Advertisement
ಶುಕ್ರವಾರದ ಮೆಗಾ ಲಸಿಕೆ ಮೇಳಕ್ಕೆ ಪೂರ್ವಭಾವಿಯಾಗಿ ಗುರುವಾರ ಜಿಲ್ಲಾಡಳಿತದಿಂದ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೂಸ್ಟರ್ ಡೋಸ್ ಕುರಿತೂ ಅಧ್ಯಯನ ನಡೆಯುತ್ತಿದ್ದು ಸರಕಾರ ಸೂಕ್ತ ನಿರ್ಧಾರ ತಳೆಯಲಿದೆ. ಹಿಂದೆ ಗರ್ಭಿಣಿಯರಿಗೆ ಅನುಮತಿ ಕೊಟ್ಟಿರಲಿಲ್ಲ. ಅನಂತರ ಕೊಟ್ಟರು. ವೈದ್ಯಕೀಯ ಸಾಕ್ಷ್ಯಾಧಾರದಿಂದ ನೀತಿಗಳನ್ನು ನಿರೂಪಿಸಲಾಗುತ್ತದೆ ಎಂದರು.
Related Articles
Advertisement
ಸಹಾಯವಾಣಿ :
ಸೆ. 17ರಂದು ನಡೆಯುವ ಲಸಿಕಾ ಮೇಳದಲ್ಲಿ ಲಸಿಕೆ ಲಭ್ಯತೆ ಇತ್ಯಾದಿ ವಿವರಗಳಿಗೆ ಸಾರ್ವಜನಿಕರು 96639 57222 ಸಂಖ್ಯೆಗೆ ಕರೆ ಮಾಡಬಹುದು. ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಜಿಲ್ಲೆಯ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು.
ಪ್ರಮುಖ ಅಂಶಗಳು:
- ಪೆನ್ಸಿಲಿನ್ ಟ್ಯಾಬ್ಲೆಟ್, ಇಂಜೆಕ್ಷನ್ ತೆಗೆದುಕೊಂಡರೆ ಸಮಸ್ಯೆ ಇರುತ್ತದೆ. ಆದ್ದರಿಂದ ಲಸಿಕೆ ಪಡೆಯಬಹುದೆ ಎಂಬ ಪ್ರಶ್ನೆಗೆ, ಸಾಮಾನ್ಯವಾಗಿ ಇಂತಹ ಸಮಸ್ಯೆ ಇದ್ದಾಗ ಲಸಿಕೆ ಪಡೆಯಬಾರದು. ಆದ್ದರಿಂದ ಎಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರೋ ಅಲ್ಲಿನ ವೈದ್ಯರ ಸಲಹೆ ಪಡೆದು ಲಸಿಕೆ ಪಡೆಯಬಹುದು.
- ಹೃದಯದಲ್ಲಿ ಬ್ಲಾಕ್, ಮಧುಮೇಹ ಸಮಸ್ಯೆ ಇದೆ. ಟಿಬಿ ಬಂದು ಗುಣವಾಗಿದೆ. ಲಸಿಕೆ ಪಡೆಯಬಹುದೆ ಎಂಬ ಪ್ರಶ್ನೆಗೆ, ಹೃದಯದ ಬ್ಲಾಕ್ ಇದ್ದಾಗ ರಕ್ತ ಹೆಪ್ಪುಗಟ್ಟುವಿಕೆಗೆ ಔಷಧ ಕೊಡುತ್ತಾರೆ. ಇಂತಹ ಸಂದರ್ಭ ಚಿಕಿತ್ಸೆ ನೀಡುವ ವೈದ್ಯರಲ್ಲಿ ಸಲಹೆ ಪಡೆಯಬೇಕು. ಮಧುಮೇಹ, ರಕ್ತದೊತ್ತಡ ಇದ್ದವರು, ಟಿಬಿ ಬಂದು ಗುಣವಾದವರು ಲಸಿಕೆ ಪಡೆಯಬಹುದು.
- ಮೊದಲ ಲಸಿಕೆ ಪಡೆದು ನಿಖರವಾಗಿ 84 ದಿನಗಳ ಬಳಿಕವೇ ಪಡೆಯಬೇಕೆ ಎಂಬ ಸಂಶಯಕ್ಕೆ, ಹೌದು. ಒಂದೆರಡು ದಿನ ಮುಂಚಿತವಾಗಿ ಹೋದರೂ ಕೋವಿನ್ ಆ್ಯಪ್‌ನಲ್ಲಿ ಸ್ವೀಕಾರ ಆಗುವುದಿಲ್ಲ. ಆದ್ದರಿಂದ 84 ದಿನಗಳ ಬಳಿಕವೇ ಲಸಿಕೆ ಪಡೆಯಬೇಕು.
- ಲಸಿಕಾ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಕಡ್ಡಾಯವೆ ಎಂಬ ಪ್ರಶ್ನೆಗೆ, ಜ್ವರ, ಶೀತ, ನೆಗಡಿ ಇರುವವರಿಗೆ ಕೋವಿಡ್ ಪಾಸಿಟಿವ್ ಇರುವ ಸಾಧ್ಯತೆಗಳಿರುವುದರಿಂದ ಅವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಪರೀಕ್ಷೆ ನಡೆಸಲಾಗುತ್ತದೆ.
- ಎರಡನೆಯ ಡೋಸ್‌ಗೆ ಮೆಸೇಜ್ ಬರುತ್ತಿಲ್ಲ ಎಂಬ ಸಂದೇಹಕ್ಕೆ, ಸಂದೇಶ ಬಾರದಿದ್ದರೂ ಮೊದಲ ಡೋಸ್ ತೆಗೆದುಕೊಂಡ 84 ದಿನಗಳ ಬಳಿಕ ಪಡೆಯಬಹುದು. ಮೊದಲ ಬಾರಿ ತೆಗೆದುಕೊಂಡ ದಾಖಲಾತಿ ಇರುತ್ತದೆ.