Advertisement
ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ದೇಶೀಯ ಲಸಿಕೆ ಕೊವ್ಯಾಕ್ಸಿನ್‌ಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ)ವು ಒಪ್ಪಿಗೆ ನೀಡಿದೆ. ಈ ಮೂಲಕ ಲಸಿಕೆ ಅಭಿವೃದ್ಧಿಯಲ್ಲೂ “ಆತ್ಮನಿರ್ಭರತೆ’ಗೆ ಭಾರತ ಸಾಕ್ಷಿಯಾಗಿದೆ.
ಕೋವಿಶೀಲ್ಡ್ ಶೇ. 70.42ರಷ್ಟು ಪರಿಣಾಮಕಾರಿ ಯಾಗಿದ್ದು, ಕೊವ್ಯಾಕ್ಸಿನ್ ಕೂಡ ಸುರಕ್ಷಿತ ಮತ್ತು ಅತ್ಯುತ್ತಮ ರೋಗ ನಿರೋಧಕ ಶಕ್ತಿದಾಯಕ ಎಂದು ಸೊಮಾನಿ ತಿಳಿಸಿದ್ದಾರೆ. ಅಲ್ಪ ಜ್ವರ, ನೋವು ಮತ್ತು ಅಲರ್ಜಿ ಮತ್ತಿತರ ಅಡ್ಡಪರಿಣಾಮಗಳು ಪ್ರತಿಯೊಂದು ಲಸಿಕೆಯಲ್ಲೂ ಇದ್ದೇ ಇರುತ್ತವೆ. ಈಗ ಈ ಎರಡೂ ಲಸಿಕೆಗಳ ನಿರ್ಬಂಧಿತ ಮತ್ತು ತುರ್ತು ಬಳಕೆಗೆ ಅನುಮತಿ ನೀಡಿದ್ದೇವೆ. ಲಸಿಕೆಯ ಪ್ರಯೋಗಗಳೂ ಮುಂದುವರಿಯಲಿವೆ ಎಂದಿದ್ದಾರೆ.
Related Articles
ಎರಡು ಲಸಿಕೆಗಳಿಗೆ ಅನುಮತಿ ನೀಡಿದ ಭಾರತದ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ.
Advertisement
ಮುಂದಿನ ವಾರವೇ ವಿತರಣೆ?ಲಸಿಕೆ ವಿತರಣೆಯ ದಿನಾಂಕ ಪ್ರಕಟವಾಗಿಲ್ಲ. ಮುಂದಿನ ವಾರಾಂತ್ಯದೊಳಗೆ ಈ ಪ್ರಕ್ರಿಯೆ ಆರಂಭ ವಾಗುವ ಸಾಧ್ಯತೆಯಿದೆ. ಸೀರಂ ಇನ್‌ಸ್ಟಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯ 8 ಕೋಟಿ ಡೋಸ್‌ಗಳನ್ನು ದಾಸ್ತಾನಿರಿಸಿದೆ. ಕೊವ್ಯಾಕ್ಸಿನ್ ಲಭ್ಯವಾಗಲು ಕೆಲವು ವಾರ ಬೇಕಾಗಬಹುದು ಎನ್ನಲಾಗಿದೆ. ಕೊರೊನಾ ವಿರುದ್ಧದ ಭಾರತದ ಹೋರಾಟದಲ್ಲಿ ಇದು ನಿರ್ಣಾಯಕ ತಿರುವು. ಈಗ ಅನುಮತಿ ಪಡೆದಿರುವ ಎರಡೂ “ಮೇಡ್ ಇನ್ ಇಂಡಿಯಾ’ ಲಸಿಕೆಗಳು ಎಂಬುದು ಪ್ರತೀ ಭಾರತೀಯನೂ ಹೆಮ್ಮೆ ಪಡುವ ವಿಚಾರ.
– ನರೇಂದ್ರ ಮೋದಿ, ಪ್ರಧಾನಿ