ಹೊಸದಿಲ್ಲಿ/ಬೀಜಿಂಗ್: ಮುಂದಿನ ತಿಂಗಳಿನಿಂದ 12-17 ವಯೋಮಿತಿ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಸರಕಾರ ತೀರ್ಮಾನಿಸುವ ಸಾಧ್ಯತೆಗಳು ಇವೆ. ವಿಶೇಷವಾಗಿ ಬೊಜ್ಜು, ಹೃದಯ ಸಂಬಂಧಿ ಸೇರಿದಂತೆ ಇತರ ಆರೋಗ್ಯ ಸಮಸ್ಯೆ (ಕೊ ಮಾರ್ಬಿಡಿಟಿ) ಇರುವ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸಮಾಲೋಚನೆಗಳು ನಡೆದಿವೆ. ಮೂಲಗಳ ಪ್ರಕಾರ ಅಕ್ಟೋಬರ್-ನವೆಂಬರ್‌ನಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಝೈಡಸ್ ಕ್ಯಾಡಿಲಾ ಸಂಸ್ಥೆ ಮಕ್ಕಳಿಗಾಗಿ ನೀಡುವ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಶನಿವಾರವೂ ಕೆಲಸ: ಕೊರೊನಾ ಹಿನ್ನೆಲೆಯಲ್ಲಿ ಇದ್ದ ಕಠಿನ ನಿಯಮಗಳು ತೆರವುಗೊಂಡ ಹಿನ್ನೆಲೆಯಲ್ಲಿ ಕೇರಳದಲ್ಲಿ ಶನಿವಾರವೂ ಕೂಡ ಕೆಲಸದ ದಿನ ಎಂದು ರಾಜ್ಯ ಸರಕಾರ ತೀರ್ಮಾನಿಸಿದೆ. ಸೋಂಕು ಇಳಿಕೆ: ದೇಶದಲ್ಲಿ 24 ಗಂಟೆಗಳಲ್ಲಿ 25,404 ಹೊಸ ಸೋಂಕು ಮತ್ತು 339 ಮಂದಿ ಅಸುನೀಗಿದ್ದಾರೆ.
ಸ್ವಯಂ ಕ್ವಾರಂಟೈನ್: ಸ್ನೇಹಿತರ ಪೈಕಿ ಕೆಲವರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸ್ವಯಂ ಕ್ವಾರಂಟೈನ್‌ನಲ್ಲಿ ಇದ್ದಾರೆ. ಸ್ಪುಟ್ನಿಕ್ ವಿ ಲಸಿಕೆಯ ಸಂಪೂರ್ಣ ಡೋಸ್ ಪಡೆದಿರುವ ಅವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ.