ಮೈಸೂರು: ಕೋವಿಡ್ ಲಸಿಕೆ ಪಡೆದ ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ನಡೆದಿದ್ದು, ಇದರಿಂದ ಕುಪಿತಗೊಂಡ ಮೃತ ಸಂಬಂಧಿಕರು ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಮನೆ ಮನೆಗೆ ಕೋವಿಡ್ ಲಸಿಕೆ ಕಾರ್ಯಕ್ರಮದ ಅಂಗವಾಗಿ ಕೋವಿಡ್ ಲಸಿಕೆಯನ್ನು ಮನೆಮನೆಗೆ ತೆರಳಿ ನೀಡುತ್ತಿದ್ದು, ಲಸಿಕೆ ಪಡೆದ ಸಂದರ್ಭದಲ್ಲಿಯೇವ್ಯಕ್ತಿಯೊಬ್ಬರುಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಮೈಸೂರಿನ ಅಶೋಕಪುರಂ ಬಡಾವಣೆಯಲ್ಲಿ ನಡೆದಿದೆ.
ಈ ಸಾವಿನ ಕುರಿತು ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ, ನ್ಯಾಯ ದೊರಕಿಸಿ ಸೂಕ್ತ ಪರಿಹಾರ ನೀಡಬೇಕೆಂದು ಮೈಸೂರಿನ ಕೆ.ಆರ್. ಆಸ್ಪತ್ರೆಯ ಗೇಟ್ ಬಳಿ ಮೃತನ ಕುಟುಂಬಸ್ಥರೊಂದಿಗೆ ಸೇರಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ನ.12ರಂದು ಮೈಸೂರಿನ ಅಶೋಕಪುರಂ ಬಡಾವಣೆಯಲ್ಲಿ ಕೋವಿಡ್ ಲಸಿಕೆ ನೀಡುವ ನಿಮಿತ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮನೆಮನೆಗೆ ತೆರಳಿ ಲಸಿಕೆ ನೀಡುವ ಸಂದರ್ಭದಲ್ಲಿ 6ನೇ ಕ್ರಾಸ್ ಮನೆಯ ನಂ.2225 ರಲ್ಲಿ ವಾಸವಾಗಿರುವ ದಿ. ಮಾದಯ್ಯ ಅವರ ಪುತ್ರ 39 ವರ್ಷದ ಸುರೇಶ್ ಅವರಿಗೆ ಕೋವಿಡ್ ಲಸಿಕೆಯನ್ನು ನೀಡಿದ್ದು, ಲಸಿಕೆ ನೀಡಿದ 10 ನಿಮಿಷದಲ್ಲಿ ಸುರೇಶ್ ಅವರ ಬಾಯಿ ಮತ್ತು ಮೂಗಿನಮೂಲಕ ರಕ್ತಸ್ರಾವ ಉಂಟಾಗಿ ತೀವ್ರಅಸ್ವಸ್ಥಗೊಂಡಿದ್ದರು. ತಕ್ಷಣವೇ ಲಸಿಕೆ ನೀಡಿದ್ದ ಸಿಬ್ಬಂದಿಯವರೇ ಮತ್ತೂಂದು ಚುಚ್ಚುಮದ್ದನ್ನು ನೀಡಿದ್ದು, ತದನಂತರ ಸುರೇಶ ಅವರು ಮತ್ತಷ್ಟು ಆಸ್ಥತ್ವಗೊಂಡಿದ್ದರು.
ಈ ಸಂದರ್ಭದಲ್ಲಿ ಇವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ನ.14 ಭಾನುವಾರ ಸಂಜೆ5.45 ಸಮಯದಲ್ಲಿ ಮೃತ ಪಟ್ಟಿದ್ದಾರೆ. ಇವರುಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದು, ಇವರಿಗೆ ವಯಸ್ಸಾದ ತಾಯಿ ಹಾಗೂ ಇಬ್ಬರು ಸಹೋದರರಿದ್ದು, ಇವರ ಕುಟುಂಬಕ್ಕೆ ಮೃತ ಪಟ್ಟ ವ್ಯಕ್ತಿಯೇ ಆಧಾರಸ್ತಂಭವಾಗಿದ್ದರು ಎಂದು ಹೇಳಿದರು.
ಈ ಸಾವಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಬ್ಬಂದಿ , ಜಿಲ್ಲಾಡಳಿತ ನೇರ ಹೊಣೆಗಾರರಾಗಿರುತ್ತಾರೆ. ಇವರುಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ತಪ್ಪಿತಸ್ಥರಮೇಲೆ ಸೂಕ್ತಕಾನೂನುಕ್ರಮ ಕೈಗೊಂಡು ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯ ದೊರಕಿಸಿ ಮತ್ತು ಸೂಕ್ತ ಪರಿಹಾರ ನೀಡಬೇಕೆಂದು ಮೃತನ ತಾಯಿ ಮಹದೇವಮ್ಮ ಮತ್ತು ಕುಟುಂಬಸ್ಥರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಿದರು.