Advertisement
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, “ಲಸಿಕೆ ಪಡೆದುಕೊಳ್ಳುವವರ ಯೋಗ್ಯ ಮತ್ತು ಸಮಯೋಚಿತ ದತ್ತಾಂಶಗಳನ್ನು ಅಪ್‌ಲೋಡ್ ಮಾಡಬೇಕು. ಯಾವುದೇ ದತ್ತಾಂಶ ದೋಷ, ಇಡೀ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ತರಬಹುದು’ ಎಂದು ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಧಾನವಾಗಿ ಸೂಚಿಸಿದರು.
– 18-45ರ ವಯೋಮಾನದವರು ಕೇವಲ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದು.
– ಡಿಆರ್‌ಡಿಒ, ಸಿಎಸ್‌ಐಆರ್ ಏಜೆನ್ಸಿಗಳ ಮೂಲಕ ಬಯಲು ಆಸ್ಪತ್ರೆಯ ಸೌಲಭ್ಯ ಹೆಚ್ಚಿಸಿಕೊಳ್ಳುವುದು.
– ಮಾನವ ಸಂಪನ್ಮೂಲ ಅಧಿಕಾರಿಗಳನ್ನು ನಿಯೋಜಿಸಿ ಶುಶ್ರೂಷೆ ಮೇಲೆ ಮತ್ತಷ್ಟು ನಿಗಾ ಇಡುವುದು.
– ಹೆಚ್ಚುವರಿ ಆ್ಯಂಬುಲೆನ್ಸ್ ಸೇವೆಗೆ ಕ್ರಮ ಕೈಗೊಳ್ಳುವುದು.
– ಬೆಡ್‌ಗಳ ಹಂಚಿಕೆಗಾಗಿ ಕಾಲ್ ಸೆಂಟರ್ ಆಧಾರಿತ ಸೇವೆಯನ್ನು ಕೇಂದ್ರೀಕೃತಗೊಳಿಸುವುದು.
– ಬೆಡ್‌ಗಳ ಸಮಯೋಜಿತ ಲಭ್ಯವಿರುವಿಕೆಯ ಕುರಿತು ದಾಖಲೆ ಕಾಪಾಡಿಕೊಳ್ಳುವುದು. ಇದನ್ನೂ ಓದಿ :ರೈಲ್ವೆ ಇಲಾಖೆಗೆ ಕೋವಿಡಾಘಾತ : 93 ಸಾವಿರ ಸಿಬ್ಬಂದಿಗೆ ಮಹಾಮಾರಿ ಸೋಂಕು