ಹೊಸದಿಲ್ಲಿ: ಕೋವಿಡ್ ಲಸಿಕೆಯ ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ನಡುವಿನ ಅಂತರವನ್ನು 9 ತಿಂಗಳುಗಳಿಂದ 6 ತಿಂಗಳುಗಳಿಗೆ ಇಳಿಸಲಾಗಿರು ವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
ಕೇಂದ್ರ ಆರೋಗ್ಯ ಇಲಾಖೆಯ ಸಹಾಯಕ ಸಚಿವರಾದ ಭಾರತಿ ಪ್ರವೀಣ್ ಪವಾರ್ ಅವರು ಲೋಕ ಸಭೆಗೆ ನೀಡಿದ ಲಿಖಿತ ಉತ್ತರವೊಂದ ರಲ್ಲಿ ಈ ಅಂಶ ಪ್ರಸ್ತಾಪಿಸಿದ್ದಾರೆ. ನೀತಿ ಆಯೋಗದ ಶಿಫಾರಸಿನ ಪ್ರಕಾರ, ಈ ಬದಲಾವಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಆ. 1ರ ಅಂಕಿ-ಅಂಶದ ಪ್ರಕಾರ, ದೇಶದಲ್ಲಿ ಲಸಿಕೆ ಬೂಸ್ಟರ್ ಡೋಸ್ ಪಡೆದ 18ಕ್ಕೂ ಮೇಲ್ಪಟ್ಟವರ ಸಂಖ್ಯೆ 9.07 ಕೋಟಿಯಷ್ಟಿದೆ. ಹರ್ ಘರ್ ದಸ್ತಕ್ 2.0 ಅಭಿಯಾನದಡಿ, ದೇಶದ ಮನೆಮನೆಗೂ ತೆರಳಿ ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಇರುವಂಥ ವರಿಗೆ ಲಸಿಕೆ ನೀಡಬೇಕಾಗಿ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಯುಷ್ಮಾನ್ ಮೋಸ ತಡೆಗೆ ಕ್ರಮ: ಆಯುಷ್ಮಾನ್ ಭಾರತ್ ಯೋಜನೆಯಡಿ ಆಗುವ ಮೋಸಗಳನ್ನು ತಡೆಯಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕಾಗಿ ಕೃತಕ ಬುದ್ಧಿಮತ್ತೆ ಹಾಗೂ ಮೆಷಿನ್ ಲರ್ನಿಂಗ್‌ನಂಥ ತಂತ್ರಜ್ಞಾನಗಳನ್ನು ಅಳ ವಡಿಸಿಕೊಂಡಿದೆ. ಕೇಂದ್ರ ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕ ಭಾರತಿ ಪ್ರವೀಣ್ ಪವಾರ್ ಲೋಕಸಭೆಗೆ ಲಿಖಿತ ರೂಪದಲ್ಲಿ ಈ ಉತ್ತರ ನೀಡಿದ್ದಾರೆ.
ಸ್ಪರ್ಧಾತ್ಮಕ ತಿದ್ದುಪಡಿ ವಿಧೇಯಕ
ಲೋಕಸಭೆಯಲ್ಲಿ ಸ್ಪರ್ಧಾತ್ಮಕ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗಿದೆ. ಭಾರತೀಯ ಸ್ಪರ್ಧಾ ಆಯೋಗವನ್ನು (ಸಿಸಿಐ) ಬಲಪಡಿಸುವ ಹಾಗೂ ಅದಕ್ಕೆ ಹೆಚ್ಚಿನ ಅಧಿಕಾರ ಕಲ್ಪಿಸುವ ಉದ್ದೇಶದಿಂದ ಇದನ್ನು ಸಿದ್ಧಪಡಿಸ ಲಾಗಿದ್ದು, ಇದಕ್ಕೆ ಇತ್ತೀಚೆಗೆ ಕೇಂದ್ರ ಸಂಪುಟದ ಒಪ್ಪಿಗೆ ಸಿಕ್ಕಿದೆ. ಇದು ಆಯೋಗದ ಮುಂದೆ ವಿಚಾರಣೆಗಾಗಿ ಬರುವ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಆಯೋಗದ ಆರು ಮಂದಿಯ ಪ್ರತಿಯೊಬ್ಬ ಸದಸ್ಯನಿಗೂ ಹೆಚ್ಚಿನ ಅಧಿಕಾರ ನೀಡಲಿದೆ ಎಂದು ಮೂಲಗಳು ತಿಳಿಸಿವೆ.