ಕೇಸುಗಳು ದೃಢಪಟ್ಟಿವೆ. ಹೊಸತಾಗಿ ಸೋಂಕು ದೃಢಪಟ್ಟವರಿಗೆ ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದಲ್ಲದೆ, ರಾಜಸ್ಥಾನದಲ್ಲಿ ಹೊಸತಾಗಿ ಏಳು ಹೊಸ ರೂಪಾಂತರಿ ಕೇಸುಗಳು ದೃಢಪಟ್ಟಿವೆ. ಇನ್ನು ಮಹಾರಾಷ್ಟದಲ್ಲಿ ಹೊಸದಾಗಿ 8 ಹೊಸ ಪ್ರಕರಣ ದಾಖಲಾಗಿವೆ. ಹೀಗಾಗಿ, ದೇಶದಲ್ಲಿನ ಒಟ್ಟು ಕೇಸುಗಳ ಸಂಖ್ಯೆ 61ಕ್ಕೇರಿವೆ. ತಜ್ಞರ ಜತೆಗೆ ಕೇಂದ್ರ ಚರ್ಚೆ: ದೇಶದಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ನೀಡಬೇಕೋ ಬೇಡವೋ ಎಂಬ ಬಗ್ಗೆ ತಜ್ಞರ ಜತೆಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಈ ನಡುವೆ ದೇಶದ ಶೇ.55 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಶೇ.70ರಷ್ಟು ಕಡಿತ: ಫೈಜರ್-ಬಯಾನ್‌ಟೆಕ್‌ನ ಲಸಿಕೆ ಹಾಕಿಸಿಕೊಂಡರೆ ಒಮಿಕ್ರಾನ್ ರೂಪಾಂತರಿ ಸೋಂಕು ದೃಢಪಟ್ಟರೂ ಶೇ.70ರಷ್ಟು ಆಸ್ಪತ್ರೆಗೆ ದಾಖ ಲಾಗುವುದನ್ನು ತಪ್ಪಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿರುವ ಅಧ್ಯಯನದಲ್ಲಿ ಈ ಅಂಶ ದೃಢ ಪಟ್ಟಿದೆ. ಅಲ್ಲದೆ, ಫೈಜರ್ ಮಾತ್ರೆಗಳಿಂದ ಶೇ. 90ರಷ್ಟು ಒಮಿಕ್ರಾನ್ ಸೋಂಕನ್ನು ತಡೆಯಬಲ್ಲದು ಎಂಬುದು ಸಾಬೀತಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.