ಗೌರಿಬಿದನೂರು: ತಾಲೂಕಿನ 45 ವರ್ಷ ಮೇಲ್ಪಟ್ಟ ಪಡಿತರ ಚೀಟಿದಾರರು ತಮ್ಮ ಆರೋಗ್ಯದ ದೃಷ್ಟಿಯಿಂದ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಈ ಮೂಲಕ ಕೋವಿಡ್ ಸೋಂಕಿನ ಕಡಿವಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಎನ್. ಎಚ್.ಶಿವಶಂಕರ ರೆಡ್ಡಿ ಮನವಿ ಮಾಡಿದರು.
ನಗರದ ಹೊರ ವಲಯದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಕಚೇರಿಸಭಾಂಗಣದಲ್ಲಿ ನಡೆದ ನ್ಯಾಯ ಬೆಲೆ ಅಂಗಡಿ ಕಾರ್ಯದರ್ಶಿಗಳು ಮತ್ತುಮಾಲೀಕರ ಸಭೆಯಲ್ಲಿ ಮಾತನಾಡಿ,ತಾಲೂಕಿನಲ್ಲಿ ಒಟ್ಟು 111 ನ್ಯಾಯಬೆಲೆಅಂಗಡಿಗಳಿದ್ದು, ಅದರಲ್ಲಿ ಸುಮಾರು 45ವರ್ಷ ಮೇಲ್ಟಟ್ಟ ಪಡಿತರ ಚೀಟಿ ದಾರರಿದ್ದಾರೆ. ಅವರಲ್ಲಿ ಕೋವಿಡ್ ಲಸಿಕೆ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.
ವೃದ್ಧರಿಗೆ ಉಚಿತ ವಾಹನ: ಇದೀಗ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು, ಸರ್ಕಾರದ ಸೂಚನೆ ನೀಡಿರುವ ಕೊರೊನಾ ಮಾರ್ಗಸೂಚಿ ಬಗ್ಗೆತಿಳಿಯಬೇಕು. ಗ್ರಾಮಾಂತರ ಪ್ರದೇಶ ದಲ್ಲಿರುವ ವೃದ್ದರಿಗೆ ಉಚಿತವಾಗಿ ವಾಹನಸೌಲಭ್ಯವನ್ನು ಆರೋಗ್ಯ ಇಲಾಖೆನೀಡಿದೆ. ಇದರ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತರು ವಹಿ ಸಿದ್ದು, ಅವರುನಿಮ್ಮ ಸಹಾಯಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ಲಸಿಕೆ ಹಾಕಿಸಿಕೊಳ್ಳಲು ಸೂಚಿಸಿ: ತಹಶೀಲ್ದಾರ್ ಎಚ್.ಶ್ರೀನಿವಾಸ್ ಮಾತನಾಡಿ, ಬಹುತೇಕ ಪಡಿತರ ಚೀಟಿದಾರರ ತಪ್ಪದೇ ನಿಮ್ಮಲ್ಲಿ ಬರಲಿದ್ದು, ಅವರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಿ, ಲಸಿಕೆ ಹಾಕಿಸಿಕೊಳ್ಳಲು ಸೂಚನೆ ನೀಡ ಬೇಕು. ಅರೋಗ್ಯ ಕೇಂದ್ರದಲ್ಲಿ ಸಿಗಲಿರುವ ಉಚಿತ ಲಸಿಕೆ ಪಡೆಯಬೇಕು. ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರಕಾಪಾಡಿಕೊಳ್ಳಲು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಆಹಾರ ಶಿರಸ್ತೇದಾರ ಎ.ಸುಧಾಕರ್‌ರೆಡ್ಡಿ, ಆಹಾರ ನಿರೀಕ್ಷಕ ಶಶಿಕಲಾ, ನ್ಯಾಯಬೆಲೆ ಅಂಗಡಿ ಮಾಲೀಕ ಮಾ.ಕ.ರಾಮಚಂದ್ರ ಜೀಲಾಕುಂಟೆ ಗಂಗಪ್ಪ, ವಿಜಯ್, ಜಾಲೇಂದ್ರ ಹಾಜರಿದ್ದರು.