ಚಾಮರಾಜನಗರ: ಕೋವಿಡ್ 2ನೇ ಅಲೆ ತಡೆಯಲು ಜಿಲ್ಲೆಯ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಕಾರ್ನರ್ ತೆರೆಯುವಂತೆ ಆರೋಗ್ಯ ಇಲಾಖೆಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಕೋವಿಡ್ ನಿರ್ವಹಣೆಗಾಗಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸೂಕ್ಷ್ಮಗ್ರಾಹಿ ಯೋಜನೆರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಪ್ರತಿಹೋಬಳಿಗಳನ್ನು ಕೇಂದ್ರವಾಗಿರಿಸಿ ಲಸಿಕಾ ಕಾರ್ನರ್ ಸ್ಥಾಪಿಸಿ 45 ವರ್ಷ ಮೇಲ್ಪಟ್ಟ ಯಾವ ವ್ಯಕ್ತಿ ಕೂಡ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.
ಲಸಿಕಾ ಕಾರ್ನರ್ ಅನ್ನು ಆಯಾ ಹೋಬಳಿಯ ಶಾಲೆ ಅಥವಾ ಸಮುದಾಯ ಭವನಗಳಲ್ಲಿ ತೆರೆಯ ಬಹುದಾಗಿದೆ.ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಪಂನಲ್ಲೂ ಅದರಲ್ಲೂ ವಿಶೇಷವಾಗಿ ಸಂತೆ, ಜಾತ್ರೆನಡೆಯುವ ಸಂದರ್ಭದಲ್ಲಿ ಲಸಿಕಾ ಕಾರ್ನರ್ ಕೇಂದ್ರದ ಬಗ್ಗೆ ಮೈಕ್ ಮೂಲಕ ಪ್ರಚಾರ ನಡೆಸಬೇಕು ಎಂದರು.
ಜನರು ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಳ್ಳದಿದ್ದರೆ ಅಂತಹವರಿಗೆ ದಂಡ ವಿಧಿಸಬೇಕು. ನಗರಸಭೆ, ಪೊಲೀಸ್ ಅಧಿಕಾರಿಗಳು ಸಹಾಯಕ್ಕಾಗಿ ಗೃಹರಕ್ಷಕ ದಳ ಸಿಬ್ಬಂದಿ,ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಸೇವಾದಳ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನಿಯೋಜಿಸಿಕೊಳ್ಳಬೇಕು. ಈ ಕಾರ್ಯಕ್ಕಾಗಿ ಡಿ-ರ್ಯಾಟ್ಸ್ ತಂಡ ಮತ್ತು ಮಾಜಿ ಸೈನಿಕರನ್ನು ಒಳಗೊಂಡಂತೆ ಕೋವಿಡ್ (ಸುರಕ್ಷಾ) ಎನ್‌ಫೋರ್ಸ್‌ಮೆಂಟ್ ತಂಡವನ್ನಾಗಿ ರಚಿಸಬೇಕು ಎಂದರು.
ಡೀಸಿಗೆ ಕೋವಿಡ್ ಇದ್ದರೂ ವಿಡಿಯೋ ಸಂವಾದ :
ಕೋವಿಡ್ ಸೋಂಕು ತಗುಲಿ ಹೋಂ ಐಸೋಲೇಷನ್ ನಲ್ಲಿರುವ ಜಿಲ್ಲಾಧಿಕಾರಿ ಡಾ. ರವಿ ಅವರುಮನೆಯಿಂದಲೇ ಕರ್ತವ್ಯ ನಿರ್ವಹಿಸಿದರು. ಮಂಗಳವಾರ ವಿಡಿಯೋ ಸಂವಾದದ ಮೂಲಕ ಎರಡು ಮೀಟಿಂಗ್ ನಡೆಸಿದರು. ಅಗತ್ಯ ಕೆಲಸಗಳಿಗೆ ದೂರವಾಣಿ ಮೂಲಕ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಕೋವಿಡ್ ಇದ್ದರೂ ಕರ್ತವ್ಯ ಪ್ರಜ್ಞೆ ಮೆರೆದರು. ಜಿಲ್ಲಾಧಿಕಾರಿ ಚೇತರಿಸಿಕೊಳ್ಳುತ್ತಿದ್ದು, ಹೋಂ ಐಸೋಲೇಷನ್ ಪ್ರೋಟೋಕಾಲ್ ಪ್ರಕಾರಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಆರೋಗ್ಯಸ್ಥಿರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ.ರವಿ ತಿಳಿಸಿದರು.