Advertisement

ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ  ನೇತೃತ್ವದಲ್ಲಿ ಕೋವಿಡ್  ಲಸಿಕೆ ಅಭಿಯಾನ

10:30 AM May 18, 2021 | Team Udayavani |

ಪನ್ವೆಲ್‌: ಪನ್ವೆಲ್‌ ಮಹಾನಗರ ಪಾಲಿಕೆಯ ಸಹಕಾರದಿಂದ ಸಭಾಪತಿ ನ್ಯೂ ಪನ್ವೆಲ್‌ ನಗರ ಸೇವಕ ಸಂತೋಷ್‌ ಜಿ. ಶೆಟ್ಟಿ ನೇತೃತ್ವದಲ್ಲಿ ಪನ್ವೆಲ್‌ ಪರಿಸರದ ನಾಗರಿಕರಿಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ಪನ್ವೆಲ್‌ ಕರ್ನಾಟಕ ಸಂಘದ ತಳಮಹಡಿಯಲ್ಲಿ ಕಳೆದ ವಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಪ್ರಥಮ ಹಾಗೂ ದ್ವಿತೀಯ ಡೋಸ್‌ ಲಸಿಕೆ ನೀಡುವ ಕಾರ್ಯಕ್ರಮ ಪ್ರಾರಂಭಗೊಂಡಿದೆ. ಪನ್ವೆಲ್‌ ಕರ್ನಾಟಕ ಸಂಘದ ಕಾರ್ಯಕರ್ತರ ಪರಿಶ್ರಮದಿಂದ ಯಶಸ್ವಿಯಾಗಿ ದಿನಕ್ಕೆ 300ಕ್ಕೂ ಹೆಚ್ಚು ಪರಿಸರದ ಸಮಾಜ ಬಾಂಧವರು ಲಸಿಕೆ ಪಡೆದರು.

ಸಂತೋಷ್‌ ಜಿ. ಶೆಟ್ಟಿ ಅವರು ಕೊರೊನಾ ಸಂದರ್ಭದಲ್ಲಿ ತನ್ನ ಕ್ಷೇತ್ರದ ನಾಗರಿಕರಿಗೆ ವಿವಿಧ ರೀತಿಯ ಯೋಜನೆಗಳನ್ನು ರೂಪಿಸಿದ್ದು, ಈ ಬಾರಿ ಮಹಾನಗರ ಪಾಲಿಕೆಯ ಆಯೋಜನೆಯಲ್ಲಿ ಪ್ರತೀ ದಿನ 300 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಅಲ್ಲದೆ ಬಾಂಧವರಿಗೆ ಮಧ್ಯಾಹ್ನದ ಭೋಜನ ಹಾಗೂ ಉಪಹಾರದ ಸೌಲಭ್ಯವನ್ನು ಒದಗಿಸುತ್ತಿದ್ದಾರೆ.

ಈಗಾಗಲೇ ಮೂರು ಬಾರಿ ಸೊಲಿಲ್ಲದ ಸರದಾರ ಎಂಬಂತೆ ಸಂತೋಷ್‌ ಜಿ. ಶೆಟ್ಟಿ ಪನ್ವೆಲ್‌ನ ಮಹಾನಗರ ಪಾಲಿಕೆಯ ನಗರ ಸೇವಕರಾಗಿ ನ್ಯೂ ಪನ್ವೆಲ್‌ನಲ್ಲಿ ವಿಜಯ ಸಾಧಿಸಿದ್ದು, ಸ್ಥಳೀಯ ನಾಗರಿಕರಿಗೆ ಮಾತ್ರವಲ್ಲದೆ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಕನ್ನಡಿಗರಿಗೆ ಹಲವು ರೀತಿಯ ಸಹಕಾರ ನೀಡುತ್ತಿದ್ದಾರೆ. ತನ್ನ ಮಿತ್ರರು ಹಾಗೂ ವಿವಿಧ ಸಂಘಟನೆಗಳ ಸಹಾಯದಿಂದ ತನ್ನ ಕ್ಷೇತ್ರದ ಜನರಿಗೆ ಸಹಕರಿಸುತ್ತಿದ್ದಾರೆ.

ಸಂತೋಷ್‌ ಶೆಟ್ಟಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನ್ಯೂ ಪನ್ವೆಲ್‌ ಪರಿಸರದ ತುಳು, ಕನ್ನಡಿಗರಿಗೆ ಕೋವಿಡ್‌ ಲಸಿಕೆ ಪಡೆಯುವಲ್ಲಿ ಬೆಳಗ್ಗೆ ಕರ್ನಾಟಕ ಸಂಘದ ಕಾರ್ಯಾಲಯಕ್ಕೆ ಬಂದು ನೊಂದಾಯಿಸಬೇಕು. ದಿನಕ್ಕೆ 250ರಿಂದ 300 ಜನರಿಗೆ ಲಸಿಕೆ ನೀಡಲಾಗುತ್ತದೆ. ಕರ್ನಾಟಕ ಸಂಘದ ಕಾರ್ಯಾಲಯಕ್ಕೆ ಬೆಳಗ್ಗೆ ಬೇಗ ಬಂದು ನೋಂದಾಯಿಸಿಕೊಂಡರೆ ಲಸಿಕೆ ಲಭ್ಯವಾಗುತ್ತದೆ. ಬೇರೆ ಯಾವುದೇ ರೀತಿಯಲ್ಲಿ ನೋಂದಣಿ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Advertisement

ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಭಾಸ್ಕರ್‌ ಡಿ. ಶೆಟ್ಟಿ (ಪದ್ಮ), ಅಧ್ಯಕ್ಷ ಕೊಲ್ಪೆ ಧನಂಜಯ್‌ ಶೆಟ್ಟಿ, ಕಾರ್ಯದರ್ಶಿ ಸತೀಶ್‌ ಶೆಟ್ಟಿ ಕುತ್ಯಾರ್‌, ಕೋಶಾಧಿಕಾರಿ ಸುರೇಶ್‌ ರಾವ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ಗುರುಪ್ರಸಾದ್‌ ಶೆಟ್ಟಿ  ಕಾಪು, ಸಮಾಜ ಸೇವಕ ಬಿ. ಕೆ. ಶೆಟ್ಟಿ, ಶಶಿ ಶೆಟ್ಟಿ, ಸುಧಾಕರ್‌ ಪೂಜಾರಿ, ಸುದರ್ಶನ್‌ ಶೆಟ್ಟಿ, ಸೀತಾರಾಮ್‌ ಶೆಟ್ಟಿ, ರಾಮಚಂದ್ರ ಗೌಡ, ಹರೀಶ್‌ ಶೆಟ್ಟಿ, ನೀಲ್‌ ಕಮಲ್‌ ಮತ್ತು ಇತರ ಸದಸ್ಯರು ಈ ಕಾರ್ಯಕ್ರಮದಲ್ಲಿ ಸಹಕರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next