Advertisement
ಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಗೂ ವಿವಿಧ ತಾಲೂಕು ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಪ್ರಥಮ ಹಂತದಲ್ಲಿ ಲಸಿಕೆ ಪಡೆದ ಮುಂಚೂಣಿ ಆರೋಗ್ಯ ಕಾರ್ಯಕರ್ತರು ನಿಗದಿತ ಅವಧಿಗೆ 2ನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಪಂಚಾಯತ್ ಸದಸ್ಯರಿಗೆ ಲಸಿಕೆ ನೀಡಿ ಗ್ರಾಮದ ಇತರರು ಲಸಿಕೆ ಪಡೆಯಲು ಪ್ರೇರೇಪಿಸಬೇಕು. ಅದೇ ರೀತಿ, ಪಟ್ಟಣ ಪ್ರದೇಶದ ವಾರ್ಡ್ ಸದಸ್ಯರಿಗೆ ಲಸಿಕೆ ನೀಡುವುದರಮೂಲಕ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸಮೂಡಿಸುವ ಕಾರ್ಯದೊಂದಿಗೆ ಲಸಿಕೆಪ್ರಕ್ರಿಯೆ ತೀವ್ರಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಗೊಂದು ಗೋಶಾಲೆ ಆರಂಭಿಸುವಂತೆ ಸರ್ಕಾರದ ಆದೇಶವಾಗಿದ್ದು ಗೋಶಾಲೆ ಆರಂಭಕ್ಕೆ 20ರಿಂದ 25ಎಕರೆ ಜಮೀನು ಇರಬೇಕು. ಹಾಗೂ ನೀರಿನ ಸೌಕರ್ಯ ದೊರೆಯುವಂತಹ ಸ್ಥಳಗಳಲ್ಲಿಗೋಶಾಲೆ ನಿರ್ಮಾಣಕ್ಕೆ ಮುಂದಾಗುವಂತೆ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಮನಗೂಳಿ ಅವರಿಗೆ ಸೂಚಿಸಿದರು.
ಪಿ.ಎಂ.ಸ್ವ ನಿಧಿ ಯೋಜನೆಯ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಪ್ರಗತಿ ಕುಂಠಿತವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಫ್ರೊಟ್ ತಂತ್ರಾಂಶ ನೋಂದಣಿಯಲ್ಲಿ ನರಗುಂದ ತಾಲೂಕು ಉತ್ತಮ ಸಾಧನೆಗೈದಿದ್ದು, ಉಳಿದ ತಾಲೂಕುಗಳಲ್ಲಿಯೂ ನೊಂದಣಿ ಕಾರ್ಯ ಪೂರ್ಣಗೊಳಿಸುವಂತೆ ಹೇಳಿದರು.
ಭೂಮಿ ಯೋಜನೆಯಡಿ ರಾಜ್ಯದಲ್ಲಿ ಗದಗ ಜಿಲ್ಲೆ 5 ನೇ ಸ್ಥಾನದಲ್ಲಿದೆ ತಾಲೂಕಾ ಮಟ್ಟದಲ್ಲಿ ಭೂಮಿ ಯೋಜನೆ ಅನುಷ್ಟಾನ ಇನ್ನೂ ಹೆಚ್ಚಿನ ಪ್ರಗತಿ ಸಾಸ ಬೇಕೆಂದರು. ಕಂದಾಯ ನಿರೀಕ್ಷಕರು ಭೂಮಿಅನುಷ್ಠಾನದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ .ಅಂತಹವರನ್ನು ಗುರುತಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ. ಮಾತನಾಡಿ, ಸಕಾಲ ಯೋಜನೆಯಡಿ 83 ಕಚೇರಿಗಳಲ್ಲಿ ಶೂನ್ಯ ಅರ್ಜಿ ಸ್ವೀಕೃತವಾಗುತ್ತಿವೆ.ಸಂಬಂಧಪಟ್ಟ ಇಲಾಖೆಗಳು ಸಕಾಲದಲ್ಲಿ ಅರ್ಜಿ ಸ್ವೀಕರಿಸಿ, ವಿಲೇವಾರಿ ಮಾಡಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿ.ಡಿ.ಎಲ್.ಆರ್. ರವಿಕುಮಾರ್,ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಅನಿಲಕುಮಾರ್ ಮುದ್ದಾ, ಡಿಎಚ್‌ಒ ಡಾ|ಸತೀಶಬಸರಿಗಿಡದ, ನಗರಸಭೆ ಪೌರಾಯುಕ್ತ ರಮೇಶಜಾಧವ ಸೇರಿದಂತೆ ತಹಶೀಲ್ದಾರ್‌ರು,ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರುಹ