ಕೆಜಿಎಫ್: ನಗರದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ಅತ್ಯಂತ ಕಡಿಮೆ ಇದೆ. ಜನರನ್ನು ಒಂದುಗೂಡಿಸಿ, ಲಸಿಕೆಹಾಕುವ ಕಾರ್ಯಕ್ರಮವನ್ನು ಹೆಚ್ಚುಮಾಡುವ ಕೆಲಸ ಆಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಸೆಲ್ವಮಣಿ ಹೇಳಿದರು.
ನಗರಸಭೆಯಲ್ಲಿ ನಡೆದ ನಗರಸಭೆ ಸದಸ್ಯರ ಸಭೆಯಲ್ಲಿ ಮಾತನಾಡಿ, ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಜನಸಂಖ್ಯೆ ಇದೆ. ವಾರ್ಡ್‌ಗಳಲ್ಲಿರುವ ಜನರನ್ನು ಹೇಗೆ ಕೇಂದ್ರಕ್ಕೆ ಕರೆತಂದು, ಲಸಿಕೆ ಹಾಕುತ್ತಾರೆ ಎಂಬುದನ್ನು ಅರಿಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಲಸಿಕೆ ಹಾಕಲಾಗುತ್ತಿದೆ ಎಂದರು.
ಮುಳಬಾಗಲು ತಾಲ್ಲೂಕಿನಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ.60 ವರ್ಷ ಮೇಲ್ಪಟ್ಟವರಿಗೆ ಲಸಿಕೆಹಾಕುತ್ತಿದ್ದಾರೆ. ಐಸಿಯುನಲ್ಲಿ ಇರುವವರು ಎರಡು ಡೋಸ್ ತೆಗೆದುಕೊಂಡವರು ಇಲ್ಲ ಎಂದುವೈದ್ಯರು ಹೇಳುತ್ತಾರೆ. ಈಗ ನಗರಸಭೆ ಆಯುಕ್ತೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ. ಬೇಕಾದ ಸಿದ್ಧತೆ ಹೇಗೆ ರೂಪಿಸಿದ್ದೀರಿ ಎಂದು ಪ್ರಶ್ನಿಸಿದರು.
35 ವಾರ್ಡ್‌ಗಳಲ್ಲಿ ಲಸಿಕೆ ಹಾಕುವಕೆಲಸ ಮಾಡಲಿಕ್ಕೆ ಆಗುವುದಿಲ್ಲ. ನಮ್ಮಲ್ಲಿಅಷ್ಟೊಂದು ಸಂಖ್ಯೆಯ ಸಿಬ್ಬಂದಿ ಇಲ್ಲ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಗರಸಭೆಪೌರಕಾರ್ಮಿಕರನ್ನು ಉಪಯೋಗಿಸಿ ಕೊಳ್ಳಬೇಕು. ನಗರಸಭೆ ಸದಸ್ಯರು ಸಹಕಾರ ನೀಡಬೇಕು ಎಂದರು.
60 ವರ್ಷ ಮೇಲ್ಪಟ್ಟು ಜನಸಂಖ್ಯೆಇರುವ ಪ್ರದೇಶಗಳನ್ನು ಗುರುತಿಸಿ. ಒಂದು ವಾರ್ಡ್‌ಗೆ ಎರಡು ಅಥವಾಮೂರು ದಿನ ತೆಗೆದುಕೊಳ್ಳಬಹುದು. ಐದು ತಂಡ ಮಾಡಿದರೆ, ಒಂದೂವರೆ ತಿಂಗಳಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಲಸಿಕೆ ಮಾಡಬಹುದು. ಸೋಮವಾರದಿಂದ ಆರಂಭಿಸಿ ಎಂದು ತಿಳಿಸಿದರು. ಡಿವೈಎಸ್‌ಪಿ ಬಿ.ಕೆ.ಉಮೇಶ್, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ತಹಶೀಲ್ದಾರ್ ಕೆ.ಎನ್.ಸುಜಾತ, ಆಯುಕ್ತೆ ಸರ್ವರ್ ಮರ್ಚೆಂಟ್ ಹಾಜರಿದ್ದರು.