Advertisement
ನಗರದ ಮಿನಿ ವಿಧಾನ ಸೌಧದಲ್ಲಿ ಸೋಮವಾರ ಸಭೆ ನಡೆಸಿ, 1200ರಷ್ಟು ಜನರು 60 ವರ್ಷ ಮೇಲ್ಪಟ್ಟವರು ಇದ್ದರೂ ಕೇವಲ 30-40 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.ಉಳಿದ ಸಮುದಾಯವದರು ಶೇ. 60ರಷ್ಟು ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಹಿನ್ನಡೆ ಸರಿಯಲ್ಲ. ಸರಿಯಾದಜಾಗೃತಿ ಮೂಡಿಸಿ ಎಲ್ಲರಿಗೂ ಲಸಿಕೆ ಕೊಡಿಸಿ ಆರೋಗ್ಯರಕ್ಷಣೆ ಮಾಡಿಸಬೇಕಾದದ್ದು ಪ್ರಮುಖರ ಜವಾಬ್ದಾರಿ ಎಂದು ಮನವಿ ಮಾಡಿದರು.
Related Articles
Advertisement
ಪಣಜಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಹೋಳಿ, ಈದ್, ಈಸ್ಟರ್‌ನಂತಹ ಕಾರ್ಯಕ್ರಮ ನಿರ್ಬಂಧಿ ಸಿರುವ ಸರ್ಕಾರ ನೈಟ್ ಕ್ಲಬ್, ಕ್ಯಾಸಿನೊಗಳಿಗೆ ಏಕೆ ನಿರ್ಬಂಧ ಹೇರಿಲ್ಲ ಎಂದು ಗೋವಾ ಆಮ್ ಆದ್ಮಿ ಪಕ್ಷದ ಪ್ರಮುಖ ರಾಹುಲ್ ಮಾಮ್ರೆ ಗೋವಾ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಏಕೆ ನಿರ್ಬಂಧ ಹೇರಿದೆ ಎಂದು ಅರ್ಥವಾಗುತ್ತಿಲ್ಲ. ವಾಣಿಜ್ಯೋದ್ಯಮಗಳಿಗೆ ಯಾವುದೇ ನಿರ್ಬಂಧವಿಲ್ಲ. ವಾಣಿಜ್ಯ ಕಾರ್ಯಕ್ರಮದ ಸಂಘಟಕರು ಆಡಳಿತ ಪಕ್ಷದವರ ಜೇಬು ತುಂಬಿಸಿದ್ದಾರೆಯೇ? ಎಂದು ರಾಹುಲ್ ಮಾಮ್ರೆ ಪ್ರಶ್ನಿಸಿದರು.
ವಿಶ್ವದ ಯಾವುದೇ ಸ್ಥಳದಿಂದ ಗೋವಾಕ್ಕೆ ಆಗಮಿಸಬೇಕಾದರೆ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು. ಸದ್ಯ ರಾಜ್ಯದಲ್ಲಿ 144 ನೇ ಕಲಂ ಜಾರಿಗೊಳಿಸಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಮಾರುಕಟ್ಟೆಪ್ರದೇಶದಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದನ್ನು ಕಾಣಬಹುದಾಗಿದೆ ಎಂದರು.