Advertisement
ಜ.16ರಿಂದ ಕೋವಿಶಿಲ್ಡ್ ಲಸಿಕೆ ಹಾಕುವ ಕಾರ್ಯ ಭರದಿಂದ ಸಾಗಿದ್ದು, ಆದರೆ ಲಸಿಕೆ ಪಡೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದವರಿಂದಲೇ ನಿರಾಸಕ್ತಿ ವ್ಯಕ್ತವಾಗಿದೆ. ಈವರೆಗೆ ನಿಗದಿತ ತಲುಪಲಾಗಿಲ್ಲವಾದರೂ ಶೇ.46ರಷ್ಟು ಸಾಧನೆ ಮಾತ್ರವೇ ಆಗಿದ್ದು, ಕೋವಿಶಿಲ್ಡ್ ಲಸಿಕಾಕರಣಕ್ಕೆ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗದಂತಾಗಿದೆ.
Related Articles
Advertisement
ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು: ಜಿಲ್ಲೆಗೆ ಎರಡು ಹಂತದಲ್ಲಿ ಒಟ್ಟು 28,380 ಲಸಿಕೆ ಬಂದಿದ್ದು, ಈ ಪೈಕಿ ಡಿಎಚ್‌ಒ ಆವರಣದಲ್ಲಿರುವ ಲಸಿಕಾ ಉಗ್ರಾಣದಲ್ಲಿ 10,520 ಲಸಿಕೆ ಹೊರತುಪಡಿಸಿ ಉಳಿದ ಲಸಿಕೆಗಳನ್ನು ಲಸಿಕೆ ಹಾಕುವ ಕೇಂದ್ರಗಳಿಗೆ ರವಾನಿಸಲಾಗಿದೆ. ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಸೇರಿ ಒಟ್ಟು 89 ಕೇಂದ್ರಗಳಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಸಾಗಿದ್ದು, ಇದರಲ್ಲಿ ಜ.16ರಿಂದ ಜ.27ರವರೆಗೆ ಅಂದರೆ 12 ದಿನಗಳ ಪೈಕಿ 10 ದಿನ ಲಸಿಕೆ ಹಾಕುವ ಕಾರ್ಯವಾಗಿದೆ. ಈ ಹತ್ತು ದಿನಗಳಲ್ಲಿ ಲಸಿಕೆ ಹಾಕಿಸಿಕೊಂಡವರಿಗಿಂತ ಲಸಿಕೆ ಹಾಕಿಸಿಕೊಳ್ಳದೆ ಹೊರಗುಳಿದವರೇ ಹೆಚ್ಚು.
ಹೆಸರು ನೋಂದಣಿ ಆಗಿರುವ 27,669 ಜನರ ಪೈಕಿ ಈವರೆಗೆ 18,471 ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ಸಮಯ ನಿಗದಿ ಮಾಡಿ, ಅವರಿಗೆ ಹಿಂದಿನ ದಿನವೇ ಸಂದೇಶ ರವಾನಿಸಲಾಗಿತ್ತು. ಆದರೆ ಈವರೆಗೆ 8560 ಜನರಷ್ಟೇ ಲಸಿಕೆ ಹಾಕಿಸಿಕೊಂಡಿದ್ದರೆ 9911 ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ:ಅನುಷ್ಠಾನವಾಗುತ್ತಾ ಕೈಗಾರಿಕಾ ಕಾರಿಡಾರ್?
ಆರೋಗ್ಯ ಕಾರ್ಯಕರ್ತರಿಂದಲೇ ನಿರಾಸಕ್ತಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಯಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರಿಗೂ ಅವಕಾಶ
ಕಲ್ಪಿಸಲಾಗಿದೆ. ಆದರೆ ಲಸಿಕೆ ಬಗ್ಗೆ ಇವರಲ್ಲಿಯೇ ಗೊಂದಲ-ಆತಂಕ ಇರುವಂತಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಈವರೆಗೆ ನಿಗದಿ ಮಾಡಿದ್ದ ಜನರ ಪೈಕಿ ಶೇ.50ಕ್ಕಿಂತಲೂ ಹೆಚ್ಚು ಜನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆಯ ಅಡ್ಡ ಪರಿಣಾಮಗಳ ಆತಂಕ, ಗೊಂದಲ ನಿವಾರಣೆಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಸ್ವಯಂ ಲಸಿಕೆ ಹಾಕಿಸಿಕೊಂಡು ಆತ್ಮಸ್ಥೆರ್ಯ ತುಂಬವ ಕಾರ್ಯ ಮಾಡಿದ್ದಾರೆ. ಇಷ್ಟಾದರೂ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ.
ಶಶಿಧರ್ ಬುದ್ನಿ