Advertisement

ಲಸಿಕೆ: ರಾಜ್ಯದಲ್ಲೇ ಗರಿಷ್ಠ : 11.80 ಲಕ್ಷ ಮಂದಿಗೆ ಒಂದೇ ದಿನ ಲಸಿಕೆ

12:24 AM Sep 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬುಧವಾರ ನಡೆದ ಲಸಿಕೋತ್ಸವಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ. ಒಂದೇ ದಿನ 11.80 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಬಿಬಿಎಂಪಿ ವ್ಯಾಪ್ತಿಯೊಂದರಲ್ಲೇ 1.84 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.

Advertisement

ಹಾಗೆಯೇ ಬುಧವಾರ ದೇಶದಲ್ಲಿ 78 ಲಕ್ಷ ಮಂದಿಗೆ ಲಸಿಕೆ ಹಾಕಲಾಗಿದ್ದು, ರಾಜ್ಯವೇ ಮೊದಲ ಸ್ಥಾನದಲ್ಲಿದೆ. ಬುಧವಾರ 15 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಸರಕಾರ ಹಾಕಿಕೊಂಡಿತ್ತು. ಅಂತಿಮವಾಗಿ 11.80 ಲಕ್ಷ ಮಂದಿಗೆ ಲಸಿಕೆ ಕೊಡುವಲ್ಲಿ ಸರಕಾರ ಯಶಸ್ವಿಯಾಗಿದೆ. ರಾತ್ರಿ 9ರ ವರೆಗೆ ನೀಡಲಾಗಿದೆ.

ಬುಧವಾರ ಅತೀ ಹೆಚ್ಚು

ಲಸಿಕೆ ನೀಡಿದ ಜಿಲ್ಲೆಗಳು :

ಜಿಲ್ಲೆಗಳು          ಡೋಸ್‌ಗಳು

Advertisement

ಬೆಳಗಾವಿ         94,000

ಮಂಡ್ಯ            71,000

ಮೈಸೂರು        50,000

ದಕ್ಷಿಣ ಕನ್ನಡ  50,000

ಕಲಬುರಗಿ, ಚಿಕ್ಕಮಗಳೂರು      42,000

ಚಿಕ್ಕಬಳ್ಳಾಪುರ, ಹಾವೇರಿ, ತುಮಕೂರು 38,000

Advertisement

Udayavani is now on Telegram. Click here to join our channel and stay updated with the latest news.

Next