Advertisement
ಹೌದು, ಸೋಂಕು ಹತೋಟಿಯಲ್ಲಿ ಲಸಿಕೆ ಭಾರೀ ಪ್ರಭಾವ ಬೀರಿದೆ. ಬೆಂಗಳೂರಿನಲ್ಲಿ ಶೇ. 88ರಷ್ಟು ಲಸಿಕೆ (ಮೊದಲ ಡೋಸ್) ಗುರಿ ಸಾಧನೆಯಾಗಿದ್ದರ ಪರಿಣಾಮ ಕಳೆದ ಎರಡು ವಾರದಿಂದ ಸೋಂಕು ತಗಲಿದ್ದವರ ಪೈಕಿ ಶೇ. 3ರಷ್ಟು ಮಂದಿ ಮಾತ್ರ ಆಸ್ಪತ್ರೆ ದಾಖಲಾಗಿದ್ದಾರೆ.
Related Articles
Advertisement
ಲಸಿಕೆ ಪಡೆದವರಲ್ಲಿಯೂ ಸೋಂಕು ಕಂಡು ಬರುತ್ತಿರುವುದಕ್ಕೆ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಲಸಿಕೆ ಮೊದಲ ಡೋಸ್ ಅಥವಾ ಎರಡೂ ಡೋಸ್ ಪಡೆದಿದ್ದೇನೆ ಎಂದು ಮಾಸ್ಕ್, ಸಾ ಮಾಜಿಕ ಅಂತರ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವುದರಿಂದ ಸೋಂಕು ತಗಲುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಲಸಿಕೆ ಪಡೆದ ಬಹುತೇಕರಿಗೆ ಸೋಂಕಿನ ಗಂಭೀರ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ, ಮನೆ ಆರೈಕೆಯಲ್ಲಿದ್ದಾರೆ. ಇನ್ನು ಲಸಿಕೆ ಪಡೆದ ಯಾವ ರೋಗಿಯು ಐಸಿಯು ದಾಖಲಾಗಿಲ್ಲ – ಡಾ| ವಿಜಯೇಂದ್ರ, ಮುಖ್ಯ ಆರೋಗ್ಯಾಧಿಕಾರಿ, ಬಿಬಿಎಂಪಿ